• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಅನಿತಾ ಕುಮಾರಸ್ವಾಮಿ

|
   Anitha Kumaraswamy, the first women MLA of Ramanagara | Oneindia Kannada

   ರಾಮನಗರ, ನವೆಂಬರ್ 7: ಐದು ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಅಷ್ಟೇ ಅಲ್ಲದೆ ಮೊದಲ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

   ದೀಪಾವಳಿ ವಿಶೇಷ ಪುರವಣಿ

   ರಾಮನಗರ ಕ್ಷೇತ್ರಕ್ಕೆ 1952ರಿಂದ ನಡೆದಿರುವ ಚುನಾವಣೆಗಳ ಪರಂಪರೆಯಲ್ಲಿ ಮಹಿಳೆಯರು ಗೆದ್ದ ಇತಿಹಾಸಗಳಿಲ್ಲ, ಕೆಲವು ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧಿಸಿದ್ದರೂ ಗಣನೀಯ ಪ್ರಮಾಣದಲ್ಲಿ ಮತಗಳಿಸಲೂ ಮಹಿಳೆಯರಿಗೆ ಸಾಧ್ಯವಾಗಿಲ್ಲ.

   ಮತಎಣಿಕೆಗೂ ಮುನ್ನವೇ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಜಯಭೇರಿ!

   2008ರ ವಿಧಾನಸಭಾ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಮತಾ ಹೆಗಡೆ ನಿಚ್ಚಾನಿ ಅವರು ಗಳಿಸಿದ 23,663 ಮತಗಳೇ ಮಹಿಳಾ ಅಭ್ಯರ್ಥಿ ಪಡೆದ ಅತ್ಯಧಿಕ ಮತಗಳಾಗಿತ್ತು.

   ರಾಮಕೃಷ್ಣ ಹೆಗಡೆ ಅವರ ಪುತ್ರಿಯಾದ ಮಮತಾ ಅವರು ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. 1978ರ ಚುನಾವಣೆಯಲ್ಲಿ ಮೊದಲ ಮಹಿಳಾ ಅಭ್ಯರ್ಥಿಯಾಗಿ ತಿಮ್ಮಮ್ಮ ಸ್ಪರ್ಧಿಸಿದ್ದರು.

   ಸಿ.ಪಿ.ಯೋಗೇಶ್ವರ್ ವಿರುದ್ಧ ತಿರುಗಿ ಬಿದ್ದ ರಾಮನಗರ ಬಿಜೆಪಿ ಮುಖಂಡರು

   ಕಳೆದ 2018ರ ಮೇ 12ರ ಚುನಾವಣೆಯಲ್ಲಿ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿ ಲೀಲಾವತಿಯನ್ನು ಕಣಕ್ಕಿಳಿಸಲಾಗಿತ್ತು. ಚುನಾವಣೆಯಲ್ಲಿ ಅವರು 4,875 ಮತ ಗಳಿಸಿದ್ದರು. ಗುಲಾಬ್ ಜಾನ್ ಎಂಬ ಮತ್ತೊಬ್ಬ ಮಹಿಳಾ ಅಭ್ಯರ್ಥಿಯೂ ಕಣದಲ್ಲಿದ್ದರು.

   English summary
   Anitha Kumaraswamy of JDS who won the by election with 1.15 lakh huge margin will be the first women MLA from Ramanagara assembly constituency since 1952.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X