Get Updates
Get notified of breaking news, exclusive insights, and must-see stories!

ರಾಮನಗರ; ಈ ಲೇಔಟ್‌ನಲ್ಲಿ ಮೂಲ ಸೌಕರ್ಯಗಳೇ ಇಲ್ಲ, ಜನರ ಪರದಾಟ

ರಾಮನಗರ, ಜುಲೈ 23: ನಿವೇಶನ ಇಲ್ಲದವರಿಗೆ ರಿಯಾಯತಿ ದರದಲ್ಲಿ ಸೈಟ್‍ಗಳನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಗೃಹ ಮಂಡಳಿ ನಿರ್ಮಾಣ ಮಾಡಿದ ಬಡಾವಣೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಬಿಡದಿ ಪಟ್ಟಣದಲ್ಲಿ ಹಲವು ಕೈಗಾರಿಕೆಗಳು ಸ್ಥಾಪನೆಗೊಂಡ ಹಿನ್ನಲೆಯಲ್ಲಿ ಪಟ್ಟಣ ಅಭಿವೃದ್ಧಿ ಕಂಡು ಇಲ್ಲಿನ ಭೂಮಿಗೂ ಚಿನ್ನದ ಬೆಲೆ ಬಂದಿದೆ. ಪಟ್ಟಣದಲ್ಲಿ ಸೈಟ್ ಕೊಂಡುಕೊಳ್ಳುವುದು ಅಂದರೆ ಸಾಮಾನ್ಯ ಜನರಿಗೆ ಸಾಧ್ಯವೇ ಇಲ್ಲಾ. ಸಾಮಾನ್ಯ ಜನರ ಕನಸು ನನಸು ಮಾಡಲು ರಾಜ್ಯ ಗೃಹ ಮಂಡಳಿ ಬಡಾವಣೆ ನಿರ್ಮಾಣ ಮಾಡಿತ್ತು.

2006 ರಲ್ಲಿ ಬಿಡದಿ ಪಟ್ಟಣಕ್ಕೆ ತುಸು ದೂರದ ಬೋರೆಹಳ್ಳಿ, ಕಾಕರಾಮನಹಳ್ಳಿ, ಮುದ್ದಾಪುರ ಕರೇನಹಳ್ಳಿ ಮೂರು ಗ್ರಾಮಗಳಿಗೆ ಸೇರಿದ ಸುಮಾರು 499 ಎಕರೆ 21 ಗುಂಟೆ ರೈತರ ಫಲವತ್ತಾದ ಜಮೀನು ಸ್ವಾಧೀನ ಮಾಡಿಕೊಂಡ ರಾಜ್ಯ ಗೃಹ ಮಂಡಳಿ 2011 ರಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ ಬಡಾವಣೆ ನಿರ್ಮಾಣ ಮಾಡಿದೆ.

ಲಾಟರಿ ಮೂಲಕ ನಿವೇಶನ

ಲಾಟರಿ ಮೂಲಕ ನಿವೇಶನ

ರೈತರಿಂದ ಜಮೀನು ವಶಪಡಿಸಿಕೊಂಡ ರಾಜ್ಯ ಗೃಹ ಮಂಡಳಿ ಉದ್ದೇಶಿತ ಬಡಾವಣೆಗೆ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನು ನಾಮಕರಣ ಮಾಡಿ 5 ಬ್ಲಾಕ್ ಗಳಲ್ಲಿ ನಿವೇಶನಗಳನ್ನು ನಿರ್ಮಾಣ ಯೋಜನೆ ಅನುಷ್ಠಾನಗೊಳಿಸಿದೆ. ವಸತಿ ಯೋಜನೆಗೆ ಮೂರು ಗ್ರಾಮಗಳಿಗೆ ಸೇರಿದ ರೈತರ ಫಲವತ್ತಾದ ಜಮೀನನ್ನು ಸ್ವಾಧೀನ ಮಾಡಿಕೊಂಡ ಗೃಹ ಮಂಡಳಿ 5 ಬ್ಲಾಕ್ ಗಳಾಗಿ ವಿಂಗಡಣೆ ಮಾಡಿದ್ದರು. 5 ಬ್ಲಾಕ್ ಗಳಲ್ಲಿ ಸಹ ಒಂದೇ ಬಾರಿಗೆ ಭೂಮಿಯನ್ನು ಮಟ್ಟ ಮಾಡಿ ಸುಮಾರು 5700 ಸೈಟ್ ಒಳಗೊಂಡ ಸುಸಜ್ಜಿತ ಬಡಾವಣೆ ನಿರ್ಮಾಣ ಮಾಡಿತ್ತು.

ಬಡಾವಣೆ ನಿರ್ಮಾಣ ಮಾಡಿದ ಕರ್ನಾಟಕ ರಾಜ್ಯ ಗೃಹ ಮಂಡಳಿ ನಾಲ್ಕು ಮಾದರಿಯಲ್ಲಿ ಸೈಟ್‍ಗಳ ವಿಂಗಡನೆ ಮಾಡಿ, 50-80 ಅಡಿ ಅಳತೆಯ HIG, 30-50 ಅಳತೆಯ MIG, 30-40 ಅಳತೆಯ LIG ಹಾಗೂ 20-30 ಅಳತೆಯ SS ಮಾದರಿಯ ಬ್ಲಾಕ್ ಗಳಲ್ಲಿ ನಿವೇಶನಗಳನ್ನು ನಿವೇಶನ ರಹಿತರಿಗೆ ಮಾರಾಟ ಮಾಡಲು ಮುಂದಾಯಿತು. 2018 ರಲ್ಲಿ ನಿವೇಶನಗಳನ್ನು ಖರೀದಿ ಮಾಡುವವರಿಂದ ಅರ್ಜಿ ಆಹ್ವಾನ ಮಾಡಿದ ಗೃಹ ಮಂಡಳಿ ವಸತಿಗಾಗಿ ಬಂದ ಅರ್ಜಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಆಯ್ಕೆಯಾದವರಿಂದ 4 ಕಂತುಗಳಲ್ಲಿ ಹಣವನ್ನು ಇಲಾಖೆ ಕಟ್ಟಿಸಿಕೊಂಡು ಅವರ ಹೆಸರಿಗೆ ನಿವೇಶನ ಮಾಲೀಕತ್ವದ ಪತ್ರಗಳನ್ನು ಮಾಡಿಕೊಟ್ಟಿತು.

ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲ

ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲ

ಗ್ರಾಹಕರಿಗೆ ಸೈಟ್ ಮಾರಿದ ರಾಜ್ಯ ಗೃಹ ಮಂಡಳಿ ಬಡಾವಣೆಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಯಿತು. ರಾಜ್ಯ ಗೃಹ ಮಂಡಳಿ ನಿರ್ಲಕ್ಷ್ಯದಿಂದ ಮೂಲಭೂತ ಸೌಕರ್ಯದಿಂದ ವಂಚಿತವಾಗಿ ಹಾಳುಕೊಂಪೆಯಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ನಿವೇಶನಗಳ ಜಾಗದಲ್ಲಿ ವಿವಿಧ ಬಗೆಯ ಗಿಡಗೆಂಟೆಗಳು ಬೆಳೆದು ನಿಂತಿವೆ. ಬಡಾವಣೆಯಲ್ಲಿನ ನಿವೇಶನಗಳಿಗೆ ಹೋಗಲು ಜಾಗವಿಲ್ಲದಷ್ಟು ಗಿಡಗಳು ಬೆಳೆದು ನಿಂತಿವೆ.

ಅನೈತಿಕ ಚಟುವಟಿಕೆ ತಾಣ

ಅನೈತಿಕ ಚಟುವಟಿಕೆ ತಾಣ

ರಾಜ್ಯ ಗೃಹ ಮಂಡಳಿಯಿಂದ ಸೈಟ್‌ ಖರೀದಿಸಿದ ಜನರು ನಮ್ಮ ನಿವೇಶನ ಎಲ್ಲಿದೆ ಎಂದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಬೋಸ್ ಹೆಸರಿನ ಬಡಾವಣೆಯ 5 ಬ್ಲಾಕ್ ಗಳು ಸೂಕ್ತ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಗಿಡಗೆಂಟೆಗಳು ಬೆಳೆದು ನಿಂತಿರುವುದರಿಂದ ಯಾರು ಒಳಗೆ ಹೋದರು ಗೊತ್ತಾಗುವುದಿಲ್ಲ. ಅಲ್ಲದೇ ಬಿಡದಿ ಪಟ್ಟಣಕ್ಕೆ ಹತ್ತಿರ ಇರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಈ ಬಡಾವಣೆಗಳಿಗೆ ಮದ್ಯಪಾನ ಮಾಡಲು ಸಾಕಷ್ಟು ಮಂದಿ ಬಂದು ಕುಡಿದು ಬಾಟಲ್‍ಗಳನ್ನು ಅಲ್ಲೇ ಹಾಕಿದ್ದು ಗಾಜಿನ ಬಾಟಲ್‍ಗಳನ್ನು ಒಡೆದಿರುವ ಕಾರಣ ಬಡಾವಣೆಗೆ ಯಾರು ಪ್ರವೇಶಮಾಡಲು ಹೆದರುತ್ತಿದ್ದಾರೆ. ಅಲ್ಲದೆ ಇತರೆ ಅನೈತಿಕ ಚಟುವಟಿಕೆಗಳು ಸಹ ಇಲ್ಲಿ ನಡೆಯುತ್ತಿವೆ ಸಾರ್ವಜನಿಕರು ಆರೋಪಿಸಿದ್ದಾರೆ.

ಸ್ವಚ್ಛತೆ, ವಿದ್ಯುತ್, ನೀರಿನ ಸೌಲಭ್ಯವಿಲ್ಲ

ಸ್ವಚ್ಛತೆ, ವಿದ್ಯುತ್, ನೀರಿನ ಸೌಲಭ್ಯವಿಲ್ಲ

ರಾಜ್ಯ ಗೃಹ ಮಂಡಳಿಯ ನಿರ್ಮಾಣದ ಬಡಾವಣೆಯಲ್ಲಿ ನಿವೇಶನ ಖರೀದಿಸಿದ ಮಹಾದೇವ ಎಂಬಾತ ಮಾತನಾಡಿ, ಗೃಹ ಮಂಡಳಿ ಬಡಾವಣೆ ನಿರ್ಮಾಣ ಮಾಡಿ, ನಿವೇಶನಗಳನ್ನು ಮಾರಾಟ ಮಾಡಿದ ಮೇಲೆ ನಮಗೂ ಬಡಾವಣೆಗೂ ಸಂಬಂಧವಿಲ್ಲದಂತೆ ಕಣ್ಮುಚ್ಚಿ ಕುಳಿತಿದೆ. 2018 ರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ ನಂತರ ಗೃಹ ಮಂಡಳಿಯ ಅಧಿಕಾರಿಗಳಾಗಲಿ ಸಿಬ್ಬಂದಿಗಳಾಗಲಿ ಇತ್ತ ಸುಳಿದಿಲ್ಲ. ನಿವೇಶನಗಳಲ್ಲಿ ಬೆಳೆದಿರುವ ಗಿಡಗೆಂಟೆಗಳನ್ನು ಸ್ವಚ್ಛ ಮಾಡುವ ಗೋಜಿಗೆ ಹೋಗಿಲ್ಲ ನಿವೇಶನ ಖರೀದಿ ಮಾಡಿದವರು ಮನೆ ಕಟ್ಟಲು ಅವಶ್ಯಕವಾಗಿ ಬೇಕಾಗಿರುವ ಕುಡಿಯುವ ನೀರು, ವಿದ್ಯುತ್ ಸಂಪರ್ಕವನ್ನು ನೀಡಿಲ್ಲ ಎಂದು ಆರೋಪಿಸಿದರು.

ರಾಜ್ಯ ಗೃಹ ಮಂಡಳಿ ನಿವೇಶನಗಳನ್ನು ನಿರ್ಮಾಣಮಾಡಿ ಲಾಟರಿಯಲ್ಲಿ ಆಯ್ಕೆಯಾದವರಿಗೆ ನಿವೇಶನ ನೀಡಿ ಕೈತೊಳೆದುಕೊಂಡಿದೆ. ನಿವೇಶನ ಪಡೆದವರು ಮನೆ ಕಟ್ಟಲು ಬೇಕಿರುವ ಮೂಲಭೂತ ಸೌಕರ್ಯಗಳನ್ನು ಸಹ ನೀಡಿಲ್ಲ ಗೃಹ ಮಂಡಳಿಯಿಂದ ಪಡೆದ ನಮ್ಮ ನಿವೇಶನ ಯಾವ ಜಾಗದಲ್ಲಿದೆ ಎಂಬುದೆ ಕಾಣುತ್ತಿಲ್ಲ. ನಿವೇಶನದ ಒಳಗೆ ಹೋಗಲು ಸಹ ಸಾಧ್ಯವಿಲ್ಲ. ಪ್ರತಿವರ್ಷ ಕಂದಾಯದ ಜತೆಗೆ ನಿವೇಶನಗಳ ಸ್ವಚ್ಛತೆಗೆ ಅಂತಾ ಹಣವನ್ನು ಗೃಹ ಮಂಡಳಿ ಸೈಟ್ ಖರೀದಿ ಮಾಡಿದವರಿಂದ ಕಟ್ಟಿಸಿಕೊಳ್ಳುತ್ತದೆ ಆದರೆ ಇಲ್ಲಿಯವರೆಗೂ ಯಾವುದೇ ಸ್ವಚ್ಛತೆಯನ್ನು ಮಾಡಿಲ್ಲ ಎಂದು ಆರೋಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+