• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಸತಿ ಶಾಲೆಯಲ್ಲಿ ವಾರಕ್ಕೊಮ್ಮೆ ನೀರು; ಮಕ್ಕಳಿಗೆ ವ್ಯಾಪಿಸಿದೆ ಅಂಟು ರೋಗ

By ರಾಮನಗರ ಪ್ರತಿನಿಧಿ
|

ರಾಮನಗರ, ಆಗಸ್ಟ್ 28: ಎರಡು ಮೂರು ದಿನಕ್ಕೊಮ್ಮೆ ಬರುವ ನೀರು, ವಾರಕ್ಕೊಮ್ಮೆ ಸ್ನಾನ, ಸ್ವಚ್ಛತೆಯೂ ಇಲ್ಲ, ಮಕ್ಕಳ ಮೈ ಕೈಯೆಲ್ಲಾ ತುರಿಕೆ... ರಾಮನಗರದ ಕೈಲಾಂಚ ಗ್ರಾಮದ ಡಾ.ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆಯಲ್ಲಿನ ಸ್ಥಿತಿಯಿದು.

ನೀರಿಲ್ಲದೇ, ಸ್ವಚ್ಛತೆಯೂ ಇಲ್ಲದೇ ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಕಜ್ಜಿ, ತುರಿಕೆ ಮೊದಲಾದ ಚರ್ಮರೋಗ ಬಂದಿದೆ. ಸಿಬ್ಬಂದಿಯೂ ಇದರೆಡೆ ಗಮನ ನೀಡಿಲ್ಲ. ಇವೆಲ್ಲದರ ನಡುವೆ ಈ ಮಕ್ಕಳ ಸ್ಥಿತಿ ಕೇಳುವವರೇ ಇಲ್ಲವಾಗಿದೆ.

ಚಾಮರಾಜನಗರದಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಸರ್ಕಾರಿ ಶಾಲೆ

ಕೈಲಾಂಚ ಹೋಬಳಿಯ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಎರಡು ಮೂರು ದಿನಕ್ಕೆ ಒಮ್ಮೆ, ಅದರಲ್ಲೂ ಒಂದು ಗಂಟೆ ಮಾತ್ರ ವಸತಿ ಶಾಲೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ಅಡುಗೆ ಮತ್ತು ಮಕ್ಕಳ ನಿತ್ಯಕರ್ಮಕ್ಕೆ ಸಾಕಾಗುತ್ತಿದೆ. ಹೀಗಾಗಿ ಮಕ್ಕಳು ವಾರಕ್ಕೆ ಒಮ್ಮೆ ಮಾತ್ರ ಸ್ನಾನ ಮಾಡುತ್ತಿದ್ದಾರೆ. ಹಾಗಾಗಿ ಸ್ವಚ್ಛತೆ ಕೊರತೆಯಿಂದ ಮಕ್ಕಳಲ್ಲಿ ಚರ್ಮರೋಗ ಉಲ್ಬಣಿಸಿದೆ. ಹೀಗಿದ್ದರೂ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ನಿರ್ಲಕ್ಷ್ಯ ವಹಿಸಿದ್ದಾರೆ. ಮಕ್ಕಳಿಗೆ ಕಜ್ಜಿ ಕಾಣಿಸಿಕೊಂಡಿದ್ದು, ಮೈಯೆಲ್ಲ ಹಬ್ಬಿಕೊಂಡಿದೆ. ಹಾಸ್ಟೆಲ್ ನ ಬಹುತೇಕ ಮಕ್ಕಳಲ್ಲಿ ಇದು ಒಬ್ಬರಿಂದ ಒಬ್ಬರಿಗೆ ಹಬ್ಬಿದೆ. ಕೈ ಕಾಲು, ಹೊಟ್ಟೆ, ಗುಪ್ತಾಂಗಗಳಲ್ಲೂ ಚರ್ಮ ಕಿತ್ತು ಬಂದು ರಕ್ತ ಸೋರುತ್ತಿದೆ.

ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದಿರುವ ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿಯ 104 ಬಾಲಕರು ಹಾಗೂ 28 ಬಾಲಕಿಯರು ಸೇರಿದಂತೆ ಒಟ್ಟು 138 ವಿದ್ಯಾರ್ಥಿಗಳಿದ್ದಾರೆ. ಎಲ್ಲರನ್ನು ಎರಡು ಕಿರಿದಾದ ರೂಂಗಳಲ್ಲಿ ಇಡಲಾಗಿದೆ. ನಾಲ್ಕು ಕೊಠಡಿಗಳು ಮಾತ್ರ ಇಲ್ಲಿದ್ದು. ಒಂದು ಕಟ್ಟಡದಲ್ಲಿನ ಎರಡು ಕೊಠಡಿಗಳು ಬಾಲಕಿಯರಿಗೆ ಮೀಸಲಿದೆ. ಮತ್ತೊಂದು, ಕಟ್ಟಡದಲ್ಲಿನ ಎರಡು ಕೊಠಡಿಗಳಲ್ಲಿ ನೂರಕ್ಕೂ ಹೆಚ್ಚು ಬಾಲಕರು ವಾಸಿಸುತ್ತಿದ್ದಾರೆ.

ಖಾಸಗಿ‌ ಕಟ್ಟಡದಲ್ಲಿ ನಡೆಯುತ್ತಿರುವ ಇಡೀ ಹಾಸ್ಟೆಲ್ ಗೆ ಮೂರು ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಒಂದು ಬಾಲಕಿಯರಿಗೆ ಹಾಗೂ ಉಳಿದ ಎರಡು ಬಾಲಕರಿಗೆ ಮೀಸಲಾಗಿದೆ. ಅದರಲ್ಲೂ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ.

ಎರಡು ನಲ್ಲಿಗಳಿದ್ದು, ಅದರಲ್ಲಿ ಬಿಡುತ್ತಿರುವ ನೀರು ಮುಖ ತೊಳೆಯಲು ಸಾಕಾಗುತ್ತದೆ ಅಷ್ಟೆ. ಸ್ನಾನ ಮಾಡಬೇಕೆಂದರೂ ನೀರು ಸಿಗುವುದಿಲ್ಲ. ಕೆಲವೊಮ್ಮೆ ಬಟ್ಟೆ ಒಗೆಯಲೂ ನೀರು ಇರುವುದಿಲ್ಲ. ಊಟೋಪಚಾರ ಸಹ ಚೆನ್ನಾಗಿಲ್ಲ ಎಂದು ವಿದ್ಯಾರ್ಥಿ ನಿಲಯದಲ್ಲಿನ ಮಕ್ಕಳು ಅಳಲು ತೋಡಿಕೊಂಡರು.

English summary
More than fifty children have suffered skin problem without water and hygiene in Ambedkar Residential school of ramanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X