ಟ್ವೀಟ್ಸ್ : ನಾನು ಅಪ್ಪಟ ಕನ್ನಡಿಗ ಎಂದಿದ್ದ ಲಕ್ಷ್ಮಣ್ ನೆನಪು

ಪುಣೆ, ಜ.27: ಖ್ಯಾತ ವ್ಯಂಗ್ಯಚಿತ್ರಕಾರ, ದಿ ಕಾಮನ್ ಮ್ಯಾನ್ ಆರ್‌ಕೆ ಲಕ್ಷ್ಮಣ್ ಅವರ ಅಂತಿಮ ವಿಧಿವಿಧಾನ ಪುಣೆಯಲ್ಲಿ ಮಂಗಳವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಸೋಮವಾರ ರಾತ್ರಿಯಿಂದ ಈ ಸಮಯದವರೆಗೂ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸೆಲೆಬ್ರಿಟಿಗಳು, ಜನ ಸಾಮಾನ್ಯರು, ಕಲಾರಂಗದ ವಿದ್ಯಾರ್ಥಿಗಳು ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಅವರ ಸಂಪುಟದ ಕೆಲ ಸಚಿವರು, ಶಿವಸೇನೆ ಮುಖಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತ್ ಮುಖ್ಯಸ್ಥ ರಾಜ್‌ಠಾಕ್ರೆ ಸೇರಿದಂತೆ ಹಲವು ಗಣ್ಯರು ಖುದ್ದು ಪುಣೆಯ ವೈಕುಂಠ ವಿದ್ಯುತ್ ಚಿತಾಗಾರದಲ್ಲಿ ಕೊನೆ ತನಕ ಉಪಸ್ಥಿತರಿದ್ದು, ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು. ಅಧಿಕಾರಿಗಳಿರಲಿ, ಜನಪ್ರತಿನಿಧಿಗಳಿರಲಿ ಮನೆ ಮಂದಿಯಂತೆ ಲಕ್ಷ್ಮಣ್ ಕುಟುಂಬದವರೊಡನೆ ದುಃಖದಲ್ಲಿ ಭಾಗಿಯಾಗಿದ್ದರು.

ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಮೈಸೂರು ಮೂಲದವರಾದ ಖ್ಯಾತ ವ್ಯಂಗ್ಯಚಿತ್ರಕಾರ ಆರ್‌ಕೆ ಲಕ್ಷ್ಮಣ್ ಅವರಿಗೆ ತಮ್ಮ ಅಂತಿಮ ನಮನ ಸಲ್ಲಿಸಿದ್ದಾರೆ. [ಮೈಸೂರಿನ ನಮ್ಮ ಮಹಾರಾಜರ ಶಾಲೆಗೆ 175]

ಲಕ್ಷ್ಮಣ್ ಗೆ ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ

ಲಕ್ಷ್ಮಣ್ ಗೆ ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸೆಲೆಬ್ರಿಟಿಗಳು, ಜನ ಸಾಮಾನ್ಯರು, ಕಲಾರಂಗದ ವಿದ್ಯಾರ್ಥಿಗಳು ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ. ಚಿತ್ರಕೃಪೆ: ಪಿಟಿಐ

ಕಾರ್ಟೂನಿಸ್ಟ್ ಸತೀಶ್ ಅಚಾರ್ಯ ನಮನ

ಕುಂದಾಪುರ ಮೂಲದ ಖ್ಯಾತ ಕಾರ್ಟೂನಿಸ್ಟ್ ಸತೀಶ್ ಅಚಾರ್ಯ ಅವರು ನಮನ ಸಲ್ಲಿಸಿದ್ದು ಹೀಗೆ

ನಿಖಿಲ್ ಚೌಧರಿ ಅವರ ಟ್ವೀಟ್

ನಿಖಿಲ್ ಚೌಧರಿ ಅವರು ಟ್ವೀಟ್ ಮಾಡಿ ಶಾಲಾದಿನಗಳಲ್ಲಿ ಬರೆದ ಕಾರ್ಟೂನ್ ಸ್ಮರಿಸಿಕೊಂಡಿದ್ದಾರೆ.

ಅತಿ ಹೆಚ್ಚು ಟ್ವೀಟ್ ಆದ ಕಾಮನ್ ಮ್ಯಾನ್

ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ ಟಾಪ್ ಸ್ಥಾನ ಕಾಯ್ದುಕೊಂಡಿದ್ದ ಕಾಮನ್ ಮ್ಯಾನ್ ಬಗ್ಗೆ ಎಲ್ಲರೂ ಟ್ವೀಟ್ ಮಾಡುತ್ತಿದ್ದರು. ಜನ ಸಾಮಾನ್ಯ ನಿಜ ಪ್ರತಿನಿಧಿ ಎಂದು ಲಕ್ಷ್ಮಣ್ ಕಾರ್ಟೂನ್ ಗಳನ್ನು ಹಾಕಿದರು

ಲಕ್ಷ್ಮಣ್ ಕಾಮನ್ ಮ್ಯಾನ್ ರೂಪಿಸಿದ್ದು ಹೇಗೆ?

ಲಕ್ಷ್ಮಣ್ ಕಾಮನ್ ಮ್ಯಾನ್ ರೂಪಿಸಿದ್ದು ಹೇಗೆ? ಎಂಬುದನ್ನು ಲೇಖಕ ನಿಖಿಲ್ ವಾಗ್ಲೆ ಟ್ವೀಟ್ ಮಾಡಿ ತೋರಿಸಿದ್ದಾರೆ

ಕಾರ್ಟೂನಿಸ್ಟ್ ಮಂಜಲ್ ಟ್ವೀಟ್

ಕಾರ್ಟೂನಿಸ್ಟ್ ಮಂಜಲ್ ಟ್ವೀಟ್ ಮಾಡಿ ಕಾಮನ್ ಮ್ಯಾನ್ ಅಳುವಂತೆ ಮಾಡಿದ್ದಾರೆ

ಅಂತಿಮ ನಮನ ಸಲ್ಲಿಸಿದ ಸಿಎಂ ಫಡ್ನವೀಸ್

ಅಂತಿಮ ನಮನ ಸಲ್ಲಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್

ಕಲಾವಿದ ಲಕ್ಷ್ಮಣ್ ಗೆ ಕಾಮನ್ ಮ್ಯಾನ್ ನಿಂದ ಗೌರವ

ಕಲಾವಿದ ಆರ್ ಕೆ ಲಕ್ಷ್ಮಣ್ ಅವರ ಕಲ್ಪನೆಯ 'ಕಾಮನ್ ಮ್ಯಾನ್' ನಿಂದ ಲಕ್ಷ್ನಣ್ ಪ್ರತಿಮೆ ಹಾರ ಹಾಕುವ ಚಿತ್ರ.

ಗೆರೆಗಳ ಸಾರ್ವಭೌಮನಿಗೆ ನಮನ

ಗೆರೆಗಳ ಸಾರ್ವಭೌಮನಿಗೆ ನಮನ ಸಲ್ಲಿಸಿದ ಕನ್ನಡ ಪ್ರಭ

ನಾನು ಹೆಮ್ಮೆಯ ಕನ್ನಡಿಗ

ನಾನು ಹೆಮ್ಮೆಯ ಕನ್ನಡಿಗ, ತಮಿಳಿಯನ್ ಅಲ್ಲ ಎಂದು ಹೇಳುತ್ತಿದ್ದ ಮೈಸೂರಿನ ಆರ್ ಕೆ ಲಕ್ಷ್ಮಣ್

ನರೇಂದ್ರ ಮೋದಿ ಬಗ್ಗೆ ಕಾಮನ್ ಮ್ಯಾನ್

ನರೇಂದ್ರ ಮೋದಿ ಅವರನ್ನು ಕಾಮನ್ ಮ್ಯಾನ್ ಕಂಡಿದ್ದು ಹೀಗೆ.. ಟೈಮ್ ಆಫ್ ಇಂಡಿಯಾದಲ್ಲಿ ಪ್ರಕಟಗೊಂಡ ಒಂದು ಹಳೆ ಕಾರ್ಟೂನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+