ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಒತ್ತಾಯ: ಸಿಎಂ ಪತ್ರ
ರಾಯಚೂರು, ಡಿಸೆಂಬರ್ 15 : ಮುಂಬರುವ ಕರ್ನಾಟಕ ರಾಜ್ಯದ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಪ್ರಕಾರ ನಡೆಸಬೇಕು ಎಂದು ಚುನಾವಣೆ ಆಯೋಗಕ್ಕೆ ಒತ್ತಾಯಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾನ್ವಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು ಮತ್ತು ಖುದ್ದಾಗಿ ಭೇಟಿಯಾಗಿ ಮನವಿ ಮಾಡಲಾಗುವುದು ಎಂದರು.

ಇವಿಎಂ ಯಂತ್ರದಲ್ಲಿ ಮತದಾನ ವಿಚಾರ. ಟ್ಯಾಂಪರ ಆಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ಬಳಸಿಯೇ ಚುನಾವಣೆ ನಡೆಸುವಂತೆ ಆಯೋಗಕ್ಕೆ ಪತ್ರ ಬರೆದು ಒತ್ತಾಯ ಮಾಡುತ್ತೇನೆ.
ಗುಜರಾತ್ ಹಿಮಾಚಲ ಪ್ರದೇಶ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ಅನೇಕ ಎಕ್ಸಿಟ್ ಪೋಲ್ ಗಳ ಸರ್ವೆ ತಪ್ಪಾಗಿ ಬಂದಿರುವ ಉದಾಹರಣೆ ಇದೆ. ಯಡಿಯೂರಪ್ಪನವರು ಹತಾಶರಾಗಿದ್ದಾರೆ. ಸೋಲಿನ ಭೀತಿಯಿಂದ ಕೆಟ್ಟ ಪದಗಳನ್ನ ಬಳಸುತಿದ್ದಾರೆ.

ಅದಕ್ಕಿಂತಕಲೂ ಕೆಟ್ಟ ಪದ ನಾನು ಬಳಸಬಲ್ಲೆ. ನಾನು ಹಳ್ಳಿಯಿಂದ ಬಂದವನು.ಯಡಿಯೂರಪ್ಪ ಜೈಲಿಗೆ ಹೋಗಿದ್ದು ಸತ್ಯ. 42 ಪ್ರಕರಣಗಳಲ್ಲಿ ಅವರು ಬಾಗಿಯಾಗಿದ್ದಾರೆ.ಇಂದಿರಾಗಾಂಧಿ ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದರು ಯಡಿಯೂರಪ್ಪ ಅವರ ಹಾಗೆ ಚೆಕ್, ಲಂಚ ಪಡೆದು ಜೈಲಿಗೆ ಹೋಗಿರಲಿಲ್ಲ ಎಂದು ಹೇಳಿದರು.
ಮೈಸೂರು ಮಿನರಲ್ ಮೂಲಕ ಮೈನಿಂಗ್ ವಿಚಾರ ಎಚ್.ಡಿ.ಕೆ ಆರೋಪ ಸುಳ್ಳು. ಅವರದು ಹಿಟ್ ಆಂಡ್ ರನ್ ಆರೋಪ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ ಅಚ್ಛೆ ದಿನ ಬರಲೇ ಇಲ್ಲ. 'ಕಬ್ ಆಯೇಗಾ ಮಾಲೂಮ್ ನಹಿ' ಎಂದು ವ್ಯಂಗ್ಯವಾಡಿದರು.












Click it and Unblock the Notifications