ರಾಯಚೂರು: ಹೆಚ್ಚಿದ ಮಳೆ, ಕಡಿಮೆಯಾಯ್ತು ವಿದ್ಯುತ್ ಬೇಡಿಕೆ

ರಾಯಚೂರು​, ಜೂನ್.20: ರಾಜ್ಯದಲ್ಲಿ ಮಳೆಯಾಗುತ್ತಿದ್ದು, ವಿದ್ಯುತ್​ ಬೇಡಿಕೆ ಕಡಿಮೆಯಾಗುತ್ತಿದೆ. ಜೊತೆಗೆ ನಿಸರ್ಗದತ್ತವಾದ ವಿದ್ಯುತ್​ ಉತ್ಪಾದನೆ ಹೆಚ್ಚಳವಾಗುತ್ತಿದೆ. ಥರ್ಮಲ್​ ಪವರ್​ ಘಟಕಗಳನ್ನು ಬಂದ್​ ಮಾಡಲಾಗಿದೆ. ವಿದ್ಯುತ್​ ಅಭಾವ ಇಲ್ಲದಿರುವುದರಿಂದ ಕೇಂದ್ರದಿಂದ ಸರಬರಾಜು ಆಗುತ್ತಿದ್ದ ಪವರ್ ಪ್ರಮಾಣದಲ್ಲಿ ಕಡಿಮೆ ತೆಗೆದುಕೊಳ್ಳಲಾಗುತ್ತಿದೆ.

ಪ್ರತಿ ವರ್ಷ ರಾಜ್ಯದಲ್ಲಿ ವಿದ್ಯುತ್​ ಅಭಾವ ಕಾಡುತ್ತಿತ್ತು. ಇನ್ನು ಬೇಸಿಗೆಯಲ್ಲಿ ಪವರ್​ ಕಟ್​ ಸಮಸ್ಯೆ ಸಾಮಾನ್ಯ ಎನ್ನುವ ಸ್ಥಿತಿ ಕಂಡು ಬರುತ್ತಿತ್ತು. ಆದರೆ ಈ ಬಾರಿ ಕರ್ನಾಟಕ ವಿದ್ಯುತ್​ ಸರಬರಾಜು ನಿಗಮದ ಅಧಿಕಾರಿಗಳು ನಿಟ್ಟಿಸುರು ಬಿಡುತ್ತಿದ್ದಾರೆ.

ರಾಯಚೂರಿನ ಆರ್​ಟಿಪಿಎಸ್​, ವೈಟಿಪಿಎಸ್​​ ಹಾಗೂ ಬಳ್ಳಾರಿಯ ಬಿಪಿಟಿಎಸ್​​ ಘಟಕಗಳನ್ನ ಬಹುತೇಕವಾಗಿ ಬಂದ್​ ಮಾಡಲಾಗಿದೆ. ಸೋಲಾರ್​ ಹಾಗೂ ವಿಂಡೋ ಪವರ್​​ ಉತ್ಪಾದನಾ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

This time electricity demand is low in State
​​

ಕಳೆದ ಬೇಸಿಗೆಯಲ್ಲಿ 10,800 ಮೆಗಾವಾಟ್​ವರೆಗೆ ವಿದ್ಯುತ್​ ಬೇಡಿಕೆಯಿತ್ತು. ಆದರೆ ಈಗ ಏಳರಿಂದ ಎಂಟು ಸಾವಿರ ಮೆಗಾವಾಟ್​ಗೆ ಕುಸಿದಿದೆ. ರಾಯಚೂರಿನ ಆರ್​ಟಿಪಿಎಸ್​​ನ 8, ವೈಟಿಪಿಎಸ್​​ನ 2 ಹಾಗೂ ಬಿಟಿಪಿಎಸ್​ನ ಮೂರು ಘಟಕಗಳಿಂದ 4,240 ಮೆಗಾವಾಟ್​ ವಿದ್ಯುತ್​ ಉತ್ಪಾದನಾ ಸಾಮರ್ಥ್ಯವಿದೆ.

ಸದ್ಯಕ್ಕೆ ಸೋಲಾರ್​ ಹಾಗೂ ವಿಂಡೋ ಪವರ್​ ಮೂಲಕ ಸುಮಾರು ಮೂರು ಸಾವಿರ ಮೆಗಾವಾಟ್​ ಉತ್ಪಾದನೆಯಾಗುತ್ತಿದೆ. ಹೀಗಾಗಿ ಆರ್​ಟಿಪಿಎಸ್​ನ 4, 5 ಮತ್ತು 8ನೇ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದವುಗಳನ್ನ ಬಂದ್​ ಮಾಡಲಾಗಿದೆ.

This time electricity demand is low in State

ಸದ್ಯದ ವಾತಾವರಣ ಹಾಗೂ ರಾಜ್ಯ ಸರ್ಕಾರವು ಹಸಿರು ಇಂಧನಕ್ಕೆ ನೀಡಿರುವ ಆದ್ಯತೆಯಿಂದ ಲಾಭದಾಯಕವಾಗುತ್ತಿದೆ. ಪರ್ಯಾಯ ಮೂಲಗಳಿಂದ ವಿದ್ಯುತ್​ ಉತ್ಪಾದನಾ ಕಾರ್ಯ ಯಶಸ್ವಿಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+