ರಾಯಚೂರು: ಬುದ್ಧಿ ಹೇಳಿದಕ್ಕೆ ಅಪ್ಪನನ್ನೇ ಕೊಂದ ಮಗ

Posted By: ರಾಯಚೂರು ಪ್ರತಿನಿಧಿ
Subscribe to Oneindia Kannada

ರಾಯಚೂರು, ಡಿಸೆಂಬರ್ 30: ತಂದೆ ಹೇಳಿದ ಬುದ್ಧಿಮಾತು ಆತನ ಜೀವಕ್ಕೆ ಎರವಾಗಿದೆ. ಬುದ್ಧಿ ಮಾತು ಹೇಳಿದ್ದಕ್ಕೆ ಮಗ ತಂದೆಯನ್ನೇ ಕೊಂದು ಬಿಟ್ಟಿದ್ದಾನೆ.

ರಾಯಚೂರು: ವಿಷ ಸೇವಿಸಿ ಒಟ್ಟಿಗೆ ಪ್ರಾಣ ಬಿಟ್ಟ ಪ್ರೇಮಿಗಳು

ಹೌದು, ಇಂತಹದ್ದೊಂದು ಘಟನೆ ರಾಯಚೂರಿನ ಲಿಂಗಸಗೂರು ತಾಲ್ಲೂಕಿನ ದೇಸಾಯಿ ಬೊಗಾಪುರದಲ್ಲಿ ನಡೆದಿದೆ. ತಂದೆ ವೆಂಕನಗೌಡ (55) ಮಗ ದೇವರಾಜನಿಗೆ ಬದುಕಿನ ಬಗ್ಗೆ ಬುದ್ಧಿ ಮಾತು ಹೇಳಿದ್ದಕ್ಕೆ ಕುಪಿತಗೊಂಡ ಮಗ ತಂದೆಯ ಪ್ರಾಣವನ್ನೇ ತೆಗೆದು ಬಿಟ್ಟಿದ್ದಾನೆ.

Son murders his father for constantly giving advise

ಯುವಕ ದೇವರಾಜು ಮನೆಯ ಕಡೆ ಗಮನ ಕೊಡದೆ, ಹೊಲದಲ್ಲಿ ತಂದೆಗೆ ಸಹಾಯ ಮಾಡದೆ ಉಡಾಳನಾಗಿ ತಿರುಗುತ್ತಿದ್ದರಿಂದ ವೆಂಕನಗೌಡ, ದೇವರಾಜುವನ್ನು ಬೈದಿದ್ದಾರೆ ಇದರಿಂದ ಕೋಪಗೊಂಡ ದೇವರಾಜು ವೆಂಕಯ್ಯನನ್ನು ಹೊಡೆದು ಕೊಂದು ದೇಹವನ್ನು ನದಿಗೆ ಬಿಸಾಡಿಬಿಟ್ಟಿದ್ದಾನೆ.

ಘಟನೆ ಒಂದು ದಿನ ತಡವಾಗಿ ಬೆಳಕಿಗೆ ಬಂದಿದ್ದು, ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ದೇವರಾಜು ಪೊಲೀಸರ ವಶದಲ್ಲಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Rayachuru District, Lingasgoor taluk's Bogapura village son Devaraju killed his father Venkayya for giving life advises. He beats his father to death and thrown his body to the river.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ