ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿದೆ: ಎಚ್ಡಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಫೆಬ್ರವರಿ 27: ಬಿಜೆಪಿಯವರು ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ಕೊಡಲು ಮುಂದಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ದೆಹಲಿಯಲ್ಲಿ ನಡೆದಿರುವ ಗಲಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ದೆಹಲಿಯಲ್ಲಿ ಸಂಪೂರ್ಣವಾಗಿ ಬಿಜೆಪಿ ನಾಯಕರಿಂದ ನಡೆದಿರುವ ಗಲಭೆ, ಒಂದು ಕಡೆ ಟ್ರಂಪ್ ನ ಕರೆದುಕೊಂಡು ಬಂದು ಗುಜರಾತ್ ನಲ್ಲಿ ಮೆರವಣಿಗೆ ಮಾಡುತ್ತಾರೆ, ಮತ್ತೊಂದೆಡೆ ದೆಹಲಿಯಲ್ಲಿ ಗಲಭೆಯೂ ನಡೆಯುತ್ತೆ ನಮ್ಮ ದೇಶದ ಬಗ್ಗೆ ಅವರಿಗೆ ಯಾವ ಮಟ್ಟದ ಗೌರವ ಬರಬಹುದು ಎಂದು ಪ್ರಶ್ನಿಸಿದರು.

"ನನ್ನ ವೈಯಕ್ತಿಕ ಆಸೆಗಾಗಿ ಸರ್ಕಾರಕ್ಕೆ ನಾನು ಹೀಗೆ ಮಾಡಲ್ಲ" ಎಂದು ಮತ್ತೊಮ್ಮ ಸ್ಪಷ್ಟನೆ ನೀಡಿದ ಎಚ್ ಡಿಕೆ

ಭಾರತ ಮೊದಲಿನಿಂದಲೂ ಹಿಂದೂ ರಾಷ್ಟ್ರವೇ, ಬಿಜೆಪಿಯವರು ಹೊಸದಾಗಿ ಮಾಡಬೇಕಿಲ್ಲ ಇವರು ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳಲು ಹೊರಟ್ಟಿದ್ದಾರೆ ಕಾಲಚಕ್ರ ಬದಲಾದಂತೆ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

BJP Sacrificing Innocents For Power Alleges HD Kumaraswamy

ಇನ್ನು ಕೆ.ಆರ್.ಪೇಟೆಯ ಬಿಜೆಪಿ ಶಾಸಕ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈ ಎಂದಿರುವ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಅವರ ಮಾತಿನ ಬಗ್ಗೆ ಮಂಡ್ಯ ಜಿಲ್ಲೆಯ ಜನತೆ ತೀರ್ಮಾನ ಮಾಡುತ್ತಾರೆ, ಮಂಡ್ಯ ಜಿಲ್ಲೆಯ ತಾಕತ್ತಿನ ಬಗ್ಗೆ ಹೇಳಿದ್ರೆ ಒಪ್ಪಬಹುದಿತ್ತು ಮಹಾರಾಷ್ಟ್ರ, ಶಿವಾಜಿಗೆ ಜೈಕಾರ ಹಾಕಿ, ಮಂಡ್ಯ, ಕೆ.ಆರ್.ಪೇಟೆ ಜನರಿಗೆ ಜೈಕಾರವಿಲ್ಲ, ಮಹಾರಾಷ್ಟ್ರ ತಾಕತ್ತು ದೊಡ್ಡದ, ಮಂಡ್ಯ ತಾಕತ್ತು ದೊಡ್ಡದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ವಿರುದ್ಧ ಬಸನಗೌಡ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆಸಿದ ಕುಮಾರಸ್ವಾಮಿ, ಅವರ ಮಾತುಗಳಿಗೆ ಎಷ್ಟು ಮಟ್ಟದ ಗೌರವ ಕೊಡಬೇಕು, ಹಿಂದೆ ಇದೇ ಯತ್ನಾಳ್ ಇದೇ ಯಡಿಯೂರಪ್ಪನವರ ಬಗ್ಗೆ ಏನೇನ್ ಹೇಳಿದ್ದಾರೆ ನೀವೆ ನೋಡಿ. ಅವರ ಮಾತುಗಳಿಗೆ ಯಾರು ಸೀರಿಯಸ್ ಆಗಬಾರದು ಎಂದರು.

ನಿಖಿಲ್ ಲಗ್ನ ಪತ್ರಿಕೆಯಲ್ಲಿ ಎಚ್ಡಿಕೆ ಭಾವುಕ ಸಂದೇಶವೇನಿದೆ?ನಿಖಿಲ್ ಲಗ್ನ ಪತ್ರಿಕೆಯಲ್ಲಿ ಎಚ್ಡಿಕೆ ಭಾವುಕ ಸಂದೇಶವೇನಿದೆ?

ದೊರೆಸ್ವಾಮಿಯವರು ಹೋರಾಟ ಮಾಡುವಾಗ ಇವರು ಹುಟ್ಟಿದ್ದರೋ ಇಲ್ವೋ ಗೊತ್ತಿಲ್ಲ, ಹಾಗಾಗಿ ಅವರ ಹೋರಾಟದ ಬೆಲೆ ಈ ಮನುಷ್ಯನಿಗೆ ಹೇಗೆ ಗೊತ್ತಗುತ್ತಿದೆ, ಯಾವುದೋ RSS ತಿಲಕ, ಫಲಕ ಇಟ್ಕೊಂಡು ಬಂದಿದಾವೆ ಆಟ ಆಡ್ತಾವೆ, ಆಡಲಿ ಬನ್ನಿ ಅಂತಾ ಹರಿಹಾಯ್ದರು.

BJP Sacrificing Innocents For Power Alleges HD Kumaraswamy

ಜೆಡಿಎಸ್ ಶಾಸಕರ ಸಭೆಗೆ ಶಾಸಕರು ಗೈರು ಆಗಿರುವುದಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡ, ನಮ್ಮ ಕಾರ್ಯಕರ್ತರೇ ಶಾಸಕರನ್ನಾಗಿ ಮಾಡೋದು, ಯಾರು ಬಂದರೂ, ಹೋದರೂ ನಾನು ತಕೆ ಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ಸಭೆಗೆ ಗೈರಾದ ಜಿ.ಟಿ‌.ದೇವೇಗೌಡ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್ ಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

1977-78 ರಲ್ಲಿ 68 ಶಾಸಕರು ಗೆದ್ದಿದ್ದರು ಆದರೆ ಕೊನೆಗೆ ದೇವೇಗೌಡರ ಜತೆಗೆ ಉಳಿದುಕೊಂಡಿದ್ದು 12 ಶಾಸಕರು ಮಾತ್ರ, ರಾಜಕಾರಣದಲ್ಲಿ ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಹೋಗುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ, ಯಾರು ಎಲ್ಲಿ ಇರುತ್ತಾರೆ ಎಂಬುದನ್ನು ನಾವು ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ, ಜೆಡಿಎಸ್ ಪಕ್ಷವನ್ನು ಮುಗಿಸಬೇಕೆಂದು 50 ವರ್ಷಗಳಿಂದ ಹಲವು ನಾಯಕರು ಪ್ರಯತ್ನ ಮಾಡುತ್ತಾ ಬರುತ್ತಿದ್ದಾರೆ.

ಯಾರೋ 3-4 ಜನ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ, ಇವರಿಗೆ ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿ ಇಂತಹ ಶಾಸಕರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ, ಯಾಕೆ ಎಂದರೆ ಆ ಕ್ಷೇತ್ರಗಳಲ್ಲಿ ಅವರ ಶಕ್ತಿ ಬೆಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಹಾಗಾಗಿ ನಮ್ಮ ಪಕ್ಷದ ಶಾಸಕರ ತಲೆ ಕೆಡಿಸಿ ಕರೆದುಕೊಂಡು ಪಕ್ಷ ಬೆಳೆಸಲು ಹೊರಟ್ಟಿದ್ದಾರೆ, ಆದರೆ ಕಾರ್ಯಕರ್ತರು ಇಲ್ಲೇ ಇರುತ್ತಾರೆ, ಕಾರ್ಯಕರ್ತರು ಹೊಸ ನಾಯಕನನ್ನು ಹುಡುಕಿಕೊಳ್ಳುತ್ತಾರೆ , ಹಾಗಾಗಿ ಇವರ ಬಗ್ಗೆ ತಲೆಕೆಡಿಸಿಕಳ್ಳಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

English summary
Former CM HD Kumaraswamy Said Against BJP has come forward to sacrifice innocents for power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X