'ಮೋದಿ ನಿವೃತ್ತಿ ಘೋಷಿಸಿದರೆ, ಆ ಕ್ಷಣವೇ ರಾಜಕೀಯ ತೊರೆಯುವೆ'
ಪುಣೆ, ಫೆಬ್ರವರಿ 04: ಪ್ರಧಾನಿ ನರೇಂದ್ರ ಮೋದಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿದ ಕ್ಷಣವೇ ನಾನು ಕೂಡಾ ರಾಜಕೀಯ ತೊರೆಯುವೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಘೋಷಿಸಿದ್ದಾರೆ.
'ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರಂಥ ಧೀಮಂತ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಸಂತಸ ನನ್ನಲಿದೆ. ಪ್ರಧಾನ ಸೇವಕ ಎಂದು ಹೇಳಿಕೊಳ್ಳಲು ಮೋದಿ ಅವರಿಂದ ಸಾಧ್ಯ. ನಾವು ಆ ಮಟ್ಟಕ್ಕೆ ಮುಟ್ಟಿಲ್ಲ ಎಂದರು.
ನನ್ನ ದೇಶ, ನನ್ನ ಸಮಾಜ, ಸ್ವತಂತ್ರ ಭಾರತಕ್ಕೆ ನನ್ನ ಸಮಯವನ್ನು ಹೆಚ್ಚಾಗಿ ನೀಡುವುದನ್ನು ಮೋದಿ ಅವರಿಂದ ಕಲಿತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸುವ ಬಗ್ಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ನಿರ್ಧರಿಸಲಿದ್ದಾರೆ. 2014ರಲ್ಲಿ ಸ್ಮೃತಿ ಇರಾನಿ ಯಾರು ಎಂದು ಕ್ಷೇತ್ರದಲ್ಲಿ ಪ್ರಶ್ನಿಸಿದ್ದರು. ಈಗ ನಾನು ಯಾರು ಎಂಬುದು ತಿಳಿದಿದೆ.

ಮಹಿಳಾ ರಾಜಕಾರಣಿಗಳ ಪೈಕಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಲೋಕಸಭಾ ಸ್ಪೀಕರ್, ಇಂದೋರ್ ಸಂಸದೆ ಸುಮಿತ್ರಾ ಮಹಾಜನ್ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಇರಾನಿ ಹೇಳಿದ್ದಾರೆ.












Click it and Unblock the Notifications