• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ; 4266 ಅಭ್ಯರ್ಥಿಗಳ ಭವಿಷ್ಯ ಬುಧವಾರ ನಿರ್ಧಾರ

By ರಾಮನಗರ ಪ್ರತಿನಿಧಿ
|

ರಾಮಮನಗರ, ಡಿಸೆಂಬರ್ 29: ರಾಮನಗರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಣಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ ನಡೆದಿದೆ. ಜಿಲ್ಲೆಯ 118 ಗ್ರಾಮ ಪಂಚಾಯತಿಯ 1160 ಸ್ಥಾನಗಳಿಗೆ 4,266 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

ಡಿಸೆಂಬರ್ 22 ಮತ್ತು 27ರಂದು ಒಟ್ಟು ಎರಡು ಹಂತದಲ್ಲಿ ರಾಮನಗರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆದಿತ್ತು. ಜಿಲ್ಲೆಯ ನಾಲ್ಕು ತಾಲೂಕಿನ ಗ್ರಾಮ ಪಂಚಾಯತಿಗಳ ಚುನಾವಣೆ ಮತ ಎಣಿಕೆಗಾಗಿ 61 ಎಣಿಕೆ ಕೊಠಡಿ, 325 ಟೇಬಲ್‍ ವ್ಯವಸ್ಥೆ ಮಾಡಲಾಗಿದೆ.

ಪಂಚಾಯಿತಿ ಚುನಾವಣೆ; ಎರಡೂ ಕೈ ಇಲ್ಲದ ಯುವತಿಯಿಂದ ಮತದಾನ

ರಾಮನಗರ ತಾಲೂಕಿನ ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. 20 ಗ್ರಾಮ ಪಂಚಾಯಿತಿಗಳ 331 ಸ್ಥಾನಗಳಿಗ ಒಟ್ಟು 830 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ಎಣಿಕೆಗಾಗಿ 8 ಎಣಿಕೆ ಕೊಠಡಿ ಹಾಗೂ 56 ಟೇಬಲ್‍ಗಳನ್ನು ಸಿದ್ಧಪಡಿಸಲಾಗಿದ್ದು, 62 ಮೇಲ್ವಿಚಾರಕರು ಹಾಗೂ 124 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.

Gram Panchayat polls 2020 Voting: ಪಂಚಾಯಿತಿ ಫೈಟ್; 2ನೇ ಹಂತದ ಮತದಾನ ಮುಕ್ತಾಯ

ಕನಕಪುರ ತಾಲೂಕಿನಲ್ಲಿ 36 ಗ್ರಾಮ ಪಂಚಾಯತಿಯ 490 ಸ್ಥಾನಗಳಿಗ ಒಟ್ಟು 1157 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಮತ ಎಣಿಕೆಗಾಗಿ 18 ಎಣಿಕೆ ಕೊಠಡಿ ಹಾಗೂ 104 ಮತ ಎಣಿಕೆ ಟೇಬಲ್‍ಗಳನ್ನು ಸಿದ್ಧಪಡಿಸಲಾಗಿದ್ದು, 114 ಮೇಲ್ವಿಕಚರಕರು ಹಾಗೂ 228 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಮತ ಎಣಿಕೆ ಕಾರ್ಯ ರೂರಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಪಂಚಾಯಿತಿ ಚುನಾವಣೆ; ರಾಮನಗರದಲ್ಲಿ ದಾಖಲೆಯ ಮತದಾನ

ಚನ್ನಪಟ್ಟಣ ತಾಲೂಕಿನ 32 ಗ್ರಾಮ ಪಂಚಾಯಿತಿಗಳ 434 ಸ್ಥಾನಗಳಿಗೆ ಒಟ್ಟು 1156 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಮತ ಎಣಿಕೆಗಾಗಿ 12 ಎಣಿಕೆ ಕೊಠಡಿ ಹಾಗೂ 84 ಮತ ಎಣಿಕೆ ಟೇಬಲ್‍ಗಳನ್ನು ಸಿದ್ಧಪಡಿಸಲಾಗಿದೆ. ಮತ ಎಣಿಕೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ

ನಡೆಯಲಿದೆ.

ಮಾಗಡಿ ತಾಲೂಕಿನ 30 ಗ್ರಾಮ ಪಂಚಾಯಿತಿಗಳ 405 ಸ್ಥಾನಗಳಿಗೆ ಒಟ್ಟು 1123 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ಎಣಿಕೆಗಾಗಿ 23 ಎಣಿಕೆ ಕೊಠಡಿ ಹಾಗೂ 81 ಮತ ಎಣಿಕೆ ಟೇಬಲ್‍ಗಳನ್ನು ಸಿದ್ಧಪಡಿಸಲಾಗಿದ್ದು, 81 ಮೇಲ್ವಿಕಚರಕರು ಹಾಗೂ 162 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಮತ ಎಣಿಕೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

English summary
Ramanagara all set for gram panchayat election counting. Counting will be held from morning 8 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X