ರಾಯಚೂರಿನಲ್ಲಿ ಅಣ್ಣ-ತಂಗಿ ಮೇಲೆ ಹರಿದ ಲಾರಿ, ಓರ್ವ ಪಾರು
ರಾಯಚೂರು, ಏ.11: ಅಣ್ಣ-ತಂಗಿ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಅಪಾಯದಿಂದ ಪಾರಾಗಿರುವ ಘಟನ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಘಟನೆ ನಡೆದಿದ್ದು, ಓರ್ವ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ. ಬೈಕ್‌ನಲ್ಲಿ ತೆರಳುತ್ತಿರುವಾಗ ಲಾರಿಯೊಂದು ಬೈಕ್ ಮೇಲೆ ಹರಿದಿದೆ.ಅಸ್ಕಿಹಾಳ ಗ್ರಾಮದ 26 ವರ್ಷದ ಗೌರಿಶಂಕರ್ ಹಾಗೂ 22 ವರ್ಷದ ಕೀರ್ತಿ ಮೃತ ದುರ್ದೈವಿಗಳು. ಅಪಘಾತದಲ್ಲಿ ಗೌರಿಶಂಕರ್ ಅವರ ಮಗ ಪಾರಾಗಿದ್ದಾನೆ.
ಲಾರಿ ಚಾಲಕನ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ. ರಾಯಚೂರು ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಗೌರಿಶಂಕರ್ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಹೆಂಡತಿಯನ್ನು ಮಾತನಾಡಿಸಿಕೊಂಡು ವಾಪಸಾಗುತ್ತಿದ್ದರು. ಜೊತೆಗೆ ಆತನ ಸಹೋದರಿ ಕೀರ್ತಿ ಮತ್ತು ಮಗ ಇದ್ದರು.

ಬೈಕ್‌ನಲ್ಲಿ ಹೋಗುತ್ತಿರುವ ವೇಳೆ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆ ಪರಿಣಾಮ ಎಲ್ಲರೂ ಲಾರಿಯ ಚಕ್ರಕ್ಕೆ ಸಿಲುಕಿದ್ದಾರೆ. ಅದೃಷ್ಟ ವಶಾತ್ ಓರ್ವ ಬದುಕುಳಿದಿದ್ದಾನೆ.












Click it and Unblock the Notifications