ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ಟಿಪಿಎಸ್‌ನಲ್ಲಿ ತಾಂತ್ರಿಕ ಸಮಸ್ಯೆ: 4 ಘಟಕಗಳ ವಿದ್ಯುತ್ ಉತ್ಪಾದನೆ ಸ್ಥಗಿತ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು ಜನವರಿ 23: ತಾಂತ್ರಿಕ ಸಮಸ್ಯೆಗಳಿಂದಾಗಿ ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್ ಸ್ಥಾವರದ(ಆರ್‌ಟಿಪಿಎಸ್)ಲ್ಲಿ ಉತ್ಪಾದನೆ ಹಠಾತ್ ಭಾನುವಾರ ಕುಸಿದಿದೆ.

ವಾರ್ಷಿಕ ನಿರ್ವಾಹಣೆಗಾಗಿ 4ನೇ ವಿದ್ಯುತ್ ಘಟಕದ ಉತ್ಪಾದನೆ , ಬಾಯ್ಲರ್ ಟ್ಯೂಬ್ ಸೋರಿಕೆಯಿಂದ 210 ಮೆಗಾವಾಟ್ ಸಾಮರ್ಥ್ಯದ 6ನೇ ಘಟಕದ ವಿದ್ಯುತ್ ಉತ್ಪಾದನೆ ಮತ್ತು 5ನೇ ವಿದ್ಯುತ್ ಘಟಕದಲ್ಲಿ ಹಾರುಬೂದಿ ಹೊರ ಹಾಕುವ ಪೈಪ್ ಲೈನ್ ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಉತ್ಪಾದನೆ ಸ್ಥಗಿತಗೊಳಿಸಿದೆ.

ಆರ್‌ಟಿಪಿಎಸ್ ಒಂದನೇ ವಿದ್ಯುತ್ ಘಟಕ ತೆರವಿಗೆ ಕೆಪಿಸಿಎಲ್ ನಿಗಮ ಚಿಂತನೆಆರ್‌ಟಿಪಿಎಸ್ ಒಂದನೇ ವಿದ್ಯುತ್ ಘಟಕ ತೆರವಿಗೆ ಕೆಪಿಸಿಎಲ್ ನಿಗಮ ಚಿಂತನೆ

ಒಟ್ಟು 8 ವಿದ್ಯುತ್ ಘಟಕಗಳಲ್ಲಿ 1,4,5 ಮತ್ತು 6ನೇ ವಿದ್ಯುತ್ ಘಟಕಗಳ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ 1.720 ಮೆಗಾವಾಟ್ ಸಾಮರ್ಥ್ಯದಲ್ಲಿ 560 ಮೆಗಾವಾಟ್ ಮಾತ್ರ ಉತ್ಪಾದನೆ ಆಗುತ್ತಿದೆ. ಕಲ್ಲಿದ್ದಲು ಗುಣಮಟ್ಟ ಮತ್ತು ಪೂರೈಕೆ ಪ್ರಮಾಣದಲ್ಲಿಯಾವುದೇ ತೊಂದರೆಯಿಲ್ಲ.

Power Generation Outage Of 4 Units In Raichur Power Corporation Limited

ಸದ್ಯಕ್ಕೆ 3.20 ಲಕ್ಷ ಮೆಟ್ರಿಕ್ ಕಲ್ಲಿದ್ದಲು ದಾಸ್ತಾನಿದೆ. ಅಷ್ಟೇ ಅಲ್ಲದೆ ಮೂರು ಗಣಿಗಳು ಮತ್ತು ಆಮದು ಸೇರಿ ಪ್ರತಿದಿನ ತಲಾ 7-8 ರೈಲ್ವೆ ರೇಕ್ (ಪ್ರತಿ ರೇಕ್ 3,500 ಮೆಟ್ರಿಕ್ ಟನ್)ಗಳು ಆರ್‌ಟಿಪಿಎಸ್‌ಗೆ ತಲುಪುತ್ತಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಿದ್ಯುತ್ ಉತ್ಪಾದನೆ ಹಠಾತ್ ಕುಸಿತಕ್ಕೆ ಕಾರಣವಾದ 5 ನೇ ವಿದ್ಯುತ್ ಘಟಕದಲ್ಲಿ ತಾಂತ್ರಿಕ ಸಮಸ್ಯೆ ನಿವಾರಿಸಿದ್ದು, ಕ್ರಮೇಣ ಪೂರ್ಣ ಸಾಮರ್ಥ್ಯದ ಉತ್ಪಾದನೆ ಸಾಧ್ಯವಾಗಲಿದೆ.

ಬಾಯ್ಲರ್ ಟ್ಯೂಬ್ ಸೋರಿಕೆಯಿಂದ 6ನೇ ಘಟಕ ಸ್ಥಗಿತವಾಗಿದ್ದು, ರಿಪೇರಿ ಕಾರ್ಯ ನಡೆಯುತ್ತಿದ್ದು ಇನ್ನೆರಡು ದಿನಗಳಲ್ಲಿ ಉತ್ಪಾದನೆ ಆರಂಭವಾಗಲಿದೆ ಎಂದು ಆರ್ ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕಾ ನಿರ್ದೇಶಕ ಸಿ.ಎಂ.ದಿವಾಕರ್ ಅವರು ತಿಳಿಸಿದರು.

ಇನ್ನು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಒಂದನೇ ವಿದ್ಯುತ್ ಉತ್ಪಾದನೆಯ ಘಟಕದ ಆಧುನೀಕರಣಕ್ಕೆ ಕರ್ನಾಟಕ ವಿದ್ಯುತ್ ನಿಗಮ ಯೋಜಿಸಿದೆ. 30ವರ್ಷಗಳಷ್ಟು ಹಳೆಯದಾದ ಆರ್‌ಟಿಪಿಎಸ್‌ನ ಮೊದಲೆರಡು ಘಟಕಗಳ ಪೈಕಿ 210 ಮೆಗಾವಾಟ್ ಸಾಮರ್ಥ್ಯದ ಒಂದನೇ ವಿದ್ಯುತ್ ಘಟಕವನ್ನು ಆಧುನೀಕರಣ ಕೈಗೆತ್ತಿಕೊಳ್ಳಲು ಚಿಂತನೆ ನಡೆಸಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡುವುದು ಕೆಪಿಸಿಗೆ ಸವಾಲಾಗಿದೆ. ಹೊಸ ಯೋಜನೆಗಳಿಗೆ ಕಲ್ಲಿದ್ದಲು ಲಭ್ಯತೆ ಸಮಸ್ಯೆಯೂ ಎದುರಾಗಿದೆ. ವಿದ್ಯುತ್ ಉತ್ಪಾದಿಸುತ್ತಿರುವ ಹಾಲಿ ವಿದ್ಯುತ್ ಘಟಕಗಳೂ ಸುಮಾರು 25ವರ್ಷ ದಾಟಿದ್ದರಿಂದ ನವೀಕರಣಕ್ಕೆ ಕೆಪಿಸಿಎಲ್ ಮುಂದಾಗಿದೆ.

English summary
technical problems in Raichur Power Corporation Limited. so that Power generation outage of 4 units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X