• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇವಲ ಒಂದು ಸ್ಥಾನ ಗೆದ್ದು ಮಾಗಡಿ ಪುರಸಭೆ ಅಧಿಕಾರ ಹಿಡಿದ ಬಿಜೆಪಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 12: ರಾಮನಗರ ಜಿಲ್ಲೆಯ ಮಾಗಡಿ ಪುರಸಭೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಮಾಗಡಿ ಪುರಸಭೆ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಸದಸ್ಯೆ ಭಾಗ್ಯಲಕ್ಷ್ಮಮ್ಮ ಗುರುವಾರ ಪದಗ್ರಹಣ ಮಾಡಿದರು. ಬಿಜೆಪಿ ಪಕ್ಷ ಮಾಗಡಿ ಪುರಸಭೆಯ ಇತಿಹಾಸದಲ್ಲೇ, ಅದರಲ್ಲೂ ಕೇವಲ ಒಂದು ಸ್ಥಾನ ಗೆದ್ದು ಅಧಿಕಾರದ ಗದ್ದುಗೆ ಏರಿದೆ.

ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಪುರಸಭೆಯಲ್ಲಿ ಚುನಾಯಿತರಾದ ಏಕೈಕ ಅಭ್ಯರ್ಥಿ ಭಾಗ್ಯಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿ ಗೆದ್ದು, ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನದ ಪದಗ್ರಹಣ ಮಾಡಿದರು.

ಮಾಗಡಿ ಹಾಲಿ ಶಾಸಕ ಎ.ಮಂಜುನಾಥ್ ಮತ್ತು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ನಡುವಿನ ತಿಕ್ಕಾಟದಿಂದ ಕೇವಲ ಒಂದೇ ಸ್ಥಾನ ಗೆದ್ದಿದ್ದ ಬಿಜೆಪಿಯ ಭಾಗ್ಯಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಬೇಕಾಯಿತು. ಇನ್ನು ಪುರಸಭೆಯಲ್ಲಿ ಜೆಡಿಎಸ್-12, ಕಾಂಗ್ರೆಸ್-10 ಹಾಗೂ ಬಿಜೆಪಿ-1 ಸ್ಥಾನ ಗಳಿಸಿದ್ದವು.

ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯವ ಹಠಕ್ಕೆ ಬಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಜೆಡಿಎಸ್ ಪಕ್ಷದ ಇಬ್ಬರು ಸದಸ್ಯರನ್ನು ತಮ್ಮ ಸೆಳೆಯಲು ಯಶಸ್ವಿಯಾದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಪ್ಪಿಸುವ ಜೆಡಿಎಸ್ ಪ್ರಯತ್ನದಿಂದ ಒಂದೇ ಸ್ಥಾನ ಗೆದ್ದಿದ್ದ ಬಿಜೆಪಿ ಅವಿರೋಧವಾಗಿ ಪುರಸಭೆಯ ಅಧಿಕಾರ ಅಲಂಕಾರಿಸಿದೆ.

   ರವಿ ಬೆಳಗೆರೆ ಮಾಡಿದ ಸಹಾಯವನ್ನು ನೆನಪಿಸಿಕೊಂಡ R ಅಶೋಕ್ | Oneindia Kannada

   ಇದೇ ಸಂದರ್ಭದಲ್ಲಿ ಪುರಸಭೆ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಭಾಗ್ಯಲಕ್ಷ್ಮಮ್ಮ ಅವರನ್ನು ಬಿಜೆಪಿ ಮುಖಂಡ ಹಾಗೂ ಬೆಂಗಳೂರು ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ಬಸವರಾಜು ಅಭಿನಂದಿಸಿದರು.

   English summary
   BJP party member Bhagyalakshmamma on Thursday Elected as the Magadi Municipal President.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X