ಚನ್ನಪಟ್ಟಣ: JDS ಗೆಲ್ಲಲು ಕಾರ್ಯಕರ್ತರು ಹೆಂಡಂದಿರ ಮತ ಗಟ್ಟಿ ಮಾಡ್ಕೊಳ್ಳಿ: HD ಕುಮಾರಣ್ಣನ ಅಭಿಮಾನಿ

ಚನ್ನಪಟ್ಟಣ, ಅಕ್ಟೋಬರ್ 29: ಕರ್ನಾಟಕ ಉಪಚುನಾವಣೆಯಲ್ಲಿ ಕುತೂಹಲದ ಕೇಂದ್ರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು, ಸೋಲಿನ ಲೆಕ್ಕಾಚಾರ ಶುರುವಾಗಿದೆ. ಅಭ್ಯರ್ಥಿಗಳ ಪರ ವಿರೋಧದ ಬಗ್ಗೆ ವ್ಯಾಪಕ ಚರ್ಚೆಗಳನ್ನು ಮತದಾರರು, ಆಯಾ ಪಕ್ಷದ ಅಭಿಮಾನಿಗಳು, ಜನ ಮಾತನಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಅನ್ನು ದೂರ ಸರಿಸಲು ಕಾಂಗ್ರೆಸ್‌ಗೆ ಆಗುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು ರಾಜಕೀಯ ಎಂದ ಮೇಲೆ ಪಕ್ಷಾಂತರ, ಅಧಿಕಾರದಾಸೆ ಸಾಮಾನ್ಯ ಎಂದು ಎರಡು ಪಕ್ಷಗಳ ಕುರಿತು ಜನ ತಿಳಿಸಿದ್ದಾರೆ. ಹಾಗಾದರೆ ಕಣದಲ್ಲಿನ ಯಾರ ಪರ ಒಲವಿದೆ? ವಾಸ್ತವ ಸ್ಥಿತಿ ಹೇಗಿದೆ?.

ನಮಗೆ ಸಿಪಿ ಯೋಗೇಶ್ವರ ಅವರ ಮೇಲೆ ನಂಬಿಕೆ ಇಲ್ಲ. ಅವರು ಪಕ್ಷಾಂತರಿ. ಕಾಂಗ್ರೆಸ್ ಸ್ವಾರ್ಥ ರಾಜಕಾರಣ ಮಾಡುತ್ತಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಅವರ ಕಟ್ಟಾಭಿಮಾನಿ, ಮತ್ತು ಜೆಡಿಎಸ್ ಬೆಂಬಲಿಗರು ತಿಳಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ಪರ ಮತದಾರರು, ರಾಜಕೀಯ ಎಂದ ಮೇಲೆ ಬದಲಾವಣೆ ಸಹಜ. ಎಚ್‌ಡಿಕೆ ಸಿಎಂ ಆಗಿದ್ದಾರೆ. ಕಾಂಗ್ರೆಸ್‌ನಿಂದ ಒಕ್ಕಲಿಗ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವುದಾದರೆ ಕಾಂಗ್ರೆಸ್‌ಗೆ ಬೆಂಬಲ ಎಂದು ಹೇಳುತ್ತಿದ್ದಾರೆ. ಇವರ ಈ ಮಾತು ಜೆಡಿಎಸ್‌ಗೆ ವರವು ಆಗಬಹುದು ಎನ್ನಲಾಗುತ್ತಿದೆ.

Channapatna BtPoll Called to JDS Workers for Mobilise Votes for Nikhil Kumaraswamy s Win

ಗೆಲ್ಲುವ ಅಂತರ ಕೇವಲ 6-7 ಸಾವಿರ ಮತಗಳಷ್ಟೇ

ಚನ್ನಪಟ್ಟಣದಲ್ಲಿ ಗೆಲ್ಲಲು 6000 -7000 ಮತಗಳ ಅಂತರವಷ್ಟೇ ಇವೆ. ಆ ಮತಗಳತ್ತ ಗಮನ ಹರಿಸಬೇಕು. ಮುಸ್ಲಿಂ ಮತಗಳು ಸಹ ಜೆಡಿಎಸ್‌ಗೂ ಬರುತ್ತವೆ. ಆ ವೋಟ್ ತಮಗೆ ಬರುತ್ತವೆ ಎಂದು ಕಾಂಗ್ರೆಸ್‌ಗೆ ಭ್ರಮೆಯಲ್ಲಿದೆ. ದೇವೇಗೌಡರು ಮುಸ್ಲಿಮರ ಮೀಸಲಾತಿ ಪರ ಕೆಲಸ ಮಾಡಿದ್ದಾರೆ ಎಂದು ಜೆಡಿಎಸ್ ಬೆಂಬಲಿಸುವ ಗುಂಪು, ಅಭಿಮಾನಿಗಳು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಕನಕಪುರ ನಾಯಕರು ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅವರು ಜೆಡಿಎಸ್‌ ಅನ್ನು ಅಧಿಕಾರದಿಂದ ಹೊರಗಿಡಲು ಆಗಲ್ಲ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಕೊಡುವ ಗೌರವ ಬೇರೆ, ಡಿಕೆ ಶಿವಕುಮಾರ್ ಅವರಿಗೆ ಕೊಡುವ ಗೌರವ ಬೇರೆ ಇದೆ ಎಂದು ಒಂದಷ್ಟು ವಾಸ್ತವಾಂಶಗಳನ್ನು ಅವರು ಹಂಚಿಕೊಂಡಿದ್ದಾರೆ.

Channapatna BtPoll Called to JDS Workers for Mobilise Votes for Nikhil Kumaraswamy s Win

ಕಾರ್ಯಕರ್ತರು ಹೆಂಡಂದಿರ ಮತ ಗಟ್ಟಿ ಮಾಡ್ಕೊಳ್ಳಿ

ಕುಮಾರಣ್ಣ ರೈತರ ಪರ ಮಾತನಾಡುತ್ತಾರೆ. ಇಷ್ಟು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸದನದಲ್ಲಿ ಯಾರು ರೈತರ ಪರವಾಗಿ ಮಾತನಾಡಿದ್ದಾರೆ. ನಾಲ್ಕು ಭಾರಿ ಗೆದ್ದವರು ಮಾತನಾಡಿಲ್ಲ. ಎದುರಾಳಿಗಳಿಗೂ ಜೆಡಿಎಸ್‌ 6-7 ಸಾವಿರ ಹೆಚ್ಚು ಮತಗಳು ಬೇಕು. ಜೆಡಿಎಸ್ ಕಾರ್ಯಕರ್ತರು ಮೊದಲು ತಮ್ಮ ಮನೆಯ ಮತ ಹೊರ ಹೋಗದಂತೆ ನೋಡಿಕೊಳ್ಳಿ. ಕಾರ್ಯಕರ್ತರು ತಮ್ಮ ಹೆಂಡಂದಿರ ಮತಗಳನ್ನು ಗಟ್ಟಿ ಮಾಡಿಕೊಳ್ಳಬೇಕು ಎಂದು ಎಚ್‌ಡಿಕೆ ಅಭಿಮಾನಿಯೊಬ್ಬರು ತಿಳಿಸಿದ್ದಾರೆ.

ಜೆಡಿಎಸ್ ಕಾರ್ಯಕರ್ತರಿಗೆ ಅಗ್ನಿ ಪರೀಕ್ಷೆ

ಜೆಡಿಎಸ್ ಕಾರ್ಯಕರ್ತರು ಹುಮ್ಮಸ್ಸಿನಲ್ಲಿ ಕೆಲಸ ಮಾಡುವ ಜೊತೆಗೆ ಮತ ಭದ್ರ ಮಾಡಿಕೊಳ್ಳಬೇಕು. ಎಲ್ಲ ಸಮುದಾಯದ ಮನೆ ಮನೆಗೆ ತೆರಳಬೇಕು. ಆರೇಳು ಸಾವಿರ ಮತಗಳ ಬರಲು ಏನು ಬೇಕು? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಂದಾಗ ಪಕ್ಷ ಗೆಲ್ಲಲಿದೆ. ನಿಖಿಲ್ ಗೆಲ್ಲಿಸಲು ಜೆಡಿಎಸ್ ಕಾರ್ಯಕರ್ತರಿಗೆ ಇದೊಂದು ಅಗ್ನಿ ಪರೀಕ್ಷೆ ಎಂದು ಸ್ಥಳೀಯರು ವ್ಯಾಖ್ಯಾನಿಸಿದ್ದಾರೆ.

ಬಿಜೆಪಿ ಮೈತ್ರಿಧರ್ಮ ಕಾಯ್ದುಕೊಂಡು ಮತ ಸೆಳೆಯಬೇಕು

ಇನ್ನೂ ಜೆಡಿಎಸ್ ಜೊತೆಗೆ ಕೈ ಜೋಡಿಸಿರುವ ಬಿಜೆಪಿ ಕಾರ್ಯಕರ್ತರು ಮೈತ್ರಿ ಧರ್ಮ ಕಾಯ್ದುಕೊಳ್ಳಬೇಕು. ಬಿಜೆಪಿಯವರ 15ರಿಂದ 20 ಸಾವಿರ ಮತಗಳು ಇಲ್ಲಿವೆ. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ ಸುರೇಶ್ ವಿರುದ್ಧ ಬಿಜೆಪಿಯಿಂದ ನಿಂತಿದ್ದ ತುಳಸಿ ಮುನಿರಾಜು ಅವರಿಗೆ ಸುಮಾರು 17ಸಾವಿರ ಮತಗಳು ಬಂದವು. ಆ ಮತಗಳನ್ನು ಇಲ್ಲಿ ನಿಖಿಲ್ ಅವರಿಗೆ ಭದ್ರ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಬೆಂಬಲಿಗ ರೈತರು, ಹಿರಿಯ ಅನುಭವಿಗಳು ಸಲಹೆ ನೀಡಿದ್ದಾರೆ.

ಕ್ಷೇತ್ರದಲ್ಲಿ ಅಭಿವೃದ್ಧಿ ನೋಡುವುದಾದರೆ, ಅತೀ ಹೆಚ್ಚಿನ ಪ್ರಮಾಣದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರೇ ರೈತರ ಸಾಲ ಮನ್ನಾ ಮಾಡಿದ್ದಾರೆ. ಇದು ಅವರಿಗೆ ಇರುವ ರೈತಪರ ಕಾಳಜಿಯನ್ನು ತೋರಿಸುತ್ತದೆ. ಕಾರ್ಯಕರ್ತರನ್ನು ರೈತರ ಸಮಸ್ಯೆಯನ್ನು ಖುದ್ದು ಆಲಿಸುತ್ತಾರೆ.

ಇಲ್ಲಿ ಜೆಡಿಎಸ್ ನಾಯಕರಿಂದಲೇ ಮಾದೇಶ್ವರ ಸ್ವಾಮಿ ದೇವಸ್ಥಾನ, ಶಾಲೆ ಕಾಲೇಜುಗಳು, ಆಸ್ಪತ್ರೆಗಳು ನಿರ್ಮಿಸಲಾಗಿದೆ. ಕಾಂಗ್ರೆಸ್‌ಗೆ ರೈತ ಪರ ಎಷ್ಟು ಕಾಳಜಿ ಇದೆ ಎಂಬುದು ನಮಗೂ ಗೊತ್ತಿದೆ.

ಜೆಡಿಎಸ್‌ಗೆ ಸಣ್ಣ ಸಣ್ಣ ಸಮುದಾಯದವರ ಮತ

ದೇವೇಗೌಡರು ಮುಸ್ಲಿಂರಿಗೆ ಮೀಸಲಾತಿ ಕೊಟ್ಟರೆ ಸಮಸ್ಯೆ ಏನು?, ಕನಕಪುರ ನಾಯಕರು ಜಾತಿ ರಾಜಕಾರಣ ಮಾಡುತ್ತಾರೆ, ಸ್ವಾರ್ಥ ರಾಜಕಾರಣ ಮಾಡುತ್ತಾರೆ. ಕಾಂಗ್ರೆಸ್‌ಗೆ ಮಾತ್ರವೇ ಮುಸ್ಲಿಂ ಮಂದಿ ಮತ ಹಾಕುತ್ತಾರೆ ಎಂದುಕೊಂಡಿದ್ದಾರೆ. ಅದ ಭ್ರಮೆ, ಮುಸ್ಲಿಮರು ಸೇರಿದಂತೆ ಕ್ಷೇತ್ರದ ವಿವಿಧೆಡೆ ಇರುವ ಸಣ್ಣ ಪುಟ್ಟ ಸಮುದಾಯದವರು ಜೆಡಿಎಸ್ ಪರ ಒಲವು ಹೊಂದಿದ್ದಾರೆ.

ಪಕ್ಷಾಂತರಿ ಮೇಲೆ ನಮಗೆ ನಾಯಕ. ಒಂದೆಡೆ ಕೂರದ ವ್ಯಕ್ತಿ ಸಿಪಿ ಯೋಗೇಶ್ವರ ಮೇಲೆ ನಮಗೆ ನಂಬಿಕೆ ಇಲ್ಲ. ಗ್ಯಾರೆಂಟಿ ಯೋಜನೆ ಅದು ಇದು ಎಂದು ಮಾಡಿರಬಹುದು. ಅದರಿಂದ ಪ್ರಯೋಜನವಿಲ್ಲ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಜನರಿಗೆ ಮನವಿ ಮಾಡಿಕೊಡಬೇಕು ಎಂದೆಲ್ಲ ಅವರು ವಿವರಿಸಿದರು.

ಡಿಕೆಶಿ ಸಿಎಂ ಗಿರಿ ಮೇಲೆ ಮತದಾರರ ಕಣ್ಣು

ಇನ್ನೂ ಕಾಂಗ್ರೆಸ್ ಪರ ಒಲವಿರುವ ರೈತಾಪಿ ಮಂದಿಯು, ನಮಗೆ ಕಾಂಗ್ರೆಸ್‌ನಲ್ಲಿ ಒಕ್ಕಲಿಗ ನಾಯಕ ಬೆಳೆಯಬೇಕು. ಅವರು ಸಿಎಂ ಆಗುವುದಾದರೆ ಹೆಚ್ಚು ಬೆಂಬಲ ಸಿಗಲಿದೆ. ಸಿಪಿ ಯೋಗೇಶ್ವರ ಪಕ್ಷಾಂತರ ಮಾಡಿದ್ದಾರೆ. ಅದು ರಾಜಕೀಯದಲ್ಲಿ ಸಹಜ. ಕ್ಷೇತ್ರದ ಜನರನ್ನು ಕೈ ಬಿಡದಂತೆ ಕೆಲಸ ಮಾಡಲು ಕಾಂಗ್ರೆಸ್ ಮುಂದಾದರೆ, ಜನ ಕೈ ಹಿಡಿಯುತ್ತಾರೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+