ರಾಜ್ಯದ ಶಾಂತಿಯನ್ನು ಕದಡುವುದಕ್ಕೆ ಮೋದಿ ಆಗಮನ : ರೇವಣ್ಣ
ರಾಯಚೂರು, ಫೆಬ್ರವರಿ 04: ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಶಾಂತಿಯನ್ನ ಕದಡುವುದಕ್ಕೆ ಬರುತ್ತಾರೆ. ರಾಜ್ಯದ ಅಭಿವೃದ್ಧಿ, ಸಾಮಾನ್ಯ ಜನರ ಏಳಿಗೆ ವಿಚಾರವನ್ನ ಪ್ರಸ್ತಾಪ ಮಾಡುವುದಿಲ್ಲ.
ನರೇಂದ್ರ ಮೋದಿ ಶಾಂತಿ ಕದಡಲು ಬಂದ್ರೆ, ಅಮೀತ್ ಷಾ ಅವರು ಬೆಂಕಿ ಹಚ್ಚೋಕೆ ಬರುತ್ತಾರೆ ಹೊರತು ರಾಜ್ಯದ ಅಭಿವೃದ್ಧಿಗೆ ಬರುತ್ತಿಲ್ಲ ಎಂದು ಸಾರಿಗೆ ಸಾರಿಗೆ ಸಚಿವ ರೇವಣ್ಣ ಅವರು ಆರೋಪಿಸಿದ್ದಾರೆ.

ಹಿಂದುತ್ವದ ಹೆಸರಿನಲ್ಲಿ ಜನರನ್ನು ಸಂಘಟನೆ ಮಾಡಲು ತಂತ್ರ ಹೂಡಿದೆ. ಸತ್ತವರೆಲ್ಲ ಬಿಜೆಪಿಯವರಾ? ಪಕ್ಷದ ಪ್ರಣಾಳಿಕೆ ಇಟ್ಟು ರಾಜಕೀಯ ಮಾಡಲಿ, ಸಾವಿನ ಮನೆಯಲ್ಲಿ ಜಂತಿ ಎಣಿಸುವ ಕೆಲಸ ರಾಜಕೀಯವಲ್ಲ.
ಸಮಾಜದ ಮಧ್ಯೆ ಒಡಕು ತಂದು ರಾಜಕೀಯ ಮಾಡಲು ಆಗಲ್ಲ. ಇದು ಬಸವಣ್ಣನವರ ನಾಡು, ಸಾಧು ಸಂತರು ರಾಜ್ಯ ಕಟ್ಟಿದ್ದಾರೆ. ಇಲ್ಲಿ ಬಿಜೆಪಿಯವರ ಯತ್ನ ನಡೆಯಲ್ಲ, ದೇಶದಲ್ಲೇ ನಮ್ಮದು ಶ್ರೇಷ್ಠ ನಾಡು, ಇದು ಉತ್ತರ ಭಾರತ ಅಲ್ಲ, ಬಿಜೆಪಿಯವರದ್ದು ಇಲ್ಲಿ ನಡೆಯಲ್ಲ ಎಂದರು.












Click it and Unblock the Notifications