• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚನ್ನಪಟ್ಟಣದ ಇಲ್ಲಿಗರ ದೊಡ್ಡಿಯಲ್ಲಿ 16 ತುಂಬುವಷ್ಟರಲ್ಲೇ ತುಂಬುತ್ತಿದೆ ಹೆಣ್ಣುಮಕ್ಕಳ ಮಡಿಲು

By ರಾಮನಗರ ಪ್ರತಿನಿಧಿ
|

ಚನ್ನಪಟ್ಟಣ, ಡಿಸೆಂಬರ್ 27: ಎಲ್ಲಾ ಅಡೆತಡೆಗಳನ್ನು ದಾಟಿ ಮನುಷ್ಯ ಹೊಸ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಿದ್ದಾನೆ. ಜಗತ್ತು ನಾಗಾಲೋಟದಲ್ಲಿ ಮುಂದೋಡುತ್ತಿದೆ. ಆದರೆ ಇಲ್ಲೊಂದು ಜನಾಂಗ ಮಾತ್ರ ಇನ್ನೂ ಬಾಲ್ಯ ವಿವಾಹವೆಂಬ ಸಾಮಾಜಿಕ ಪಿಡುಗಿನಿಂದ ಹೊರಬರದೇ ಉಳಿದಿದೆ.

ಚನ್ನಪಟ್ಟಣ ತಾಲ್ಲೂಕಿನ ಇಲ್ಲಿಗರ ದೊಡ್ಡಿಯಲ್ಲಿ ಬಾಲ್ಯವಿವಾಹವೆಂಬ ಕೆಟ್ಟ ಪದ್ಧತಿ ಇನ್ನೂ ಮುಂದುವರೆದುಕೊಂಡು ಬಂದಿದೆ. ಇಲ್ಲಿನ ಮೂವರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿದ್ದು, ಇವರು ಬಾಲ್ಯ ವಿವಾಹಕ್ಕೆ ಒಳಗಾಗಿದ್ದರು ಎಂಬ ವಿಷಯ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಬಂಟ್ವಾಳದಲ್ಲಿ ಅಪ್ರಾಪ್ತೆಯ ನಿಶ್ಚಿತಾರ್ಥ ತಡೆದ ಅಧಿಕಾರಿಗಳು

ಇಲ್ಲಿಗರ ದೊಡ್ಡಿ ಗ್ರಾಮದಲ್ಲಿ 14, 15, 16ರ ವಯಸ್ಸಿನ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿಯರಾಗಿದ್ದಾರೆ. ಗ್ರಾಮದಲ್ಲಿ 51 ಕುಟುಂಬ ವಾಸವಾಗಿದ್ದು, ಸುಮಾರು 381 ಜನಸಂಖ್ಯೆ ಇದೆ. ಅವರಲ್ಲಿ 128 ಮಕ್ಕಳು ಇದ್ದಾರೆ.

ಗ್ರಾಮದಲ್ಲಿನ ಅಪ್ರಾಪ್ತ ಗಂಡು ಮಕ್ಕಳು ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳ ನಡುವೆಯೇ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ಜೊತೆಗೆ ಗ್ರಾಮದ ಯಾರೊಬ್ಬರೂ ಸರ್ಕಾರದ ಮಾತೃಶ್ರೀ ಯೋಜನೆ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ ಯೋಜನೆಗಳಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ. ನೋಂದಣಿ ಮಾಡಿಸಿದರೆ ಬಾಲ್ಯ ವಿವಾಹದ ವಿಷಯ ಹೊರಬರುತ್ತದೆ ಎಂಬ ಕಾರಣಕ್ಕೆ ಸರ್ಕಾರದ ಈ ಯೋಜನೆಗಳಿಂದಲೂ ದೂರ ಉಳಿದಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ದಾಳಿಯಿಂದ ಘಟನೆ ಬೆಳಕಿಗೆ ಬಂದಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

English summary
The child marriage still continuing in Illigara Doddi of Channapatna taluk,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X