• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ಟಿಪಿಎಸ್‌: 1ನೇ ವಿದ್ಯುತ್ ಘಟಕದ 3 ಕೋಲ್ ಫೀಡರ್ ಕುಸಿತ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಆಗಸ್ಟ್‌, 10: ರಾಯಚೂರು ಆರ್‌ಟಿಪಿಎಸ್‌ನ ಒಂದನೇ ವಿದ್ಯುತ್ ಘಟಕದ ಕಲ್ಲಿದ್ದಲು ಫೀಡರ್‌ಗಳು ಬುಧವಾರ ಕುಸಿದು ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

210 ಮೆಗಾವ್ಯಾಟ್ ಸಾಮರ್ಥ್ಯದ ಒಂದನೇ ವಿದ್ಯುತ್ ಘಟಕದ ಆರು ಕೋಲ್ ಫೀಡರ್‌ಗಳಲ್ಲಿ ಮೂರು ಕೋಲ್ ಫೀಡರ್‌ಗಳು ಕುಸಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೆ ಪ್ರಾಣಾಹಾನಿ ಸಂಭವಿಸಿಲ್ಲ.

ವಿದ್ಯುತ್ ಕ್ಷೇತ್ರದ ಖಾಸಗೀಕರಣ; ಸಿದ್ದರಾಮಯ್ಯ ಕಿಡಿವಿದ್ಯುತ್ ಕ್ಷೇತ್ರದ ಖಾಸಗೀಕರಣ; ಸಿದ್ದರಾಮಯ್ಯ ಕಿಡಿ

ಹಳೆಯ ಕೋಲ್ ಫೀಡರ್ ಕಟ್ಟಡ ಸುರಕ್ಷತೆ ಬಗ್ಗೆ ಇತ್ತೀಚೆಗೆ ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾರ ಭೇಟಿ ನೀಡಿ ಪರಿಶೀಲಿಸಿದರು. ಭಾರೀ ಪ್ರಮಾಣದಲ್ಲಿ ತೇವ ಕಲ್ಲಿದ್ದಲು ಸಂಗ್ರಹಿಸಿದ ಕಾರಣದಿಂದ ಈ ಅವಘಡ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ವಿದ್ಯುತ್ ಬೇಡಿಕೆ ಇಲ್ಲದ ಪರಿಣಾಮ ಆರ್‌ಟಿಪಿಎಸ್ ವಿದ್ಯುತ್ ಘಟಕಗಳ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

1 ಮತ್ತು 2ನೇ ವಿದ್ಯುತ್ ಘಟಕಗಳಿಗೆ ಈ ಮೂರು ಫೀಡರ್‌ಗಳಿಂದ ಕಲ್ಲಿದ್ದಲು ಪೂರೈಸಲಾಗುತ್ತದೆ. ಮೂರು ಫೀಡರ್‌ಗಳು ಬಿದ್ದ ರಭಸಕ್ಕೆ ಕಂಟ್ರೋಲ್ ರೂಂನ ಛಾವಣಿ ಕಿತ್ತು ಹೋಗಿದೆ. ಪ್ರಸ್ತುತ 6 ಫೀಡರ್‌ಗಳಲ್ಲಿ 3 ಫೀಡರ್ ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

ಆದರೆ ಈ ಮೂರು ಫೀಡರ್ ನಿರ್ವಹಿಸಲು ಕಂಟ್ರೋಲ್ ರೂಂ ಅತ್ಯಗತ್ಯವಾಗಿದೆ. ಮೂರು ಫೀಡರ್ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಕಂಟ್ರೋಲ್ ರೂಂ ತೀವ್ರ ಜಖಂಗೊಂಡಿದೆ. ಕಾಂಕ್ರಿಟ್ ಮತ್ತು ಕಬ್ಬಿಣ ಬಳಕೆಯ ನಿರ್ಮಾಣದ ಕೋಲ್ ಫೀಡರ್ ಇಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಕಂಟ್ರೋಲ್ ರೂಂನ ಒಂದು ಭಾಗದ ಛಾವಣಿ ಕಿತ್ತು ಹೋಗಿದೆ.

ಕೋಲ್ ಫೀಡರ್ ಕುಸಿದ ಪರಿಣಾಮದಿಂದ ವಿದ್ಯುತ್ ಘಟಕದ ಮಧ್ಯದಲ್ಲಿ ನೀರು ಮತ್ತು ಕಲ್ಲಿದ್ದಲು ಸೋರಿಕೆ ತೀವ್ರವಾಗಿದೆ. ಈ ಸ್ಥಳದಲ್ಲಿ ಕಾರ್ಮಿಕರು ಯಾರು ಇಲ್ಲದಿದ್ದುದರಿಂದ ಪ್ರಾಣಾಪಾಯ ತಪ್ಪಿದಂತಾಗಿದೆ.

Three Coal Feeder Collapse At RTPS First Power Unit

ಒಂದು ಮತ್ತು ಎರಡನೇ ಘಟಕಕ್ಕೆ ಕಲ್ಲಿದ್ದಲು ಪೂರೈಸುವ ವ್ಯವಸ್ಥೆ ಈಗ ಸ್ಥಗಿತಗೊಂಡಿದೆ. ಇದರ ಪುನರ್ ನಿರ್ಮಾಣ ಪ್ರಕ್ರಿಯೆ ನಿಧಾನಗತಿಯಲ್ಲಿದೆ. ಆದ್ದರಿಂದ ಪರ್ಯಾಯ ಘಟಕಗಳ ಮೇಲೆ ಆರ್‌ಟಿಪಿಎಸ್ ವಿದ್ಯುತ್ ಉತ್ಪಾದನೆ ಅವಲಂಬಿಸುವಂತೆ ಮಾಡಿದೆ. ಈಗಾಗಲೇ ಮೇಲಾಧಿಕಾರಿಗಳು ಈ ಘಟನೆಗೆ ಸಂಬಂಧಿಸಿ ಸಂಪೂರ್ಣ ಮಾಹಿತಿ ಕೇಳಲಿದ್ದಾರೆ.

ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಹಕಾ ನಿರ್ದೇಶಕ ಶಶಿಕಾಂತ್ ಮಾತನಾಡಿ, "40 ವರ್ಷಗಳ ಒಂದನೇ ವಿದ್ಯುತ್ ಘಟಕದ ಹಳೆಯ ಕೋಲ್ ಫೀಡರ್ ಕಟ್ಟಡ ಕುಸಿತವಾಗಿದೆ. ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಕೆಪಿಸಿಎಲ್ ನಿಗಮದ ತಾಂತ್ರಿಕ ನಿರ್ದೇಶಕರ ನೇತೃತ್ವದ ತಂಡ ಗುರುವಾರ ಆರ್‌ಟಿಪಿಎಸ್‌ಗೆ ಭೇಟಿ ನೀಡಲಿದ್ದಾರೆ. ಈ ಘಟನೆ ಕುರಿತು ಪರಿಶೀಲನೆ ಮಾಡಲಿದ್ದಾರೆ" ಎಂದು ಹೇಳಿದರು.

English summary
Coal feeders of first power unit Raichur Thermal Power Station (RTPS) collapsed, no loss of life at moment. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X