ಕೊರೊನಾ: ಮಂತ್ರಾಲಯದಿಂದ ರಾಯರ ಭಕ್ತರಿಗೆ ವಿಶೇಷ ಪ್ರಕಟಣೆ

ರಾಯಚೂರು, ಮಾರ್ಚ್ 16: ಕೊರೊನಾ ಭೀತಿ ದೇಶದಲ್ಲೂ ಹಬ್ಬಿದ್ದು ಮಾಲ್, ಚಿತ್ರಮಂದಿರಗಳು ಸೇರಿದಂತೆ ಎಲ್ಲವನ್ನು ಬಂದ್ ಮಾಡಲಾಗಿದೆ ಆದರೆ ಮಂತ್ರಾಲಯದಲ್ಲಿ ಎಂದಿನಂತೆ ರಾಯರ ದರ್ಶನ ಪಡೆಯಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ರಾಯರ ದರ್ಶನ ಅಭಾದಿತ ಎಂದಿರುವ ಮಂತ್ರಾಲಯ ಶ್ರೀ ರಾಘವೇಂದ್ರ ಮಠವು , ಮದುವೆ ಮತ್ತಿತರೆ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಮಂದಿ ಸೇರುವಂತಿಲ್ಲ ಎಂದು ಹೇಳಿದೆ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ನೂರಾರು ಮಂದಿ ವಿದೇಶದಿಂದ ಬಂದ ಭಾರತೀಯರು ಕನಿಷ್ಠ 15 ದಿನಗಳವರೆಗೆ ಶ್ರೀಮಠಕ್ಕೆ ಬರಬಾರದೆಂದು ಶನಿವಾರ ಮನವಿ ಮಾಡಿತ್ತು. ಅದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ರಾಯರ ದರ್ಶನಕ್ಕೆ ಅವಕಾಶವಿಲ್ಲ, ಮಠವನ್ನು ಮುಚ್ಚಲಾಗುತ್ತಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿತ್ತು. ಮುಂದಿನ 15 ದಿನಗಳ ಕಾಲ ವಧು-ವರರ ತಲಾ 10-15 ಮಂದಿ ಮಾತ್ರ ಮದುವೆ ಮುಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

Special Notification To Devotees Of Mantralaya

ಮಂತ್ರಾಲಯಕ್ಕೆ ಬರುವ ಭಕ್ತರು ಮಾಸ್ಕ್ ಹಾಗೂ ಸ್ಯಾನಿಟೈಸರ್ ತರುವ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಿದೆ.ಮಠದಲ್ಲಿ ಪಂಚಾಮೃತ ಮಾತ್ರ ನಿಷಿದ್ಧವಾಗಿದ್ದು, ಪ್ರಸಾದ ಎಂದಿನಂತಿರುತ್ತದೆ.

ಈ ಕುರಿತು ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದು, ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡಬೇಡಿ 'ಆತ್ಮೀಯ ಸಹೃದಯರ ಮಾಹಿತಿಗೆ, ಮಾನ್ಯರೇ ಭವರೋಗ ವೈದ್ಯ ನಮ್ಮ ಗುರುರಾಯರು. ಮಠ ಕೊರೊನಾ ಹರಡುವಿಕೆ ಪ್ರಯುಕ್ತ ಮುಚ್ಚಲಾಗುತ್ತಿದೆ ಎಂಬುದು ವದಂತಿ ನಂಬಬೇಡಿ' ಎಂದು ಪೋಸ್ಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+