ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚಾಯಿತಿ ಚುನಾವಣೆ; ಎಚ್‌ಡಿಕೆ ಕಾರ್ಯವೈಖರಿ ಹೇಳುತ್ತದೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 27: "ಚನ್ನಪಟ್ಟಣ ತಾಲೂಕಿನಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಪಂಚಾಯತಿಗಳು ಬಿಜೆಪಿ ಪಾಲಾಗಲಿವೆ" ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ ಭವಿಷ್ಯ ನಡಿದರು.

ಭಾನುವಾರ ಹುಟ್ಟೂರು ಚಕ್ಕೆರೆ ಗ್ರಾಮದ ಮತಕೇಂದ್ರದಲ್ಲಿ ಸಿ. ಪಿ. ಯೋಗೇಶ್ವರ ಮತದಾನ ಮಾಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. "ಗ್ರಾಮ ಪಂಚಾಯತಿ ಚುನಾವಣೆ ಮುಂದಿನ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ದಿಕ್ಸೂಚಿಯಾಗಲಿದೆ" ಎಂದು ಹೇಳಿದರು.

ರಾಮನಗರ: ಗ್ರಾ.ಪಂ ಚುನಾವಣೆ ಬಹಿಷ್ಕರಿಸಿದ ಸೌಲಭ್ಯ ವಂಚಿತ ಗ್ರಾಮಸ್ಥರುರಾಮನಗರ: ಗ್ರಾ.ಪಂ ಚುನಾವಣೆ ಬಹಿಷ್ಕರಿಸಿದ ಸೌಲಭ್ಯ ವಂಚಿತ ಗ್ರಾಮಸ್ಥರು

"ಗ್ರಾಮ ಪಂಚಾಯತಿ ಚುನಾವಣೆ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕರಾದ ಎಚ್. ಡಿ. ಕುಮಾರಸ್ವಾಮಿ ಅವರ ಕಾರ್ಯ ವೈಖರಿಯನ್ನು ಸಾಬೀತು ಮಾಡಲಿದೆ. ಮತ ಎಣಿಕೆಯ ನಂತರ ಎಷ್ಟು ಸ್ಥಾನಗಳನ್ನು ಗಳಿಸಲಿದ್ದಾರೆ? ಎಂಬುದನ್ನು ಕಾದು ನೋಡಿ" ಎಂದರು.

ಪಂಚಾಯಿತಿ ಚುನಾವಣೆ; ರಾಮನಗರದಲ್ಲಿ ದಾಖಲೆಯ ಮತದಾನ ಪಂಚಾಯಿತಿ ಚುನಾವಣೆ; ರಾಮನಗರದಲ್ಲಿ ದಾಖಲೆಯ ಮತದಾನ

BJP Will Win More Than 25 Gram Panchayat Says CP Yogeshwar

ರಾಮನಗರ ಜಿಲ್ಲೆಯಲ್ಲಿ ಇಂದು ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆ ವೇಳೆಗೆ ಚನ್ನಪಟ್ಟಣ ತಾಲೂಕಿನಲ್ಲಿ ಶೇ 25 ಹಾಗೂ ಮಾಗಡಿ ಶೇ 24.75 ರಷ್ಟು ಮತದಾನ ನಡೆದಿದ್ದು. ಎರಡು ಕ್ಷೇತ್ರಗಳಿಂದ ಒಟ್ಟು ಶೇ 37.38 ರಷ್ಟು ಮತದಾನವಾಗಿದೆ.

ಪಂಚಾಯಿತಿ ಚುನಾವಣೆ; ಅಭ್ಯರ್ಥಿಯಿಂದ ಬೆಳ್ಳಿ ದೀಪ ವಿತರಣೆ ಪಂಚಾಯಿತಿ ಚುನಾವಣೆ; ಅಭ್ಯರ್ಥಿಯಿಂದ ಬೆಳ್ಳಿ ದೀಪ ವಿತರಣೆ

ರಾಮನಗರ ಜಿಲ್ಲೆಯ ರಾಜ್ಯ ರಾಜಕೀಯದಲ್ಲಿ ಬುಹುಮುಖ್ಯ ಪಾತ್ರ ವಹಿಸುತ್ತಿದೆ. ಎಚ್. ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಿ. ಪಿ. ಯೋಗೇಶ್ವರ ಅವರ ಪ್ರತಿಷ್ಠೆ ಈ ಜಿಲ್ಲೆಯಲ್ಲಿ ಅಡಗಿದೆ.

English summary
BJP supported candidates will win more than 25 gram panchayat said BJP leader C. P. Yogeshwar who voted for panchayat polls in Chennapatna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X