Baburao Chinchansur: ಗುರಮಠಕಲ್ ಕ್ಷೇತ್ರದಲ್ಲಿ ಪತ್ನಿ ಮೂಲಕ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್
ಯಾದಗಿರಿ, ಏಪ್ರಿಲ್, 21: ರಸ್ತೆ ಅಪಘಾತದಲ್ಲಿ ಗಾಯಗೊಂಡು ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ತಮ್ಮ ಪತ್ನಿ ಅಮರೇಶ್ವರಿ ಅವರ ಮೂಲಕ ಗುರಮಠಕಲ್‌ನಲ್ಲಿ ನಾಮಪತ್ರ ಸಲ್ಲಿಸಿದರು.
ಇನ್ನು ಶೋರಾಪುರದಲ್ಲಿ ಜೆಡಿಎಸ್‌ನಿಂದ ಶ್ರವಣಕುಮಾರ್, ಅಶೋಕ್, ವೆಂಕಟಪ್ಪ ನಾಯ್ಕ್ ಮತ್ತು ಶಶಿಕುಮಾರ್ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಶಹಾಪುರದಲ್ಲಿ ಜೆಡಿಎಸ್‌ನಿಂದ ಗುರುಲಿಂಗಪ್ಪಗೌಡ, ಬಿಜೆಪಿಯಿಂದ ಅಮೀನರಡ್ಡಿ, ಮೊಹಮ್ಮದ್ ಜಿಲಾನಿ, ಹೊನ್ನಯ್ಯ, ಹಾಜಿ ಮೊಹಮ್ಮದ್ ಹುಸೇನ್ ಪಕ್ಷೇತರರಾಗಿ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಪ್ರಕಾಶ್ ಮತ್ತು ಆಮ್ ಆದ್ಮಿ ಪಕ್ಷದಿಂದ ಚಂದ್ರಶೇಖರ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಗುರಮಠಕಲ್‌ನಲ್ಲಿ ಶರಣಗೌಡ ನಾಗನಗೌಡ ಮತ್ತು ನಾಗನಗೌಡ ಇಬ್ಬರೂ ಜೆಡಿ(ಎಸ್), ಜನಶೇಖರ್ ಮತ್ತು ವಾಸುದೇವರಾವ್ ಇಬ್ಬರೂ ಬಿಎಸ್‌ಪಿಯಿಂದ ಮತ್ತು ಚಂದ್ರಶೇಖರ್ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಯಾದಗಿರಿಯಲ್ಲಿ ಕಾಂಗ್ರೆಸ್‌ನಿಂದ ಚನ್ನಾರೆಡ್ಡಿ ಪಾಟೀಲ್, ಅಖಿಲ ಭಾರತ ಉಲ್ಮಾ ಕಾಂಗ್ರೆಸ್‌ನಿಂದ ರಂಜಾನ್ ಬಿ, ಬಿಎಸ್‌ಪಿಯಿಂದ ಬಸವರಾಜ್ ಸ್ಪರ್ಧಿಸಿದರೆ, ವೆಂಕಟರೆಡ್ಡಿ ಪಾಟೀಲ್, ಹನುಮಂತ್, ದುರುಗಪ್ಪ ಮತ್ತು ಮಹಾಂತೇಶ್ ಪಕ್ಷೇತ್ರತರರಾಗಿ ಅಖಾಡಕ್ಕಿಳಿದಿದ್ದಾರೆ.












Click it and Unblock the Notifications