Get Updates
Get notified of breaking news, exclusive insights, and must-see stories!

ರಾಮನಗರ: ಅಭ್ಯರ್ಥಿ ಕೈಕೊಟ್ಟರು ಬಿಜೆಪಿಯ ಪ್ರಚಾರ ನಿಂತಿಲ್ಲ! ಏನೀ ತಂತ್ರ?

ರಾಮನಗರ, ನವೆಂಬರ್ 02: ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮರ್ಮಾಘಾತವನ್ನು ಅವರ ಅಭ್ಯರ್ಥಿ ನೀಡಿದ್ದಾರೆ. ಚುನಾವಣೆ ಒಂದು ದಿನ ಇದ್ದಾಗ ಅಭ್ಯರ್ಥಿ ಎಲ್‌.ಚಂದ್ರಶೇಖರ್ ಕಾಂಗ್ರೆಸ್‌ ತೆಕ್ಕೆಗೆ ಸೇರಿಕೊಂಡಿದ್ದಾರೆ. ಆದರೆ ರಾಮನಗರ ಬಿಜೆಪಿ ಕಾರ್ಯಕರ್ತರು ಛಲ ಬಿಟ್ಟಿಲ್ಲ.

ದೀಪಾವಳಿ ವಿಶೇಷ ಪುರವಣಿ

ಹೌದು, ಅಭ್ಯರ್ಥಿ ಕೈಕೊಟ್ಟರೇನಂತೆ ಕಾರ್ಯಕರ್ತರು ತಮ್ಮ ಛಲ ಬಿಟ್ಟಿಲ್ಲ, ಅಭ್ಯರ್ಥಿ ಇಲ್ಲದಿದ್ದರೂ ಬಿಜೆಪಿ ಪರ ಪ್ರಚಾರವನ್ನು ನಿಲ್ಲಿಸಿಲ್ಲ.

ನಿನ್ನೆಗೆ ಬಹಿರಂಗ ಪ್ರಚಾರ ಅಂತ್ಯವಾಗಿರುವ ಕಾರಣ ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹೊಸ ಕರಪತ್ರಗಳನ್ನು ಹಿಡಿದು ಮನೆ-ಮನೆಗೆ ಹೋಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಅಭ್ಯರ್ಥಿಗೆ ಬೇಡ ಬಿಜೆಪಿ ಪಕ್ಷವನ್ನು ನೋಡಿ ಮತ ಹಾಕಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಅಭ್ಯರ್ಥಿ ಎಲ್.ಚಂದ್ರಶೇಖರ್ ಕೈಕೊಡುತ್ತಿದ್ದಂತೆ ರಾತ್ರೋರಾತ್ರಿ ಹೊಸ ಕರಪತ್ರಗಳನ್ನು ಅಚ್ಚು ಮಾಡಿಸಿರುವ ರಾಮನಗರ ಬಿಜೆಪಿ, ಅಭ್ಯರ್ಥಿ ಚಿತ್ರದ ಜಾಗದಲ್ಲಿ ಬಿಜೆಪಿಯ ಚಿಹ್ನೆ ಕಮಲದ ಚಿಹ್ನೆ, ಅಭ್ಯರ್ಥಿ ಹೆಸರಿನ ಜಾಗದಲ್ಲಿ 'ದೇಶ ಮೊದಲು' ಎಂದು ಮುದ್ರಿಸಿ ಮತ ಕೇಳುತ್ತಿದೆ.

ಚಂದ್ರಶೇಖರ್‌ ಮೇಲೆ ಭಾರಿ ಆಕ್ರೋಶ

ಚಂದ್ರಶೇಖರ್‌ ಮೇಲೆ ಭಾರಿ ಆಕ್ರೋಶ

ಮತದಾನ ಎರಡು ದಿನ ಇದ್ದಾಗ ಕೈಕೊಟ್ಟ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಮೇಲೆ ರಾಮನಗರ ಬಿಜೆಪಿ ಕಾರ್ಯಕರ್ತರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್‌ ಅವರ ಪ್ರತಿಕೃತಿ ದಹಿಸಿದ್ದಾರೆ, ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ. ಅಣಕು ಶವಯಾತ್ರೆ ನಡೆಸಿದ್ದಾರೆ.

ರಾಜ್ಯ ಬಿಜೆಪಿ ಮೇಲೂ ಆಕ್ರೋಶ

ರಾಜ್ಯ ಬಿಜೆಪಿ ಮೇಲೂ ಆಕ್ರೋಶ

ರಾಜ್ಯ ಬಿಜೆಪಿ ಮೇಲೂ ರಾಮನಗರ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರಿದ್ದರೂ ಸಹ ಹೊರಗಿನಿಂದ (ಕಾಂಗ್ರೆಸ್‌) ಬಂದ ವ್ಯಕ್ತಿಗೆ ಟಿಕೆಟ್‌ ನೀಡಿದ ರಾಜ್ಯ ಬಿಜೆಪಿ ನಿರ್ಣಯಕ್ಕೂ ರಾಮನಗರ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಟಾ ಪರವಾಗಿಯೂ ಕೆಲವರ ಪ್ರಚಾರ

ನೋಟಾ ಪರವಾಗಿಯೂ ಕೆಲವರ ಪ್ರಚಾರ

ಬಿಜೆಪಿಯ ಕೆಲವು ಕಾರ್ಯಕರ್ತರು ಮತದಾನದಂದು ನೋಟಾ ಬಟನ್‌ ಪ್ರಯೋಗಿಸುವಂತೆಯೂ ಪ್ರಚಾರ ಮಾಡುತ್ತಿದ್ದಾರೆ. ಸುಪ್ರಿಂ ಕೋರ್ಟ್‌ ಅನ್ವಯ ನೋಟಾಕ್ಕೆ ಬಹುಮತ ಬಂದರೆ ಮತದಾರರ ಆಯ್ಕೆ ಗೌರವಿಸಿ ಅಲ್ಲಿ ಮರು ಚುನಾವಣೆ ಮಾಡಲಾಗುವುದಿಲ್ಲ. ಆದರೆ ನೋಟಾಕ್ಕೆ ಬಹುಮತ ಬರುವುದು ಅತ್ಯಂತ ಕಷ್ಟ ಸಾಧ್ಯ.

ಕಣದಲ್ಲಿ ಉಳಿದಿದ್ದು ಒಬ್ಬರೇ

ಕಣದಲ್ಲಿ ಉಳಿದಿದ್ದು ಒಬ್ಬರೇ

ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದಂತೆ ಪ್ರಸ್ತುತ ರಾಮನಗರ ಉಪಚುನಾವಣೆ ಕಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರು ಮಾತ್ರವೇ ಕಣದಲ್ಲಿ ಉಳಿದಿರುವ ಮುಖ್ಯ ಅಭ್ಯರ್ಥಿ ಹಾಗಾಗಿ ಅವರ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+