ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ ನಿಲ್ಲದ ಔಷಧಿ ದಂಧೆ; ಇಬ್ಬರು ಅಮಾನತು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಸೆಪ್ಟೆಂಬರ್‌, 21: ನಗರದಲ್ಲಿ ಬಡ ರೋಗಿಗಳ ಉಪಚಾರಕ್ಕಾಗಿ ಸರ್ಕಾರ ಪೂರೈಸಿದ ಗುಣಮಟ್ಟದ ಔಷಧಿಗಳನ್ನು ಖಾಸಗಿ ಔಷಧಿ ಅಂಗಡಿಗಳಿಗೆ ಮಾರಾಟ ಮಾಡಿದ ಪ್ರಕರಣ ಬಯಲಿಗೆ ಬಂದಿದೆ. ದಂಧೆಗೆ ಸಂಬಂಧಿಸಿದಂತೆ ರಿಮ್ಸ್ ಆಸ್ಪತ್ರೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಪ್ರಕರಣ ಸತ್ಯವಾಗಿದ್ದು, ಇದೀಗ ಅಕ್ರಮ ದಂಧೆ ಸಾಬೀತು ಪಡಿಸಿದಂತಾಗಿದೆ.

ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಿಂದಲೇ ದಂಧೆ

ಹೆಚ್ಚು ಬೆಲೆ ಬಾಳುವ ವೈದ್ಯಕೀಯ ಸಾಮಾಗ್ರಿ ಧೂಳಿನಲ್ಲಿ ಸಂಗ್ರಹಿಸಲಾಗಿತ್ತು. ಹಾಗೂ ಕೊರೊನಾದ ಆಪತ್ತಿನ ಸಂದರ್ಭದಲ್ಲೂ ರೋಗಿಗಳಿಗೆ ಔಷಧಿ ನೀಡದೆ, ಖಾಸಗಿ ಔಷಧಿ ಅಂಗಡಿಯಿಂದ ಖರೀದಿಸಲು ಸೂಚಿಸಲಾಗಿತ್ತು. ಹಾಗೂ ವಿವಿಧ ಖಾಸಗಿ ತಪಾಸಣಾ ಕೇಂದ್ರಗಳಿಂದ ವರದಿ ತರಲು ಬಡ ರೋಗಿಗಳಿಗೆ ಸೂಚಿಸಲಾಗುತ್ತಿದೆ. ಈ ಎಲ್ಲಾ ಹರಗಣಗಳ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿ ಆಗಿದ್ದರೂ, ರಿಮ್ಸ್ ಮೇಲಾಧಿಕಾರಿಗಳು ಮಾತ್ರ ಕ್ಯಾರೆ ಅನ್ನದೇ ನಿರ್ಲಕ್ಷ್ಯ ಆಡಳಿತದಲ್ಲಿ ತೊಡಗಿದ್ದರು. ಆದರೆ ಬಳ್ಳಾರಿಯ ವಿಮ್ಸ್ ಪ್ರಕರಣ ನಂತರ ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಅಕ್ರಮ ಔಷಧಿಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ವರದಿಗಳು ಬರುತ್ತಿದ್ದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.

 ರಾಯಚೂರು: ರಿಮ್ಸ್ ಆಸ್ಪತ್ರೆ ನಿರ್ವಹಣೆ ಹೆಸರಿನಲ್ಲಿ ವೈದ್ಯರಿಂದಲೇ ಅಕ್ರಮ? ರಾಯಚೂರು: ರಿಮ್ಸ್ ಆಸ್ಪತ್ರೆ ನಿರ್ವಹಣೆ ಹೆಸರಿನಲ್ಲಿ ವೈದ್ಯರಿಂದಲೇ ಅಕ್ರಮ?

ಕ್ಯಾರೆ ಅನ್ನದ ಮೇಲಾಧಿಕಾರಿಗಳು

ರಿಮ್ಸ್‌ನ ಮೇಲಾಧಿಕಾರಿಗಳು ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅಕ್ರಮವಾಗಿ ಖಾಸಗಿ ಅಂಗಡಿಗಳಿಗೆ ಔಷಧಿ ಮಾರಾಟ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಕುಮಾರ್‌ ಮತ್ತು ಫಾರ್ಮಾಸಿಸ್ಟ್ ಮೃತ್ಯುಂಜಯ ಎಂಬುವವರನ್ನು ಅಮಾನತು ಮಾಡಲಾಗಿದೆ. ಆದರೆ ಇದರ ಹಿಂದೆ ಇರುವ ಮೇಲಾಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಬಹುತೇಕ ವೈದ್ಯರು ತಮ್ಮ ಸಹಾಯಕರೊಂದಿಗೆ ಈ ಆಸ್ಪತ್ರೆ ನಿರ್ವಹಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಲೇ ಇವೆ.

Medicine scam in Rims Hospital; Two suspended

ಬಡ ರೋಗಿಗಳಿಗೆ ಔಷಧಿಯನ್ನು ಹೊರಗಿನಿಂದ ಖರೀದಿಸುವಂತೆ ಚೀಟಿ ಬರೆಯುವುದು ಅಪರಾಧವಾಗಿದೆ. ಆದ್ದರೂ ಯಾವುದೇ ಭಯವಿಲ್ಲದೆ, ರಿಮ್ಸ್ ಅಧಿಕಾರಿಗಳು ರೋಗಿಗಳಿಗೆ ಹೊರಗಿನಿಂದ ಔಷಧಿ ತರಲು ಚೀಟಿ ಬರೆದುಕೊಡುತ್ತಿದ್ದಾರೆ. ಈ ಮೂಲಕ ಬಡ ರೋಗಿಗಳಿಗೆ ವಂಚಿಸಲಾಗುತ್ತಿದೆ. ಅನೇಕ ವರ್ಷಗಳಿಂದ ಲಕ್ಷಾಂತರ ರೂಪಾಯಿ ಔಷಧಿಯನ್ನು ಖಾಸಗಿ ಔಷಧಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಆದರೂ ಕೂಡ ಮೇಲಾಧಿಕಾರಿಗಳು ಇತ್ತ ಗಮನಹರಿಸದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ.

Medicine scam in Rims Hospital; Two suspended

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಔಷಧಿ, ಉಪಚಾರ ದೊರೆಯದೆ, ಅಸಹಜ ಸಾವಿನ ಪ್ರಕರಣದ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ ಎಂದು ಸ್ಥಳೀಯರ ಒತ್ತಾಯ ಆಗಿದೆ. ಬಡವರ ಜೀವ ರಕ್ಷಣೆಗಾಗಿ ಸರ್ಕಾರ ನೀಡುವ ಔಷಧಿಗಳು ಮಾರಾಟ ಮಾಡುತ್ತಿದ್ದು, ಅಮಾನವೀಯ ರಿಮ್ಸ್‌ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ.

English summary
Medicine scam continues at Raichur RIMS Hospital, two suspended, Public outcry against Rims Hospital authorities, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X