ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು: ನೆನೆಗುದಿಗೆ ಬಿದ್ದ ಗಣಿ ಕಾಮಗಾರಿ, ಭುಗಿಲೆದ್ದ ಆಕ್ರೋಶ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಡಿಸೆಂಬರ್‌, 29: ಹಟ್ಟಿಚಿನ್ನದಗಣಿ ಕಂಪನಿಯ ಮಲ್ಲಪ್ಪ ಶಾಪ್ಟ್ ಬಳಿಯಲ್ಲಿ ಸಜ್ಜುಗೊಳ್ಳುತ್ತಿರುವ 6 ಮೀಟರ್ ಸುತ್ತಳತೆಯ, 960 ಮೀಟರ್ ಆಳದ ನ್ಯೂ ಸರ್ಕ್ಯೂಲರ್ ಶಾಪ್ಟ್ ಕಾಮಗಾರಿಯ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ.

ಭೂಮೀಯ ಕೆಳಮೈಯಲ್ಲಿ ಮೂರು ಶಾಪ್ಟ್‌ಗಳಿಗೆ ಸಂಪರ್ಕ ಕಲ್ಪಿಸಿ, ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಚೆನ್ನೈ ಮೂಲದ ಶ್ರೀರಾಮ ಇಪಿಸಿ ಕಂಪನಿಗೆ ಅಂದಾಜು 232 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಟೆಂಡರ್ ನೀಡಲಾಗಿದೆ. 2013ರ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅಲ್ಲಿಂದ 36 ತಿಂಗಳೊಳಗೆ ಅಂದರೆ 2016ರ ಜನವರಿಗೆ ಕಾಮಗಾರಿ ಮುಗಿಯಬೇಕಾಗಿತ್ತು. ಅವಧಿ ಮುಗಿದು ಆರು ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ.

Breaking; ಮೈಸೂರು-ಚೆನ್ನೈ ವಂದೇ ಭಾರತ್, ಶತಾಬ್ದಿ ವೇಳಾಪಟ್ಟಿ ಬದಲು? Breaking; ಮೈಸೂರು-ಚೆನ್ನೈ ವಂದೇ ಭಾರತ್, ಶತಾಬ್ದಿ ವೇಳಾಪಟ್ಟಿ ಬದಲು?

ನೆನೆಗುದಿಗೆ ಬಿದ್ದ ಕಾಮಗಾರಿ, ಆಕ್ರೋಶ

960 ಮೀಟರ್ ಆಳದವರೆಗೆ ಶಾಫ್ಟ್ ಅನೇಕ ತಂತ್ರಜ್ಞಾನ ಅಳವಡಿಸುವ ಕೆಲಸಗಳು ನಡೆಯಬೇಕಿದೆ. ಈ ಎಲ್ಲಾ ಕಾಮಗಾರಿಗಳು ಟೆಂಡರ್ ಅವಧಿಯೊಳಗೆ ಮುಗಿಸಬೇಕಾಗಿತ್ತು. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಉತ್ಪಾದನೆ ಮಾಡಬೇಕಾಗಿದ್ದ ಶಾಷ್ಟ್ ಇನ್ನು ಕಾಮಗಾರಿ ಮುಗಿಯುವ ಹಂತದಲ್ಲಿ ಇದೆ.

Mine Work Progressing at Slow, Outrage

ಗಣಿ ಕಂಪನಿಯ ಚಿನ್ನದ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ 6 ಮೀಟರ್ ಸುತ್ತಳತೆಯ ಬೃಹತ್ ಪ್ರಮಾಣದ ಶಾಫ್ಟ್‌ ನಿರ್ಮಾಣಕ್ಕೆ ಮುಂದಾಗಿದೆ. ಭೂ ಕೆಳಮೈಯಲ್ಲಿ ಒಂದೆ ಬಾರಿಗೆ 100 ಕಾರ್ಮಿಕರು ಹೋಗಿ ಬರಲು ಹಾಗೂ ಅಧಿಕ ಪ್ರಮಾಣ ಚಿನ್ನದ ಅದಿರನ್ನು ಹೊರತರಲು ಇದು ಸಹಾಯಕವಾಗಲಿದೆ. ಈ ಕಾರಣದಿಂದ ವಿವಿಧ ದೇಶಗಳ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಕೆ ಮಾಡಿ ನ್ಯೂ ಸರ್ಕ್ಯೂಲರ್ ಶಾಪ್ಟ್ ನಿರ್ಮಾಣಕ್ಕೆ ಗಣಿ ಆಡಳಿತ ಮುಂದಾಗಿದೆ. ಮತ್ತೊಂದೆಡೆ ಕಾಮಗಾರಿ ಮಾತ್ರ ನನೆಗುದಿಗೆ ಬಿದ್ದಿದೆ ಎಂದು ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mine Work Progressing at Slow, Outrage

ಶೀಘ್ರದಲ್ಲೇ ಉತ್ಪಾದನೆಗೆ ಸಜ್ಜುಗೊಳಿಸಲು ಕ್ರಮ

ಗಣಿ ಆಡಳಿತ ಮಂಡಳಿ ಕಾಮಗಾರಿಯನ್ನು ತ್ವರಿತಗೊಳಿಸಿ, ನೂತನ ಶಾಷ್ಟ್ ಕಾಮಗಾರಿಯನ್ನು ಪೂರ್ಣಗೊಳಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೋಡಬೇಕು ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ. 'ಗಣಿ ಕಂಪನಿಯಲ್ಲಿ ಚಿನ್ನ ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ ಸರ್ಕ್ಯೂಲರ್ ಶಾಫ್ಟ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಶೀಘ್ರದಲ್ಲಿಯೇ ಉತ್ಪಾದನೆಗೆ ಸಜ್ಜುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಶೆಟ್ಟಣ್ಣನವರ ಹೇಳಿದ್ದಾರೆ.

English summary
Circular Shopt Mine work progressing at slow near hatti gold mine company. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X