ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು; ರಾಂಪೂರು ಜಲಾಶಯದ ನೀರು ಕುಡಿದ ಸಚಿವರು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಜೂ.14: ರಾಂಪೂರು ಜಲಾಶಯದ ನೀರು ಕುಡಿಯುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕುಡಿಯುವ ನೀರಿನ ಸುರಕ್ಷತೆ ಮತ್ತು ಶುದ್ಧೀಕರಣ ಬಗ್ಗೆ ಜನರಿಗೆ ಭರವಸೆ ಮೂಡಿಸಿದರು.

ಸೋಮವಾರ ಜಲಾಶಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರು ಶುದ್ಧೀಕರಣಕ್ಕೆ ಸಂಬಧಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ, ನಂತರ ಸ್ವತಃ ಸಚಿವರೇ ನೀರು ಸೇವಿಸುವ ಮೂಲಕ ನಗರಕ್ಕೆ ಪೂರೈಕೆಯಾಗುವ ನೀರು ಶುದ್ಧವಾಗಿದೆ ಎಂದರು.

ಏನಾದರೂ ನಡೆಯುತ್ತದೆ ಎನ್ನುವ ಮನೋಭಾವನೆಯನ್ನು ಅಧಿಕಾರಿಗಳು ಬಿಟ್ಟು, ಜನರಿಗೆ ಶುದ್ಧ ಕುಡಿಯುವ ನೀರು ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು. ನಗರಸಭೆ ಸಭಾಂಗಣದಲ್ಲಿ ಕಲುಷಿತ ಕುಡಿವ ನೀರಿನಿಂದ ಮೃತಪಟ್ಟ ಮೂವರಿಗೆ ನಗರಸಭೆಯಿಂದ ತಲಾ 10 ಲಕ್ಷ ಚೆಕ್ ವಿತರಿಸಿದರು.

ರಾಯಚೂರು ಕಲುಷಿತ ನೀರು ಸೇವನೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆರಾಯಚೂರು ಕಲುಷಿತ ನೀರು ಸೇವನೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ರಾಯಚೂರು ನಗರದ 35 ವಾರ್ಡ್‌ಗಳಿಗೆ ಕಲುಷಿತ ನೀರು ಪೂರೈಕೆಯಾದ ಪರಿಣಾಮ ಮೇ 31ರಂದು ವಾಂತಿ ಬೇಧಿ ಉಲ್ಭಣಗೊಂಡು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಹಲವಾರು ಮಂದಿ ಗಂಭೀರ ಪರಿಸ್ಥಿತಿಯಲ್ಲಿ ರಿಮ್ಸ್‌ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವಾರದ ಅಂತರದಲ್ಲಿ ಸಾವಿನ ಸಂಖ್ಯೆ 6ಕ್ಕೇ ಏರಿಕೆಯಾಗಿದೆ.

Breaking: ರಾಯಚೂರು ಕಲುಷಿತ ನೀರು ಪ್ರಕರಣ: ಅಗತ್ಯ ಬಿದ್ದರೆ ಕ್ರಮಿನಲ್ ಮೊಕದ್ದಮೆBreaking: ರಾಯಚೂರು ಕಲುಷಿತ ನೀರು ಪ್ರಕರಣ: ಅಗತ್ಯ ಬಿದ್ದರೆ ಕ್ರಮಿನಲ್ ಮೊಕದ್ದಮೆ

ರಾಜ್ಯ ಸರಕಾರದ 5 ಲಕ್ಷ ಶೀಘ್ರದಲ್ಲೆ ತಲುಪಿಸುವ ಭರವಸೆ

ರಾಜ್ಯ ಸರಕಾರದ 5 ಲಕ್ಷ ಶೀಘ್ರದಲ್ಲೆ ತಲುಪಿಸುವ ಭರವಸೆ

"ರಾಂಪೂರು ಜಲಾಶಯದ ಕುಡಿವ ನೀರಿನ ಘಟಕವನ್ನು ನೋಡಿದಾಗ ಅತ್ಯಂತ ಬೇಸರವೆನಿಸುತ್ತದೆ" ಎಂದು ಸಚಿವರು ಅಲ್ಲಿಯ ಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇಂತಹ ಘಟನೆಗಳು ಮತ್ತೇ ಮರುಕಳುಹಿಸದಂತೆ ಎಚ್ಚರ ವಹಿಸಬೇಕು. ಕಲುಷಿತ ಕುಡಿಯುವ ನೀರಿನಿಂದ ಉಂಟಾದ ಪರಿಸ್ಥಿತಿ ನಿವಾರಿಸಲು ನಗರಸಭೆಯ ಎಲ್ಲಾ ಸದಸ್ಯರು ಪಕ್ಷಬೇಧ ಮರೆತು, ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿ, ಸಂತ್ರಸ್ತ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡುವ ನಿರ್ಣಯ ಕೈಗೊಂಡಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಇದು ರಾಜ್ಯಕ್ಕೆ ಮಾದರಿಯಾಗಿದೆ. ಪರಿಹಾರ ವಿತರಿಸುವುದರಿಂದ ಮೃತಪಟ್ಟವರಿಗೆ ಜೀವ ಕೊಡಲು ಸಾಧ್ಯವಿಲ್ಲ. ಆದರೆ, ಆರ್ಥಿಕವಾಗಿ ಅವರಿಗೆ ನೆರವು ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಇನ್ನೂ ಎರಡು, ಮೂರು ದಿನಗಳಲ್ಲಿ ವಿತರಿಸಲಾಗುತ್ತದೆಂದು ಹೇಳಿದರು.

ಮುಂದೆ ಇಂತಹ ಘಟನೆ ನಡೆಯಬಾರದು

ಮುಂದೆ ಇಂತಹ ಘಟನೆ ನಡೆಯಬಾರದು

ನಿರ್ಲಕ್ಷತೆಯಿಂದ ಕಲುಷಿತ ನೀರು ಪೂರೈಸಿ ಐವರ ಸಾವಿಗೆ ಕಾರಣರಾದ ಅಧಿಕಾರಿಗಳಿಗೆ ಈಗಾಗಲೇ ಶಿಕ್ಷೆ ನೀಡಲಾಗಿದೆ. ಇನ್ನೂ ಮುಂದೆ ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ಪ್ರತಿಯೊಬ್ಬ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಎಂದರು. ಸಂಸದ ರಾಜಾ ಅಮರೇಶ್ವರ ನಾಯಕ ಅವರು ಮಾತನಾಡಿ, "ಕಲುಷಿತ ನೀರು ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿ, ತಕ್ಷಣವೇ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ. ಜೊತೆಗೆ ಶುದ್ಧ ಕುಡಿಯುವ ನೀರಿಗೆ ಸಂಬಂಧಿಸಿ ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಘಟನೆ ದುರದೃಷ್ಟಕರವಾಗಿದೆ. ಇದು ನಡೆಯಬಾರದಾಗಿತ್ತು. ಆದರೆ, ಇನ್ನೂ ಮುಂದೆ ಇಂತಹ ಘಟನೆಗಳು ಮತ್ತೇ ಮರುಕಳುಹಿಸದಂತೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು" ಎಂದರು.

10 ಲಕ್ಷ ರೂ. ಪರಿಹಾರ ವಿತರಣೆ

10 ಲಕ್ಷ ರೂ. ಪರಿಹಾರ ವಿತರಣೆ

ಕಲುಷಿತ ನೀರು ಕುಡಿದು ಮೃತಟ್ಟಿದ್ದ ಮೃತ ಮಲ್ಲಮ್ಮ, ಗಫಾರ್ ಮತ್ತು ನೂರ್ ಮಹ್ಮದ್ ಅವರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ತಲಾ 10 ಲಕ್ಷ ರೂ. ನಗರಸಭೆಯ ಪರಿಹಾರ ವಿತರಿಸಿದರು. ಇನ್ನೂ ಎರಡು ಪ್ರಕರಣಗಳಿಗೆ ಸಂಬಂಧಿಸಿ ವರದಿ ಬಂದ ನಂತರ ಪರಿಹಾರ ನೀಡುವುದಾಗಿ ತಿಳಿಸಿದರು. ನಂತರ ರಾಂಪೂರು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿಯ ನ್ಯೂನ್ಯತೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಶುದ್ಧ ಕುಡಿವ ನೀರು ಪೂರೈಸಲು ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕಲುಷಿತ ನೀರು ಕುಡಿದರು 6 ಮಂದಿ ಸಾವು

ಕಲುಷಿತ ನೀರು ಕುಡಿದರು 6 ಮಂದಿ ಸಾವು

ವಾರದ ಹಿಂದೆ ರಾಯಚೂರು ನಗರದಲ್ಲಿ ಕಲುಷಿತ ನೀರು ಪೂರೈಕೆ ಮಾಡಿದ್ದರಿಂದ ನೂರಾರು ಮಂದಿ ನೀರು ಕುಡಿದು ಆಸ್ಪತ್ರೆ ಸೇರಿದ್ದರು. ಕಳೆದ ಶುಕ್ರವಾರ 48 ವರ್ಷದ ಜನಕರಾಜ್‌ ಎಂಬುವವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಲ್ಲಮ್ಮ(40), ಅಬ್ದುಲ್ ಗಫೂರ್(37), ಅರಬ್ ಮೊಹಲ್ಲಾ ಮಹ್ಮದ್‌ ನೂರ್(43) ಮತ್ತು ಅಬ್ದುಲ್ ಕರೀಂ(50) ಎಂಬುವವರು ಮೃತಪಟ್ಟಿಟ್ಟಿದ್ದಾರೆ. ಇವರಿಗೆ ಜಿಲ್ಲಾಡಳಿತದಿಂದ 10 ಲಕ್ಷ ಮತ್ತು ರಾಜ್ಯ ಸರಕಾರದಿಂದ 5 ಲಕ್ಷ ರೂ ಪರಿಹಾರಣ ಘೋಷಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವವರಿಗೂ ವೈದ್ಯಕೀಯ ವೆಚ್ಚವಾಗಿ 20 ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ.

English summary
6 people died allegedly due to contaminated water at Raichur. District incharge minister Shankar Patil Munenakoppa visit Rampur dam and assured to people about water purification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X