Raichur: ಫಿನಾಯಿಲ್ ವಾಸನೆಗೆ ಮೂರ್ಛೆ ತಪ್ಪಿದ ನಾಗರಹಾವು: ಸಮಯಪ್ರಜ್ಞೆಯಿಂದ ಉಳಿದ ಜೀವ
ರಾಯಚೂರು, ನವೆಂಬರ್ 15: ಫಿನಾಯಿಲ್ ವಾಸನೆಗೆ ನಾಗರ ಹಾವೊಂದು ಮೂರ್ಛೆ ಹೋಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿನಡೆದಿದೆ.
ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಿಲ್ಲಿಸಲಾಗಿದ್ದ ಇನೋವಾ ಕಾರಿನಲ್ಲಿ ಏಕಾಏಕಿ ನಾಗರ ಹಾವು ಪ್ರತ್ಯಕ್ಷವಾಗಿದೆ. ನಾಗರ ಹಾವನ್ನು ಕಂಡ ಚಾಲಕ ಭಯದಿಂದ ಹಾವು ಹೊರಬರಲು ಚಾಲಕ ಫಿನಾಯಿಲ್ ಸಿಂಪಡನೆ ಮಾಡಿದ್ದಾರೆ. ಈ ವೇಳೆ ಫಿನಾಯಿಲ್ ವಾಸನೆಗೆ ನಾಗರಹಾವು ಕಾರಿನಲ್ಲಿ ಮೂರ್ಛೆ ತಪ್ಪಿ ಬಿದ್ದಿದೆ.

ಕೂಡಲೇ ಕಾರು ಚಾಲಕ ಲಿಂಗಸೂಗೂರಿನ ಉರಗ ತಜ್ಞ ಖಾಲೀದ್ ಚಾವೂಸ್ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞರ ಸಹಾಯದಿಂದ ನಾಗರ ಹಾವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಕೂಡಲೇ ನಾಗರಹಾವಿಗೆ ಕೃತಕ ಆಮ್ಲಜನಕ ನೀಡಿ ರಕ್ಷಣೆ ಮಾಡಲಾಗಿದೆ. ಚಿಕಿತ್ಸೆಯ ಬಳಿಕ ನಾಗರ ಹಾವು ಚೇತರಿಸಿಕೊಂಡಿಕೊಂಡಿದ್ದಾರೆ. ನಂತರ ಉರಗತಜ್ಞ ಖಾಲೀದ್ ಚಾವೂಸ್ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಹಾವುಗಳಿಗೆ ಪಿಐಟಿ ಅಳವಡಿಕೆ
ಮಾನವ-ಹಾವಿನ ಸಂಘರ್ಷ ತಡೆಗಾಗಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅರಣ್ಯ ಇಲಾಖೆ ಮಹತ್ವದ ಅಧ್ಯಯನಕ್ಕೆ ಮುಂದಾಗಿದೆ. ಹಾವುಗಳಿಗೆ ನಿಷ್ಕ್ರಿಯ ಇಂಟಿಗ್ರೇಟೆಡ್ ಟ್ರಾನ್ಸ್‌ಪಾಂಡರ್ (ಪಿಐಟಿ) ಟ್ಯಾಗ್‌ಗಳನ್ನು ಅಳವಡಿಸಲು ಕರ್ನಾಟಕ ಅರಣ್ಯ ಇಲಾಖೆಯು ಸಂಶೋಧನಾ ಮೌಲ್ಯಮಾಪನ ಸಮಿತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಸಂಸ್ಥೆಗೆ ಅನುಮತಿ ನೀಡಿದೆ.
ಇದು ಹಾವುಗಳ ಚಲನವಲನವನ್ನು ಪತ್ತೆಹಚ್ಚಲು ಮತ್ತು ಮಾನವ-ಹಾವುಗಳ ಘರ್ಷಣೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ನಾಗರಹಾವು, ರಸೆಲ್ಸ್ ವೈಪರ್ ಮತ್ತು ಪಿಟ್ ವೈಪರ್‌ಗಳ ಕುರಿತು ಮೂರು ಖಾಸಗಿ ಕಾರ್ಯಯೋಜನೆಗಳ ಮುಖಾಂತರ ಕರ್ನಾಟಕ ಅರಣ್ಯ ಇಲಾಖೆಯು ಟೆಲಿಮೆಟ್ರಿಕ್ ಅಧ್ಯಯನಗಳನ್ನು ನಡೆಸುತ್ತಿವೆ.
ಅರಣ್ಯ ಇಲಾಖೆಯು ಎಲ್ಲಾ ರೀತಿಯ ಹಾವುಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ. ಕೆಟಿಆರ್ ಸಂಸ್ಥೆಯಲ್ಲಿ ತರಬೇತಿ ಪಡೆದ ಸಿಬ್ಬಂದಿ, ಉರಗತಜ್ಞದಿಂದ ರಕ್ಷಿಸಲ್ಪಟ್ಟ ಪ್ರತಿಯೊಂದು ಹಾವು ವಿಷಕಾರಿ ಅಥವಾ ವಿಷಕಾರಿಯಲ್ಲದಿದ್ದರೂ ಅದರೊಳಗೆ ಮೈಕ್ರೋಚಿಪ್ ಅನ್ನು ಸೇರಿಸುತ್ತಾರೆ. ದತ್ತಾಂಶದ ಆಧಾರದ ಮೇಲೆ ಸಂಘರ್ಷವನ್ನು ತಗ್ಗಿಸುವ ಕ್ರಮ ಇದಾಗಿದೆ.












Click it and Unblock the Notifications