• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು ಜಿಲ್ಲಾಧಿಕಾರಿಯ ಹೆಸರಿನಲ್ಲಿಯೇ ಆನ್‌ಲೈನ್ ವಂಚಕರ ಕೈಚಳಕ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು ಜೂ.29: ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಬಾಗಲಕೋಟೆ ಮತ್ತು ‌ವಿಜಯಪುರ ಮೂಲದ ಟೀಂ ಒಂದು ಎಸಿಬಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಫೋನ್ ‌ಮಾಡಿ ದಾಳಿ ಮಾಡುತ್ತೇವೆ. ನೀವೂ ನಮ್ಮ ಖಾತೆಗೆ ಹಣ ಜಮಾ ಮಾಡಿದರೇ ದಾಳಿ ಮಾಡುವುದಿಲ್ಲ ಎಂದು ಆಮಿಷ ಒತ್ತಡಿತ್ತು. ಆ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶ್ವಸಿಯಾಗಿದರು. ಇಂತಹ ಹಲವು ಪ್ರಕರಣಗಳನ್ನು ಪತ್ತೆ ಹೆಚ್ಚಿ ಕ್ರಮ ಕೈಗೊಂಡರೂ ಸಹ ಖದೀಮರು ನಾನಾ ದಾರಿಗಳನ್ನು ಹುಡುಕಿಕೊಂಡು ಹಣ ದೋಚಲು ಹತ್ತಾರು ದಾರಿಗಳನ್ನು ಹುಡುಕಲು ಮುಂದಾಗಿದ್ದಾರೆ.

ರಾಯಚೂರು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೆಸರಿನಲ್ಲಿಯೂ ಖದೀಮರು ವಂಚನೆ ‌ಮಾಡಲು ಹೋಗಿ ಫೇಲ್ ಆಗಿದ್ದಾರೆ. ರಾಯಚೂರು ಡಿಸಿ ಚಂದ್ರಶೇಖರ್ ನಾಯಕ ಅವರ ಫೋಟೋ ವಾಟ್ಸಪ್ ಡಿಪಿಗೆ ಇಟ್ಟು ವಂಚನೆಗೆ ಯತ್ನಿಸಿದರು. ಡಿಸಿ ಹೆಸರು ಮತ್ತು ವಾಟ್ಸಾಪ್ ಡಿಪಿಗೆ ಅವರ ಫೋಟೋವನ್ನು ಬಳಕೆ ‌ಮಾಡಿ 8838440508 ಮೊಬೈಲ್ ‌ನಂಬರ್ ನಿಂದ ವಾಟ್ಸಾಪ್ ಮೂಲಕ ಜಿಲ್ಲೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಮೆಸೇಜ್ ಮಾಡಿದ್ದಾರೆ.

ಯಡಿಯೂರಪ್ಪ, ಡಿಕೆ ಶಿವಕುಮಾರ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಪ್ರಜ್ವಲ್ ರೇವಣ್ಣಯಡಿಯೂರಪ್ಪ, ಡಿಕೆ ಶಿವಕುಮಾರ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಪ್ರಜ್ವಲ್ ರೇವಣ್ಣ

ಡಿಸಿ ಫೋಟೋ ಇರುವ ವಾಟ್ಸಾಪ್ ಮೆಸೇಜ್ ಕಂಡು ಅಧಿಕಾರಿಗಳು ಶಾಕ್

ಡಿಸಿ ಫೋಟೋ ಇರುವ ವಾಟ್ಸಾಪ್ ಮೆಸೇಜ್ ಕಂಡು ಅಧಿಕಾರಿಗಳು ಶಾಕ್

ಅಮೆಜಾನ್ ಪೇ ಮೂಲಕ ಗಿಫ್ಟ್ ಕಾರ್ಡ್‌ ಗಳನ್ನು ಖರೀದಿಸುವಂತೆ ಮೆಸೇಜ್ ರವಾನಿಸಿದರು. ಜಿಲ್ಲಾಧಿಕಾರಿ ಫೋಟೋ ಇರುವ ವಾಟ್ಸಾಪ್ ಮೆಸೇಜ್ ಕಂಡು ಅಧಿಕಾರಿಗಳು ಶಾಕ್ ಆಗಿದ್ರು. ಅಷ್ಟೇ ಅಲ್ಲದೇ ಖದೀಮರು ಜಿಲ್ಲಾಧಿಕಾರಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಯೋಗಕ್ಷೇಮ ಕೂಡ ಮೆಸೇಜ್ ನಲ್ಲಿ ವಿಚಾರಣೆ ‌ಮಾಡಿದರು. ಆ ಬಳಿಕ ಅಮೆಜಾನ್ ಪೇ ಮೂಲಕ ಗಿಫ್ಟ್ ಕಾರ್ಡ್ ಗಳನ್ನು ಖರೀದಿಸುವಂತೆ ಮೆಸೇಜ್ ಮಾಡಿದ್ರು. ಕೆಲ ಅಧಿಕಾರಿಗಳು ವಾಟ್ಸಾಪ್ ಚಾಟ್ ಮಾಡಿ ಸುಮ್ಮನೇ ಆಗಿದ್ದಾರೆ.

ಕೇಂದ್ರ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ‌ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ‌ನಾಯಕ ಕೂಡ ಸಭೆಯಲ್ಲಿ ಇದ್ದರು. ಇಂತಹ ವೇಳೆಯಲ್ಲಿ ಖದೀಮರು ಜಿಲ್ಲಾಧಿಕಾರಿ ಎಂದು ಹೇಳಿಕೊಂಡು ಅಧಿಕಾರಿಗಳಿಗೆ ಮೆಸೇಜ್ ‌ಮಾಡಲು ಶುರು ಮಾಡಿದರು. ಆ ವೇಳೆ ಅಧಿಕಾರಿಗಳು ಜಿಲ್ಲಾಧಿಕಾರಿ ಎದುರೇ ಇದ್ದಾರೆ. ಆದ್ರೆ ನಮಗೆ ಮೆಸೇಜ್ ಯಾರು ಮಾಡುತ್ತಿದ್ದಾರೆ ಎಂದು ಅನುಮಾನ ಬಂದಿದೆ. ತಕ್ಷಣವೇ ಅಧಿಕಾರಿಗಳು ಸರ್ ಈ ವಾಟ್ಸಾಪ್ ನಂಬರ್ ನಿಮ್ಮದಾ ಅಂತ ಕೇಳಿದ್ದಾರೆ. ಆಗ ಜಿಲ್ಲಾಧಿಕಾರಿಗಳು ಅವರ ವಾಟ್ಸಾಪ್ ಮೆಸೇಜ್ ಗಳು ನೋಡಿ ಶಾಕ್ ಆಗಿದ್ದಾರೆ.

ಮುಂಗಾರಿನ ಆರಂಭದ ಹಬ್ಬ: ಮಣ್ಣಿನ ಎತ್ತುಗಳಿಗೆ ಪೂಜಿಸುವ ಮಣ್ಣೆತ್ತಿನ ಅಮಾವಾಸ್ಯೆಮುಂಗಾರಿನ ಆರಂಭದ ಹಬ್ಬ: ಮಣ್ಣಿನ ಎತ್ತುಗಳಿಗೆ ಪೂಜಿಸುವ ಮಣ್ಣೆತ್ತಿನ ಅಮಾವಾಸ್ಯೆ

ಒಟಿಪಿ ಪಡೆದು ವಂಚನೆ ಮಾಡುತ್ತಿದ್ದ ವಂಚಕರು

ಒಟಿಪಿ ಪಡೆದು ವಂಚನೆ ಮಾಡುತ್ತಿದ್ದ ವಂಚಕರು

ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ‌ನಾಯಕ ಹೆಸರಿನಲ್ಲಿ ಯಾರೋ ಖದೀಮರು ವಂಚನೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಅಲರ್ಟ್ ಆಗಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಫೇಕ್ ಮೆಸೇಜ್ ಬಂದರೆ ದೂರು ನೀಡಲು ‌ಸೂಚನೆ ನೀಡಿದ್ದಾರೆ. ಜೊತೆಗೆ ಖದೀಮರ ವಿರುದ್ಧ ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ‌ನಾಯಕ ಪ್ರಕರಣ ಕೂಡ ದಾಖಲು ಮಾಡಲು ಮುಂದಾಗಿದ್ದಾರೆ. ಇಷ್ಟು ದಿನಗಳ ಕಾಲ ಮೊಬೈಲ್ ಗಳಿಗೆ ಫೋನ್ ಮಾಡಿ, ನಾವು ಬ್ಯಾಂಕ್ ನವರು ನಿಮಗೆ ಒಂದು ಮೆಸೇಜ್ ಬಂದಿದೆ ಎಂದು ಹೇಳಿ ಒಟಿಪಿ ಪಡೆದು ವಂಚನೆ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಟೆಸ್ಟ್ ಮೆಸೇಜ್ ಕಳುಹಿಸಿ.. ಅದರಲ್ಲಿ ಒಂದು ಲಿಂಕ್ ಕಳುಹಿಸಿ ಆ ಲಿಂಕ್ ಒತ್ತಿದ ತಕ್ಷಣವೇ ಖದೀಮರು ತಮಗೆ ಬೇಕಾದ ದಾಖಲೆಗಳು ಪಡೆದು ಬ್ಲಾಕ್‌ ಮೆಲ್ ಮಾಡುವ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ ಹತ್ತಾರು ಪ್ರತಿಷ್ಠಿತ ಬ್ಯಾಂಕ್ ‌ನ ಹೆಸರು ಹೇಳಿ ನಿಮ್ಮ ನಂಬರ್ ಗೆ ಲೋನ್ ಆಫರ್ ಇದೆ. ನಿಮಗೆ ಉಚಿತ ಬಡ್ಡಿದರದಲ್ಲಿ ಲೋನ್ ‌ನೀಡುತ್ತೇವೆ ಎಂದು ದಾಖಲೆಗಳು ಪಡೆದು ಮೋಸ ಮಾಡುವ ಹತ್ತಾರು ‌ಕಂಪನಿಗಳು ಕೆಲಸ ಮಾಡುತ್ತಿವೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಮೊಬೈಲ್ ಬಳಕೆ ಮಾಡುವುದರ ಜೊತೆಗೆ ಖದೀಮರ ಫೋನ್ ಗಳು ಬಂದಾಗ ಎಚ್ಚರದಿಂದ ವ್ಯವಹಾರ ಮಾಡಬೇಕಾಗಿದೆ.

ಜಿಲ್ಲೆಯಲ್ಲಿ ಶೇ 4.ರಷ್ಟು ಗರ್ಭಿಣಿಯರಲ್ಲಿ ಅನಿಮಿಯಾ ಸಮಸ್ಯೆ

ಜಿಲ್ಲೆಯಲ್ಲಿ ಶೇ 4.ರಷ್ಟು ಗರ್ಭಿಣಿಯರಲ್ಲಿ ಅನಿಮಿಯಾ ಸಮಸ್ಯೆ

ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಶಿಶುಗಳಿಗೆ ಆದ್ಯತೆ ಕೊಟ್ಟು, ಅವರ ಆರೋಗ್ಯ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹತ್ವಾಕಾಂಕ್ಷಿ ಜಿಲ್ಲೆ ಮತ್ತು ಕೇಂದ್ರ ಯೋಜನೆಗಳ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಶೇ 4 ರಷ್ಟು ಗರ್ಭಿಣಿಯರಲ್ಲಿ ಗಂಭೀರ ಅನಿಮಿಯಾ ಸಮಸ್ಯೆ ಇದೆ ಎನ್ನುವುದು ವರದಿಯಲ್ಲಿದೆ. ಗರ್ಭಿಣಿಯರ ನೋಂದಣಿ ಪ್ರತಿಶತ ಆಗಿದೆ ಎನ್ನುವುದಾದರೆ, ಗರ್ಭಿಣಿಯರ ಹಿಮೋಗ್ಲೊಬಿನ್ ತಪಾಸಣೆ ಮಾಡುತ್ತಿಲ್ಲವೆ? ಶೇ 4 ರಷ್ಟು ಗರ್ಭಿಣಿಯರಲ್ಲಿ ಈ ಸಮಸ್ಯೆ ಉಳಿಯುವುದಕ್ಕೆ ಕಾರಣ ಏನೆಂಬುದು ತಳಮಟ್ಟಕ್ಕೆ ಹೋಗಿ ಪತ್ತೆ ಮಾಡಬೇಕು. ಸಮಸ್ಯೆ ನಿವಾರಣೆಗೆ ಏನಾಗಬೇಕು ಎಂಬುದನ್ನು ಸರ್ಕಾರದಿಂದ ಕೇಳಬೇಕು. ಅಧಿಕಾರಿಗಳು ಸರ್ಕಾರದ ಯೋಜನೆ ಸಮರ್ಥನೆ ಮಾಡುವ ರೀತಿ ಉತ್ತರಿಸಬಾರದು. ಪರಿಹಾರ ಕಲ್ಪಿಸುವುದಕ್ಕೆ ಏನು ಆಗಬೇಕಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದರು.

ವ್ಯಾಪಕವಾಗಿ ಜನಜಾಗೃತಿ ಅಗತ್ಯ

ವ್ಯಾಪಕವಾಗಿ ಜನಜಾಗೃತಿ ಅಗತ್ಯ

ಬಾಲ್ಯವಿವಾಹ ಯಾವ ಜಾತಿಯವರಲ್ಲಿ ಹೆಚ್ಚಾಗಿದೆ ಪತ್ತೆಮಾಡಿ. ಈ ಬಗ್ಗೆ ಜನಜಾಗೃತಿ ವ್ಯಾಪಕವಾಗಿ ಮಾಡಬೇಕು. ಸಿಎಸ್ ಆರ್ ನೆರವಿನಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ‌ ಮಾಡಬೇಕು. ಜಿಲ್ಲೆಯ ಪ್ರತಿ ಬ್ಯಾಂಕ್ ಶಾಖೆಯು ಕನಿಷ್ಠ ಇಬ್ಬರಿಗೆ ಸ್ಟ್ಯಾಂಡಪ್ ಇಂಡಿಯಾ ಯೋಜನೆಯಡಿ ಸಾಲ ಕೊಡಬೇಕು ಎನ್ನುವ ನಿಯಮವಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದರು.

ಈ ವಿಷಯದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಸಮನ್ವಯತೆಯಿಂದ ಕೆಲಸ ಮಾಡಬೇಕು. ಈ ಬಗ್ಗೆ ಜಿಪಂ ಮುಖ್ಯಾಧಿಕಾರಿ ಗಮನಹರಿಸಬೇಕು. ಮೂಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶಕ್ಕಾಗಿ ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ ಎಂದರು.

ಅವಧಿಪೂರ್ವ ಹೆರಿಗೆ ಮತ್ತು ಜನಿಸಿದ ಶಿಶು ತೂಕ ಕಡಿಮೆ ಇರುವ ಕಡೆಗಳಲ್ಲಿ ಹೆಚ್ಚು ಪ್ರಾಶಸ್ತ್ಯ ಮಾಡಬೇಕು. ಇದಕ್ಕೆ ಮೂಲ ಕಾರಣ ಪತ್ತೆ ಮಾಡಬೇಕು. ಈ ಸಂಬಂಧ ವರದಿಯೊಂದನ್ನು ಸಿದ್ಧಪಡಿಸಬೇಕು.‌ ಗುಳೆ ಹೋಗುವವರಲ್ಲಿ ಕಡಿಮೆ ತೂಕದ ಶಿಶುಜನನ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಅಧ್ಯಯನ ಮಾಡಬೇಕು. ಐವಿ ಐರನ್ ಸುಕ್ರೋಸ್‌ ಇಂಜೆಕ್ಷನ್ ಖರೀದಿಗೆ ಅನುದಾನ ಸಾಲುತ್ತಿಲ್ಲ ಎಂದಾದರೆ ಈ ಬಗ್ಗೆ ಕ್ರಿಯಾಯೋಜನೆ ಮಾಡಿ ಎಂದು ತಿಳಿಸಿದರು.

ಅನಿಮಿಯಾ ತಪಾಸಣೆಗೆ ಶಾಸಕ ಸೂಚನೆ

ಅನಿಮಿಯಾ ತಪಾಸಣೆಗೆ ಶಾಸಕ ಸೂಚನೆ

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಗರ್ಭಿಣಿಯರದ್ದು ಪ್ರತಿಶತ ನೋಂದಣಿ ಆಗುತ್ತಿದೆ. ಆದರೆ ಅನಿಮಿಯಾ ತಪಾಸಣೆ ಏಕೆ ಪ್ರತಿಶತ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಕೊಟ್ಟು ಮೋಡ ಬಿತ್ತನೆಗೆ ಬೇಡಿಕೆ ಸಲ್ಲಿಸಬೇಕು. ಯಾವುದೇ ಗೊಬ್ಬರವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ರೈತರಿಗೆ ಒತ್ತಾಯ ಮಾಡಬೇಡಿ ಎಂದು ಕೃಷಿ ಇಲಾಖೆ ಅಧಿಕಾರಿಗೆ ತಿಳಿಸಿದರು. ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಗರ್ಭಿಣಿಯರು ಮತ್ತು ಕಡಿಮೆ ತೂಕದ ಮಕ್ಕಳ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯಲ್ಲಿ ಯುದ್ದೋಪಾದಿಯಲ್ಲಿ ಕೆಲಸ‌ ಮುಂದಿನ ದಿನಗಳಲ್ಲಾದರೂ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್‌. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್‌.ದುರುಗೇಶ ಇದ್ದರು.

Recommended Video

   ಟೈಲರ್ ಶಿರಚ್ಛೇದ: ರಾಜಸ್ಥಾನದಲ್ಲಿ ನಿಷೇಧಾಜ್ಞೆ ಜಾರಿ, ಇಂಟರ್ನೆಟ್ ಸೇವೆ ಸ್ಥಗಿತ | *India | OneIndia Kannada

   English summary
   Raichur DC Chandrasekhar nayaka's photo was taken to whatsApp dp and the fraudsters tried to defraud and taluk level officials in raichur.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X