ಗುಜರಾತ್, ಹಿಮಾಚಲದಲ್ಲಿ ಕಪ್ಪುಹಣ ಹರಿಯುತ್ತಿದೆ : ದೇವೇಗೌಡ

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ನವೆಂಬರ್ 08 : ಗುಜರಾತ್ ಚುನಾವಣೆಯಲ್ಲಿ ಕಪ್ಪುಹಣದ ಹೊಳೆಯೆ ಹರಿದಿದೆ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಕಪ್ಪು ಹಣವನ್ನ ಖರ್ಚು ಮಾಡುತ್ತಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.

ರಾಮನಗರದ ಜಾನಪದ ಲೋಕದಲ್ಲಿ ನೂತನವಾಗಿ ಪ್ರಾರಂಭಗೊಂಡ ಸಿರಿಧಾನ್ಯ ಮಾರಾಟ ಮಳಿಗೆಯನ್ನ ಉದ್ಘಾಟನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನೋಟ್ ಬ್ಯಾನ್‌ನಿಂದ ಹಳೆ ನೋಟು ಬದಲಿಯಾಗಿ ಹೊಸ ನೋಟು ಬಂದಿವೆ ಅಷ್ಟೆ ಇದಕ್ಕೆ ಯಾವುದೇ ಮಹತ್ವ ನೀಡುವುದು ಬೇಡ ಎಂದರು.

BJP and Congress spending black money Gujarat and Himachal Pradesh election : HD Deve Gowda

ಗುಜರಾತ್‌ನಲ್ಲಿ ಮಾಧ್ಯಮದವರು ಬೇಕಾದ್ರೆ ಸರ್ವೆ ಮಾಡಿಕೊಂಡು ಬನ್ನಿ ಗುಜರಾತ್ ನ ರಸ್ತೆಗಳಲ್ಲಿ ಕಪ್ಪು ಹಣದ ಹೊಳೆ ಹರಿಯುತ್ತಿದೆ. ಇನ್ನು ಎರಡು ರಾಷ್ಟ್ರೀಯ ಪಕ್ಷಗಳು ಜಿದ್ದಿಗೆ ಬಿದ್ದಂತೆ ಹಣ ಸುರಿಯುತ್ತಿವೆ. ಇನ್ನು ಕಪ್ಪು ಹಣ ನಿಲ್ಲಿಸುವುದು ಎಲ್ಲಿಂದ. ನಾನು ಈ ಮಾತನ್ನ ದೇವರ ಪೂಜೆ ಮಾಡಿ ಮಾತನಾಡುತ್ತಿದ್ದೇನೆ. ಇದು ಸತ್ಯ ಎಂದು ಹೇಳಿದರು.

ಯಾವ ಸರಕಾರಗಳು ರೈತನಿಗೆ ಸಹಾಯ ಮಾಡಿಲ್ಲ ಎಂಬ ನೋವಿದೆ ನಮಗೆ. ಕುಮಾರಸ್ವಾಮಿ ಮನಸ್ಸಿನಲ್ಲಿ ರೈತರ ಬಗ್ಗೆ ಅಪಾರ ಕಾಳಜಿ ಇದೆ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಬೇಕೆಂಬ ಆಸೆ ಎಚ್.ಡಿ.ಕೆ ಮನಸ್ಸಿನಲ್ಲಿದೆ, ಅದಕ್ಕೆಂದೆ ಅವರು ಇಸ್ರೇಲ್ ಗೆ ಹೋಗಿ ಅಲ್ಲಿನ ತಂತ್ರಜ್ಞಾನವನ್ನ ಅರಿತು ಬಂದಿದ್ದಾರೆ,

ಚಾಮುಂಡೇಶ್ವರಿ ದೇವಿಗೆ ಪೊಜೆ ಸಲ್ಲಿಸಿ ಯಾತ್ರೆ ಪ್ರಾರಂಭಿಸಿದ್ದೇವೆ. ವಿಕಾಸ ಯಾತ್ರೆ ಅಂದ್ರೆ ಅಭಿವೃದ್ಧಿ ಯಾತ್ರೆ, ಈ ಯಾತ್ರೆ ಅಧ್ಬುತವಾಗಿ ಉದ್ಘಾಟನೆ ಗೊಂಡಿದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಕಾಸ ಯಾತ್ರೆ ನಡೆಯುತ್ತದೆ ಚುನಾವಣೆ ಮುಗಿಯುವವರೆಗೆ ವಿಕಾಸ ಯಾತ್ರೆ ಮುಂದುವರೆಯುತ್ತದೆ ಎಂದು ಎಚ್‌ಡಿಡಿ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP and Congress are spending black money in Gujarat and Himachal Pradesh election said former Prime Minister HD Deve Gowda

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ