ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿಪ್ಪರಾಜು ಹವಾಲ್ದಾರರಿಗೆ ಟಿಕೆಟ್ ನೀಡದಂತೆ ಸ್ವಪಕ್ಷದ ಕಾರ್ಯಕರ್ತರಿಂದ ಪತ್ರ ಚಳುವಳಿ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಡಿಸೆಂಬರ್‌ 1: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರಿಗೆ ಟಿಕೆಟ್ ನೀಡದಂತೆ ಪಕ್ಷದ ಕಾರ್ಯಕರ್ತರು ಪತ್ರ ಚಳವಳಿ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ ಬಿಜೆಪಿ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರಿಗೆ ಪತ್ರ ಬರೆದು 'ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕಾದರೆ ತಿಪ್ಪರಾಜು ಹವಾಲ್ದಾರ್ ಬದಲಾಗಿ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು' ವಿನಂತಿಸಿ ಪತ್ರ ರವಾನಿಸಲಾಗಿದೆ.

ಬೆಳಗಾವಿ-ಹುನಗುಂದ-ರಾಯಚೂರು ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅನುಮೋದನೆಬೆಳಗಾವಿ-ಹುನಗುಂದ-ರಾಯಚೂರು ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅನುಮೋದನೆ

ಚುನಾವಣೆ ಹತ್ತಿರುವಾಗುತ್ತಿರುವಾಗಲೇ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬೇರೆ ಬೇರೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಪತ್ರ ಬರೆಯುತ್ತಿದ್ದು ತಿಪ್ಪರಾಜ ಹವಾಲ್ದಾರ್‌ಗೆ ಸ್ವಪಕ್ಷೀಯವರೇ ವಿರೋಧ ವ್ಯಕ್ತಪಡಿಸುತ್ತಿರುವುದು ಬಯಲಾಗಿದೆ.

BJP Activists Write Letter To Nalin Kumar Kateel For Not Issue Ticket To Tipparaju Hawaldar

ಇತ್ತೀಚಿಗಷ್ಟೇ ಗಿಲ್ಲೇಸೂಗೂರಿನಿಂದ ಬಿಜೆಪಿ ಜನಸಂಕಲ್ಪ ಯಾತ್ರೆ ರಾಜ್ಯಾದಾದ್ಯಂತ ಪ್ರಾರಂಭಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಪಾಲ್ಗೊಂಡು ಪಕ್ಷದ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದರು. ಈ ಮೂಲಕ ಅವರೇ ಪಕ್ಷದ ಅಭ್ಯರ್ಥಿಯಂದು ಬಿಂಬಿಸಲಾಗಿತ್ತು. ಆದರೆ ಈಗ ಪಕ್ಷದ ಕಾರ್ಯಕರ್ತರು ಪತ್ರ ಬರೆಯುತ್ತಿರುವರ ಹಿಂದೆ ಪಕ್ಷದ ಮತ್ತೊಬ್ಬ ಮುಖಂಡರ ಕೈವಾಡದ ಶಂಕೆ ತಿಪ್ಪರಾಜು ಹವಾಲ್ದಾರ್ ಬೆಂಬಲಿಗರಿಂದ ವ್ಯಕ್ತವಾಗುತ್ತಿದೆ.

ಸೂಗೂರೇಶ್ವರ ಸ್ವಾಮಿಯ ಕಾರ್ತಿಕ ಮಾಸದ ಜೋಡು ರಥೋತ್ಸವಸೂಗೂರೇಶ್ವರ ಸ್ವಾಮಿಯ ಕಾರ್ತಿಕ ಮಾಸದ ಜೋಡು ರಥೋತ್ಸವ

ಪಕ್ಷದಿಂದ ಟಿಕೆಟ್ ತಪ್ಪಿಸಲು ಪರ್ಯಾಯ ಅಭ್ಯರ್ಥಿಯೊಬ್ಬರನ್ನು ಸಿದ್ಧಪಡಿಸಿದ ಪೂರ್ವ ತಯಾರಿ ಮಾಡಲು ಪರೋಕ್ಷ ಸೂಚನೆ ನೀಡಿದ ತಿಪ್ಪರಾಜು ಹವಾಲ್ದಾರ್ ಆಪ್ತರೊಬ್ಬರ ತಂತ್ರ ಮಾಡಿರಬಹುದೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ತಿಪ್ಪರಾಜು ಹವಾಲ್ದಾರ್ ಅವರನ್ನು ಇಲ್ಲಿವರೆಗೆ ವಿರೋಧಿಸದ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರದ ಮೂಲಕ ದೂರು ನೀಡುತ್ತಿರುವುದು ಹಲವಾರು ಪ್ರಶ್ನೆಗಳಿಗೆ ಎಡೆ ಮಾಡಿದೆ.

BJP Activists Write Letter To Nalin Kumar Kateel For Not Issue Ticket To Tipparaju Hawaldar

ಭಾವಿ ಶಾಸಕರಿಗಾಗಿ ಸೂಗೂರೇಶ್ವರನಿಗೆ ಬಾಳೆಹಣ್ಣು ಹರಕೆ

ಸದ್ಯ ರಾಯಚೂರು ಜಿಲ್ಲೆಯಲ್ಲಿ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ರಾಜಕೀಯ ನಾಯಕರು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ತಲುಪುವ ಧಾವಂತದಲ್ಲಿದ್ದರೆ. ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಬಗೆ ಬಗೆಯ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಗ್ರಾಮಾಂತರದ ಕ್ಷೇತ್ರ ಶಾಸಕರ ಅಭಿಮಾನಿಗಳ ಹರಕೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಗ್ರಾಮಾಂತರದ ಆರಾಧ್ಯ ದೈವ ದೇವಸೂಗೂರು ಸೂಗೂರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವವು ವಿಭೃಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ಹಾಲಿ ಶಾಸಕರಾದ ಬಸವನಗೌಡ ದದ್ದಲ್ ಮತ್ತೊಮ್ಮೆ ಎಂದು ಏಲಕ್ಕಿ ಬಾಳೆ ಹಣ್ಣಿನ ಮೇಲೆ ಬರೆದು ಅಭಿಮಾನಿಗಳು ರಥಕ್ಕೆ ಎಸೆದು ಹರಕೆ ಕಟ್ಟಿಕೊಂಡಿದ್ದಾರೆ. ಮತ್ತೊಂದು ಕಡೆ ಮಾಜಿ ಶಾಸಕರಾದ ಸದ್ಯ ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿರುವ ತಿಪ್ಪರಾಜು ಹವಾಲ್ದಾರ್ ರವರ ಅಭಿಮಾನಿಗಳು ಸಹ ಮುಂದಿನ ಶಾಸಕರು ತಿಪ್ಪರಾಜು ಹವಾಲ್ದಾರ್ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆಯುವ ಮೂಲಕ ಹರೆಕೆ ಕಟ್ಟಿಕೊಂಡಿದ್ದಾರೆ.

ಒಟ್ಟಿನಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು 6 ತಿಂಗಳು ಬಾಕಿ ಇರುವಂತೆಯೇ ಕ್ಷೇತ್ರದಲ್ಲಿ ಚುನಾವಣಾ ಚಟುವಟಿಕೆಗಳು ಕಾವೇರಿದ್ದು, ಸೂಗೂರೇಶ್ವರನ ಆಶೀರ್ವಾದ ಯಾರ ಮೇಲಿದೆಯೋ ಎಂಬುದು ಮಾತ್ರ ಚುನಾವಣೆಯವರೆಗೂ ಕಾದು ನೋಡಬೇಕಿದೆ.

English summary
BJP activists write letter to Nalin Kumar Kateel for not issue ticket to Tipparaju Hawaldar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X