AC Manjunath raid info: ರಾಮನಗರ ಎಸಿ ಮಂಜುನಾಥ್ ಬೇನಾಮಿ ಆಸ್ತಿ ವಿವರ

ಬೆಂಗಳೂರು/ರಾಮನಗರ, ಮಾ. 16: ರಾಜ್ಯದಲ್ಲಿ ಬುಧವಾರ ಬೆಳಗಿನ ಜಾವ ಎಸಿಬಿ ದಾಳಿಗೆ ಒಳಗಾದ ಹದಿನೆಂಟು ಭ್ರಷ್ಟರು ನಿದ್ದೆಗೆಟ್ಟಿದ್ದಾರೆ. ಮಾತ್ರವಲ್ಲ, ಈ ಭ್ರಷ್ಟ ಅಧಿಕಾರಿಗಳ ಸಂಪತ್ತು ಲೆಕ್ಕ ಹಾಕಲು ಸಾಧ್ಯವಾಗದೇ ಎಸಿಬಿ ಅಧಿಕಾರಿಗಳೂ ನಿದ್ದೆ ಕೆಟ್ಟಿದ್ದಾರೆ. ನಾಳೆಯೂ ಮುಂದುವರೆಸಲಿದ್ದು, ಸಂಜೆ ವೇಳೆಗೆ ಸಿಕ್ಕ ಅಕ್ರಮ ಸಂಪತ್ತಿನ ಲೆಕ್ಕಾಚಾರ ಇಲ್ಲಿ ನೀಡಲಾಗಿದೆ.

ಬಾಯಲ್ಲಿ ಭಗವದ್ಗೀತೆ: ಮಾಡಿದ್ದು ಬ್ಯಾಟ್ಮಿಟನ್ ಕೋರ್ಟ್!

ಇದು ರಾಮನಗರ ಎಸಿ ಸಿ. ಮಂಜುನಾಥ್ ಅವರಿಗೆ ಅನ್ವಯಿಸುವ ಸತ್ಯ. 2021 ರಲ್ಲಿ ರಾಮನಗರದಲ್ಲಿ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಎಸಿ ಸಿ. ಮಂಜುನಾಥ್ ನೀಡಿದ್ದ ಹೇಳಿಕೆ ದೊಡ್ಡ ಸುದ್ದಿಯಾಗಿತ್ತು. ಎಲ್ಲರೂ ನಿಷ್ಠೆಯಿಂದ, ದಕ್ಷತೆಯಿಂದ ಹಗಲಿರುಳು ಕೆಲಸ ಮಾಡಲು ಸೂಚಿಸಿದ್ದೇನೆ. ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಕೊರೊನಾ ಸೋಂಕು ತಡೆಗೆ ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದರು. ಅವರ ಹೇಳಿಕೆ ದಾಟಿ ಮಾಧ್ಯಮಗಳಲ್ಲಿ ನೋಡಿ ಜನ ಹಳ್ಳಿ ಹಿನ್ನೆಲೆ ಅಧಿಕಾರಿ ಜನರ ಬಗ್ಗೆ ಅದೆಷ್ಟು ಕಾಳಜಿ ಇಟ್ಟಿದ್ದಾರೆ ಎಂದು ಚಪ್ಪಾಳೆ ಹೊಡೆದಿದ್ದರು.

ಬುಧವಾರ ಎಸಿಬಿ ದಾಳಿಗೆ ಒಳಗಾದ ರಾಮನಗರ ಉಪ ವಿಭಾಗಾಧಿಕಾರಿ ಮಂಜುನಾಥ್ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ಮೂರ್ಛೆ ಹೋಗಿದ್ದಾರೆ. ಯಾಕೆಂದರೆ ಎಸಿ ಮಂಜುನಾಥ್ ಕಟ್ಟಿರುವ ಏಳು ಬ್ಯಾಡ್‌ಮಿಂಟನ್ ಕೋರ್ಟ್ ಗಳ ಖದರ್ ನೋಡಿ ದಂಗಾಗಿದ್ದಾರೆ. ಅಲ್ಲದೇ ಮಂಜುನಾಥ ಫಾರ್ಮ್ ಹೌಸ್, ಕೃಷಿ, ಜಮೀನುಗಳನ್ನು ನೋಡಿ ಎಸಿಬಿ ಅಧಿಕಾರಿಗಳೇ ಬೆಚ್ಚಿ ಬಿದ್ದದ್ದಾರೆ.

Ramanagara Assistant commissioner Manjunath ACB raid inside information

ರಾಮನಗರ ಎಸಿ ಮಂಜುನಾಥ್ ಅವರು ಅಕ್ರಮ ಆಸ್ತಿ ಗಳಿಸಿರುವ ಮಾಹಿತಿ ಆಧರಿಸಿ ಐಪಿಎಸ್ ಅಧಿಕಾರಿ ಕಲಾಕೃಷ್ಣಮೂರ್ತಿ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಬ್ಯಾಟರಾಯನಪುರದಲ್ಲಿ ನಾಲ್ಕು ಹಂತಸ್ತಿನ ಮನೆ, ಸುಗ್ಗಟ್ಟದಲ್ಲಿಎರಡು ಖಾಲಿ ನಿವೇಶನ, ಯಲಯಂಕ ಹೋಬಳಿ ಬ್ಯಾಟರಾನಪುರದಲ್ಲಿ ಏಳು ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಆಟದ ಮೈದಾನ, 710 ಗ್ರಾಂ ಚಿನ್ನಾಭರಣ, ಮೂರು ಕೆ.ಜಿ. ಬೆಳ್ಳಿ ಆಭರಣ ಸಿಕ್ಕಿದೆ.

Ramanagara Assistant commissioner Manjunath ACB raid inside information

ಇದಲ್ಲದೇ ಹೆಸರಘಟ್ಟ ಹೋಬಳಿ ಕುಕ್ಕನಹಳ್ಳಿಯಲ್ಲಿ ಫಾರ್ಮ ಹೌಸ್, ಕುಕ್ಕನಹಳ್ಳಿಯಲ್ಲಿ 16 ಗುಂಟೆ ಜಮೀನು, ದೊಡ್ಡಬಳ್ಳಾಪುರ ರಸ್ತೆಯ ಕೋಳಾಲು ನಲ್ಲಿ ಒಂದೂವರೆ ಎಕರೆ ಜಮೀನು, ಐದು ವಿವಿಧ ಕಂಪನಿಯ ಕಾರು, 19 ಲಕ್ಷ ರೂ. ನಗದು, ಉಳಿತಾಯ ಖಾತೆಯಲ್ಲಿ 60 ಲಕ್ಷ ರೂ. ಹಣ ದೊರೆತಿದೆ.

Ramanagara Assistant commissioner Manjunath ACB raid inside information

ಕೆಎಎಸ್ ಅಧಿಕಾರಿ ಎಸಿ ಮಂಜುನಾಥ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ಇವುಗಳ ಮಾರುಕಟ್ಟೆ ಮೌಲ್ಯ ಕೋಟಿಗಳು ದಾಟುತ್ತದೆ. ಮಂಜುನಾಥ್ ನೂರು ವರ್ಷ ಸೇವೆ ಮಾಡಿದರೂ ಕಾನೂನು ಬದ್ಧವಾಗಿ ಇದರಲ್ಲಿ ಅರ್ಧ ಆಸ್ತಿ ಮಾಡಲು ಸಾಧ್ಯವಿಲ್ಲ. ಆದರೆ ಈ ಪ್ರಮಾಣದ ಆಸ್ತಿ ಯಾವ ಆದಾಯದಿಂದ ಮಾಡಿದ್ದಾರೆ ಎಂಬುದನ್ನು ಮಂಜುನಾಥ್ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೊರೊನಾ ಸಮಯದಲ್ಲಿ ಜನ ಮನ ಗೆದ್ದಿದ್ದ ಮಂಜುನಾಥ್ ಅವರ ಅಕ್ರಮ ಆಸ್ತಿ ಸಂಪತ್ತು ನೋಡಿ ಜನರು ಬಾಯಲ್ಲಿ ಭಗವದ್ಗೀತೆ , ಮಾಡಿದ್ದು ಮಾತ್ರ ಬೇನಾಮಿ ಆಸ್ತಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+