PM Modi Helicopter: ಕೆಸರು ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಹೆಲಿಕಾಪ್ಟರ್; ಮೇಲೆತ್ತಲು ಹರಸಾಹಸ

ರಾಯಚೂರು, ಮೇ 2: ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಹೆಲಿಕಾಪ್ಟರ್ ಕೆಸರು ಗದ್ದೆಯಲ್ಲಿ ಸಿಲುಕಿದ್ದು, ಮೇಲೆತ್ತಲು ಹರಸಾಹಸ ಪಡಬೇಕಾಯಿತು. ಭದ್ರತಾ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ಬೆಂಗಾವಲು ಹೆಲಿಕಾಪ್ಟರ್ ಸಿಲುಕಬೇಕಾಯಿತು.

ಸಿಂಧನೂರಿನ ಹೊಸಳ್ಳಿ ಕ್ಯಾಂಪನ್ ಹೆಲಿಪ್ಯಾಡ್‌ನಲ್ಲಿ ಸಿಲುಕಿರುವ ಹೆಲಿಕಾಪ್ಟರ್ ಮೇಲೆತ್ತಲು 100ಕ್ಕೂ ಹೆಚ್ಚು ಜನರು ಮತ್ತು ಜೆಸಿಬಿಯಿಂದ ಪ್ರಯತ್ನಪಡುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

 PM Narendra Modis Escort Helicopter Gets Stuck In Mud Field; Struggle Underway To Lift

ಹೆಲಿಪ್ಯಾಡ್ ಅನ್ನು ಭತ್ತದ ಗದ್ದೆಯಲ್ಲಿ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಹೆಲಿಕಾಪ್ಟರ್ ಅನ್ನು ಲ್ಯಾಂಡಿಂಗ್ ಮಾಡಲಾಗಿತ್ತು. ನೆಲದ ಕೆಳಗೆ ಇನ್ನು ಹಸಿಯಾಗಿರುವುದು ಮತ್ತು ಹೆಚ್ಚಿನ ಭಾರದ ಕಾರಣದಿಂದ ಹೆಲಿಕಾಪ್ಟರ್ ನೆಲದೊಳಗೆ ಕುಸಿದಿದೆ.

ನರೇಂದ್ರ ಮೋದಿ ಅವರು ಸಿಂಧನೂರಿನ ಸಮಾವೇಶ ಮುಗಿಸಿ ಕಲಬುರಗಿಗೆ ತೆರಳಬೇಕಿತ್ತು. ಆಗ ಬೆಂಗಾವಲು ಹೆಲಿಕಾಪ್ಟರ್ ಟೇಕ್ ಆಫ್ ಆಗದೆ ಕೆಸರು ಗದ್ದೆಯಲ್ಲಿ ಮತ್ತು ಸಿಲುಕಿತು. ಆಗ ಆ ಹೆಲಿಕಾಪ್ಟರ್ ಅಲ್ಲೇ ಬಿಟ್ಟು ನರೇಂದ್ರ ಮೋದಿ ಇನ್ನೊಂದು ಬೆಂಗಾವಲು ಹೆಲಿಕಾಪ್ಟರ್ ಜೊತೆಗೆ ಕಲಬುರಗಿಗೆ ತೆರಳಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಲಬುರಗಿಯಲ್ಲಿ ಬಿಜೆಪಿ ಪರ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಮೋದಿ ಮೇನಿಯಾ ಸೃಷ್ಟಿಯಾಗಿದ್ದು, ಮತದಾರರನ್ನು ಬಿಜೆಪಿಯತ್ತ ಸೆಳೆಯುತ್ತಿದ್ದಾರೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+