ರಾಯಚೂರು: ಕೇರಳ ತಂಡದಿಂದ ಗುರ್ಜಾಪುರ ಬ್ಯಾರೇಜ್‌ನ 3 ಗೇಟ್‌ಗಳು ಓಪನ್
ರಾಯಚೂರು, ಜುಲೈ, 19: ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಅಧಿಕಾರಿಗಳ ನಡುವೆ ಸಮನ್ವಯ ಕೊರತೆ ಉಂಟಾಗಿದ್ದು, ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌ನ ಗೇಟ್‌ಗಳನ್ನು ತೆರೆದಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸಿದ್ದು, ಬಳಿಕ ಎಚ್ಚೆತ್ತ ಅಧಿಕಾರಿಗಳು ಕೇರಳ ತಂಡವನ್ನು ಕರೆಸಿ ಬ್ಯಾರೇಜ್‌ನ 3 ಗೇಟ್‌ಗಳನ್ನು ಓಪನ್ ಮಾಡಿಸಿದ್ದಾರೆ.
ಸಿಬ್ಬಂದಿ ಗೇಟ್‌ಗಳನ್ನು ತೆರೆಯಲು 5 ದಿನಗಳಿಂದ ಪ್ರಯತ್ನ ಮುಂದುವರಿಸಿದ್ದಾರೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ನೀರು ಬಿಡುವ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು, ಆರ್‌ಟಿಪಿಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆಗ ಆರ್‌ಟಿಪಿಎಸ್ ಆಡಳಿತ ಮಂಡಳಿ ಎಚ್ಚೆತ್ತುಗೊಂಡು ಬ್ಯಾರೇಜ್‌ನ ಎಲ್ಲ ಗೇಟ್‌ಗಳನ್ನು ತೆರೆದು ನೀರು ಹರಿಸುತ್ತಿತ್ತು.
ಆದರೆ, ಈ ಬಾರಿ ಕೆಬಿಜೆಎನ್‌ಎಲ್ ಅಧಿಕಾರಿಗಳು ನೀರು ಹರಿಸುವ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಆರ್‌ಟಿಪಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಕಡೆ ದೇವದುರ್ಗ ತಾಲ್ಲೂಕಿನ ಗೂಗಲ್ ಬ್ಯಾರೇಜ್ ಮತ್ತು ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ಯಾರೇಜ್ ನಿರ್ವಹಣೆ ಮಾಡುವ ಅಧಿಕಾರಿಗಳಿಗೆ ಜಲಾಶಯದಿಂದ ನದಿಗೆ ನೀರು ಬಿಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಇದ್ದ ಕಾರಣ ಗೂಗಲ್ ಬ್ಯಾರೇಜ್‌ನ ಗೇಟ್‌ಗಳನ್ನು ತೆರೆಯಲಾಗಿದೆ. ಗುರ್ಜಾಪುರ ಬ್ಯಾರೇಜ್ ಗೇಟ್‌ಗಳನ್ನು ಆರ್‌ಟಿಪಿಎಸ್ ಅಧಿಕಾರಿಗಳು ಯಾಕೆ ತೆರೆದಿಲ್ಲ ಎಂಬುದು ಇದುವರೆಗೂ ಮಾಹಿತಿ ಇಲ್ಲದಂತಾಗಿದೆ ಎಂದು ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಹೇಳುತ್ತಾರೆ.

ಸದ್ಯ ಕೃಷ್ಣಾ ನದಿಯಿಂದ 1 ಲಕ್ಷ 70 ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಒಂದು ವೇಳೆ 3 ಲಕ್ಷ ಕ್ಯೂಸೆಕ್ ನೀರು ಸಂಗ್ರಹವಾದಲ್ಲಿ ಸಂಪೂರ್ಣ ಬ್ರಿಡ್ಜ್ ಮುಳುಗಡೆಯಾಗುವ ಸಾಧ್ಯತೆಯಿದೆ. ಜೊತೆಗೆ ಗುರ್ಜಾಪುರ, ಅರಷಣಿಗಿ ಸೇರಿದಂತೆ ಸುತ್ತಲಿನ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿ ಆಗುತ್ತವೆ ಎಂದು ರೈತರು ಆತಂಕವನ್ನು ವ್ಯಕ್ತಪಡಿಸಿದರು. ಈ ಗೇಟ್‌ಗಳನ್ನು ತೆರೆಯಲು ಕೇರಳದಿಂದ ತಜ್ಞರನ್ನು ಕರೆಯಿಸಿ ಅಧಿಕಾರಿಗಳು ಹೈಡ್ರಾಮಾ ನಡೆಸಿದ್ದಾರೆ.
ಶಾಸಕರ ಭೇಟಿ:
ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಗುರ್ಜಾಪುರ ಬ್ಯಾರೇಜ್‌ಗೆ ಶಾಸಕ ದದ್ದಲ್ ಬಸನಗೌಡ ಅವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಮುಂಜಾಗ್ರತೆಯಾಗಿ ಗೇಟ್‌ನ ಬಾಗಿಲು ತೆಗೆದು ನೀರು ಹರಿಬಿಡಬೇಕು. ಕೃಷ್ಣ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಭಾಗದ ರೈತರ ಬೆಳೆಗಳಿಗೆ ಮತ್ತು ಪಂಪ್ ಸೆಟ್‌ಗಳಿಗೆ ಹಾನಿಯಾದಲ್ಲಿ ಜಿಲ್ಲಾಡಳಿತದ ಕಡೆಯಿಂದ ಸರ್ವೇ ಕಾರ್ಯ ಮಾಡಿಸಿ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

"ನದಿ ಪಾತ್ರದ ಗ್ರಾಮಗಳ ಜನರಿಗೂ ಎಚ್ಚರಿಸಿದ್ದಾರೆ. ಕೆಬಿಜೆಎನ್‌ಎಲ್ ಮತ್ತು ಆರ್‌ಟಿಪಿಎಸ್ ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಬೇಸಿಗೆಯಲ್ಲಿ ಮಾತ್ರ ವಿದ್ಯುತ್ ಘಟಕಗಳ ಉತ್ಪಾದನೆಗಾಗಿ ನೀರು ಸಂಗ್ರಹ ಮಾಡಿಕೊಳ್ಳಬೇಕು. ಮಳೆಗಾಲ ಸಮಯದಲ್ಲಿ ಬ್ಯಾರೇಜ್‌ಗೆ ಗೇಟ್‌ಗಳನ್ನು ಯಾಕೆ ಹಾಕಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಅಧಿಕಾರಿಗಳ ಎಡ್ಡವಟ್ಟಿನಿಂದ ರೈತರಿಗೆ ಭತ್ತ ನಾಟಿ ಮಾಡಲು ತೊಂದರೆಯಾಗುತ್ತಿದೆ. ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು," ಎಂದು ಕಾಡ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ ಒತ್ತಾಯಿಸಿದ್ದಾರೆ.

ಒಟ್ಟು 194 ಗೇಟ್ ಹೊಂದಿದ ಗುರ್ಜಾಪುರ ಬ್ಯಾರೇಜ್‌ನಲ್ಲಿ 94 ಗೇಟ್‌ಗಳು ತೆರೆಯಲಾಗಿತ್ತು. ಅದರಲ್ಲಿ 100 ಗೇಟ್‌ಗಳನ್ನು ತೆರೆಯದೇ ಹಾಗೆಯೇ ಬಿಟ್ಟಿದ್ದಾರೆ. ಮಂಗಳವಾರ ಕೇವಲ 3 ಗೇಟ್‌ಗಳನ್ನು ಮಾತ್ರ ತೆರೆಯಲಾಗಿದೆ. ಇನ್ನುಳಿದ 97 ಗೇಟ್‌ಗಳನ್ನು ಇನ್ನೆರಡು ದಿನಗಳಲ್ಲಿ ಸಂಪೂರ್ಣವಾಗಿ ತರೆಯಲಾಗುವುದು. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಆರ್‌ಟಿಪಿಎಸ್ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.












Click it and Unblock the Notifications