ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಸುಗೂರಲ್ಲಿ 11ನೇ ಕನ್ನಡ ಸಾಹಿತ್ಯ ಸಮ್ಮೇಳನ: ನುಡಿ ಜಾತ್ರೆ ಕಲರವಕ್ಕೆ ಕ್ಷಣಗಣನೆ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಡಿಸೆಂಬರ್‌, 10: ಲಿಂಗಸುಗೂರಿನಲ್ಲಿ ಡಿಸೆಂಬರ್‌ 10, 11ರಂದು 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಐತಿಹಾಸಿಕ ಕೋಟೆ, ಪ್ರಾಚೀನ ಇತಿಹಾಸ ಕುರುಹುಗಳು, ಶರಣರು, ಸಂತರು, ದಾಸರು, ಸೂಫಿಗಳು ನಡೆದಾಡಿದ ತಾಲೂಕು ಕೇಂದ್ರದಲ್ಲಿ ಕನ್ನಡ ನುಡಿ ಜಾತ್ರೆ ಸಂಭ್ರಮ ವೀಕ್ಷಣೆಗೆ ಸಾಹಿತಿಗಳು, ಕನ್ನಡ ಅಭಿಮಾನಿಗಳು, ಮಕ್ಕಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ.

ಸಾಹಿತ್ಯ ಜಾತ್ರೆ ಹೆಸರಿನಲ್ಲಿ ಅಂಗಡಿಗಳ ತೆರವು: ಕಣ್ಣೀರಿಟ್ಟ ಬೀದಿಬದಿ ವ್ಯಾಪರಸ್ಥರುಸಾಹಿತ್ಯ ಜಾತ್ರೆ ಹೆಸರಿನಲ್ಲಿ ಅಂಗಡಿಗಳ ತೆರವು: ಕಣ್ಣೀರಿಟ್ಟ ಬೀದಿಬದಿ ವ್ಯಾಪರಸ್ಥರು

ಎರಡು ದಶಕಗಳ ಹಿಂದೆ 1999ರಲ್ಲಿ ಇಲ್ಲಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಸಾಹಿತ್ಯಾಸಕ್ತರಲ್ಲಿ ಮೆಚ್ಚುಗೆ ಗಳಿಸಿದ್ದನ್ನು ಸ್ಮರಿಸಬಹುದು. ಇನ್ನು ಎರಡು ದಿನಗಳ ಕಾಲ ನಡೆಯುವ ಕನ್ನಡ ನುಡಿ ಜಾತ್ರೆಗೆ ಪಟ್ಟಣದ ರಸ್ತೆ, ಕಾಲೇಜು ಮೈದಾನ ಮದುವಣಿಗಿತ್ತಿಯಂತೆ ಸಿಂಗಾರಗೊಂಡಿದೆ.

11th Kannada Sahitya Sammelana at Lingasuguru, Here see details

ಸಾಹತ್ಯಕ್ಕೆ ಕೊಡುಗೆ ನೀಡಿದ ಮಹಾನೀಯರು
ಜೇಡರ ದಾಸಿಮಯ್ಯ, ಆಯ್ದಕ್ಕಿ ಲಕ್ಕಮ್ಮ ಮಾರಯ್ಯ, ಸಂತೆಕೆಲ್ಲೂರಿನ ಘನ ವೈರಾಗ್ಯ ಚಕ್ರವರ್ತಿ ಘನಮಠ ಶಿವಯೋಗಿಗಳು, ನೀರಲಕೇರಿ ಬಸವ ಲಿಂಗ ಶಿವಯೋಗಿ, ಪ್ರಾಣೇಶ ದಾಸರು, ಗೊರೆಬಾಳ ಹನುಮಂತರಾಯರು, ಗೋನವಾರದ ರಾಮದಾಸರು, ವೆಂಕಟರಾವ್‍ ಕುಲಕರ್ಣಿ ಸೇರಿದಂತೆ ಶ್ರೇಷ್ಠವರ್ಯರು ಕನ್ನಡ ಸಾಹಿತ್ಯಕ್ಕೆ ಈ ನೆಲದಿಂದಲೇ ಕೊಡುಗೆ ನೀಡಿದ್ದು ಸ್ಮರಣೀಯವಾಗಿದೆ.

11th Kannada Sahitya Sammelana at Lingasuguru, Here see details

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ
ರಾಯಚೂರು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ವೀರಹನುಮಾನ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಸಮ್ಮೇಳನಕ್ಕೆ ಶಾಸಕ ಡಿ.ಎಸ್‍. ಹೂಲಗೇರಿ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಮತ್ತೊಂದೆಡ ಕನ್ನಡ ಹಬ್ಬಕ್ಕೆ ಸಂಘಟಕರು ಅಹೋರಾತ್ರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಕೈಗೆತ್ತಿಕೊಂಡ ಕಾರ್ಯ ಚಟುವಟಕೆಗಳಿಗೆ ತಾಲೂಕು ಆಡಳಿತ, ಪುರಸಭೆ ಸಹಯೋಗದಲ್ಲಿ ಸಿದ್ಧತೆಗಳನ್ನು ಮಾಡಲಾಗಿದೆ. ರಸ್ತೆಗಳ ಸ್ವಚ್ಛತೆ, ವಿದ್ಯುತ್‍ ದೀಪ ಅಲಂಕಾರ, ಮುಖ್ಯರಸ್ತೆ ಕಂಬಗಳಿಗೆ ಕನ್ನಡ ಧ್ವಜದ ಬಟ್ಟೆಗಳ ಅಲಂಕಾರ, ವೇದಿಕೆ, ಪುಸ್ತಕದ ಮಳಿಗೆ ಹಾಗೂ ಊಟ, ಉಪಾಹಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಂಡಿದೆ.

English summary
11th Kannada Sahitya Sammelana at Lingasuguru of Raichur district, 11th Kannada Sahitya Sammelna from today to december 11th, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X