ಆಪರೇಷನ್ ಕಮಲಕ್ಕೆ ಯತ್ನಿಸಿದ ಬಿಎಸ್‌ವೈ ವಿರುದ್ಧ ಶರಣಗೌಡ ದೂರು

Recommended Video

      ಬಿ ಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ | ಬಿ ಎಸ್ ವೈ ವಿರುದ್ಧ ದೂರು ದಾಖಲು | Oneindia Kannada

      ರಾಯಚೂರು, ಫೆಬ್ರವರಿ 13: ಆಪರೇಷನ್ ಕಮಲದ ಆಡಿಯೋ ಪ್ರಕರಣದ ಮೂಲವ್ಯಕ್ತಿ ಜೆಡಿಎಸ್‌ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರು ಈಗ ತಮ್ಮನ್ನು ಆಪರೇಷನ್ ಕಮಲದ ಖೆಡ್ಡಕ್ಕೆ ಬೀಳಿಸಲು ಯತ್ನಿಸಿದವರ ವಿರುದ್ಧ ದೂರು ನೀಡಿದ್ದಾರೆ.

      ರಾಯಚೂರು ಎಸ್‌ಪಿ ಕಚೇರಿಗೆ ತೆರಳಿದ್ದ ಅವರು, ಯಡಿಯೂರಪ್ಪ, ಶಿವನಗೌಡ ನಾಯಕ್, ಪ್ರೀತಂಗೌಡ ಅವರುಗಳು ನನಗೆ ಹಣದ ಆಮೀಷ ಒಡ್ಡಿದ್ದಾರೆ, ರಾಜಕೀಯ ಒತ್ತಡ ಹೇರಿದ್ದಾರೆ ಎಂದು ದೂರು ನೀಡಿದ್ದಾರೆ.

      ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರಣಗೌಡ ಅವರು, ಒಟ್ಟು ನಾಲ್ಕು ಜನರ ವಿರುದ್ಧ ದೂರು ನೀಡಿದ್ದೇನೆ, ಯಡಿಯೂರಪ್ಪ, ಶಿವನಗೌಡ ನಾಯಕ್, ಶಾಸಕ ಪ್ರೀತಂಗೌಡ ಮತ್ತು ಮರಮಕಲ್ ಎಂಬ ಮಾಜಿ ಪತ್ರಕರ್ತನ ವಿರುದ್ಧ ದೂರು ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

      JDS leader Sharana Gouda gave complaint against Yeddyurappa

      ತಮ್ಮ ಮೇಲೆ ಒತ್ತಡ ಹೇರಿದ್ದಾಗಿ, ಹಣದ ಆಮಿಷ ಒಡ್ಡಿದ್ದಾಗಿ ಹಾಗೂ ಸವರಿಗೆ ಸಹಕರಿಸಲಿಲ್ಲವೆಂದರೆ ರಾಜಕೀಯವಾಗಿ ಮುಗಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ದಾಖಲಿಸಿರುವುದಾಗಿ ಅವರು ಹೇಳಿದ್ದಾರೆ.

      ಅಧಿವೇಶನದಲ್ಲಿ ಆಡಿಯೋ ಕ್ಲಿಪ್ ಪ್ರಕರಣವನ್ನು ಯಾವ ರೀತಿಯ ತನಿಖೆಗೆ ಒಳಪಡಿಸಬೇಕು ಎಂದು ಇನ್ನೂ ಅಂತಿಮವಾಗಿಲ್ಲ ಆದರೆ, ಪ್ರಕರಣವನ್ನು ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿಸಿದ್ದಾರೆ. ಇದು ಕುಮಾರಸ್ವಾಮಿ ಅವರ ತಂತ್ರವೇ ಎನ್ನಲಾಗುತ್ತಿದೆ.

      ಸರ್ಕಾರವು ಆ ಪ್ರಕರಣವನ್ನು ಎಸ್‌ಐಟಿಗೆ ನಿಡಲಿ ಅಥವಾ ನಿಡದಿರಲಿ, ಅಥವಾ ಸದನ ಸಮಿತಿಯನ್ನೇ ಮಾಡಲಿ. ರಾಯಚೂರು ಪೊಲೀಸರು ಈಗ ಆಡಿಯೋ ಪ್ರಕರಣದ ಬಗ್ಗೆ ತನಿಖೆ ನಡೆಸಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+