ಪುಣೆ ಇನ್ಫೋಸಿಸ್ ಮಹಿಳಾ ಟೆಕ್ಕಿ ಕಗ್ಗೊಲೆ; ವಾಚ್ ಮನ್ ಬಂಧನ

Posted By:
Subscribe to Oneindia Kannada

ಪುಣೆ, ಜನವರಿ 30: ಇಲ್ಲಿನ ಇನ್ಫೋಸಿಸ್ ಹಿಂಜವಾಡಿ ಐಟಿ ಪಾರ್ಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇಪ್ಪತ್ತಮೂರು ವರ್ಷದ ಕೆ. ರಾಸಿಲಾ ರಾಜು ಎಂಬ ಮಹಿಳಾ ಟೆಕ್ಕಿಯೊಬರನ್ನು ಕಚೇರಿಯಲ್ಲೇ ಹತ್ಯೆ ಮಾಡಲಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇವರು ಕೇರಳ ಮೂಲದವರಾಗಿದ್ದು, ಇನ್ಫೋಸಿಸ್ ನ ಹಿಂಜವಾಡಿ ಫೇಸ್ 2 ಕಟ್ಟಡದ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಪೊಲೀಸರ ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ, ರಾಸಿಲಾ ಅವರ ಕುತ್ತಿಗೆಗೆ ಕಂಪ್ಯೂಟರ್ ಕೇಬಲ್ ಅನ್ನು ಬಿಗಿದು ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಕಚೇರಿಯು ನೀಡಿರುವ ಮಾಹಿತಿಯಂತೆ, ಭಾನುವಾರ ಅವರು ಕೆಲಸಕ್ಕೆ ಹಾಜರಾಗಿದ್ದರು.

ಭಾನುವಾರ ಮಧ್ಯಾಹ್ನ 2 ಗಂಟೆಗೆ ಕಚೇರಿಗೆ ಬಂದಿದ್ದ ಅವರು, ಸಂಜೆಯ ನಂತರ ಕಟ್ಟಡದ 9ನೇ ಅಂತಸ್ತಿನಲ್ಲಿರುವ ತಮ್ಮ ಕ್ಯಾಬಿನ್ ನಿಂದ ಹೊರಬಂದಿಲ್ಲ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಆಕೆ ಕೊಲೆಯಾಗಿರುವುದು ಪತ್ತೆಯಾಗಿದೆ.[ಟೆಕ್ಕಿ ಸಾವಿಗೆ ಇನ್ಫೋಸಿಸ್ ತೀವ್ರ ವಿಷಾದ]

Techie murdered in Pune infosys

ಪೊಲೀಸರ ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ, ರಾಸಿಲಾ ಅವರ ಕುತ್ತಿಗೆಗೆ ಕಂಪ್ಯೂಟರ್ ಕೇಬಲ್ ಅನ್ನು ಬಿಗಿದು ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಕಚೇರಿಯು ನೀಡಿರುವ ಮಾಹಿತಿಯಂತೆ, ಭಾನುವಾರ ಅವರು ಕೆಲಸಕ್ಕೆ ಹಾಜರಾಗಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಪೊಲೀಸ್ ಕಮೀಷನರ್ ವೈಶಾಲಿ ಜಾಧವ್, ''ನಿರ್ದಿಷ್ಟ ಪ್ರಾಜೆಕ್ಟ್ ಒಂದನ್ನು ಸಿದ್ಧಗೊಳಿಸಲು ಮೃತ ರಾಸಿಲಾ ಅವರು ಭಾನುವಾರವೂ ಕಚೇರಿಗೆ ಆಗಮಿಸಿದ್ದರು. ಆಕೆಯ ಈ ಪ್ರಾಜೆಕ್ಟ್ ಗೆ ಬೆಂಗಳೂರಿನ ಇಬ್ಬರು ಇನ್ಫೋಸಿಸ್ ಉದ್ಯೋಗಿಗಳು ಆನ್ ಲೈನ್ ಮೂಲಕ ಸಂಪರ್ಕದಲ್ಲಿದ್ದರು. ಈ ಮೂವರೂ ಪ್ರಾಜೆಕ್ಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು'' ಎಂದು ತಿಳಿಸಿದ್ದಾರೆ.

''ಸಂಜೆ 5ರಿಂದ 6:30ರೊಳಗೆ ಕೊಲೆ ನಡೆದಿರಬಹುದಾದ ಶಂಕೆಯಿದೆ. ರಾತ್ರಿ ಎಂಟು ಗಂಟೆ ಸುಮಾರಿಗೆ ಆಕೆಯ ಕೊಲೆ ಬಹಿರಂಗಗೊಂಡಿದೆ ಎಂದಿರುವ ಅವರು, ''ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ರಾಸಿಲಾ ಅವರಿದ್ದ ತಂಡದ ಮ್ಯಾನೇಜರ್, ಸಂಜೆ 5 ಗಂಟೆ ನಂತರದಿಂದ ರಾಸಿಲಾ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಅವರು ಕರೆ ಸ್ವೀಕರಿಸಿಲ್ಲ'' ಎಂದರು.

ನಂತರ ವಿವರಣೆ ಮುಂದುವರಿಸಿದ ಅವರು, ''ಸ್ವಲ್ಪ ಹೊತ್ತಿನ ನಂತರ ಮ್ಯಾನೇಜರ್ ಪದೇ ಪದೇ ಕರೆ ಮಾಡಿದರೂ ರಾಸಿಲ್ ಕರೆ ಸ್ವೀಕರಿಸಿಲ್ಲ. ಹಾಗಾಗಿ, ಮ್ಯಾನೇಜರ್ ಅವರು ಸೆಕ್ಯುರಿಟಿ ಸಿಬ್ಬಂದಿ ವಿಭಾಗಕ್ಕೆ ಕರೆ ಮಾಡಿ ರಾಸಿಲಾ ಅವರಿಗೆ ತಮ್ಮ ಕರೆ ಸ್ವೀಕರಿಸಲು ತಿಳಿಸುವಂತೆ ಹೇಳಿದ್ದಾರೆ. ಆಗ, ಭದ್ರತಾ ಸಿಬ್ಬಂದಿಯೊಬ್ಬರು ರಾಸಿಲಾ ಕ್ಯಾಬಿನ್ ಬಳಿ ಬಂದಾಗ, ಅವರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರ ಮೃತದೇಹವನ್ನು ಕಂಡ ಆತ ಬೆದರಿ ಓಡಿಬಂದು ಮ್ಯಾನೇಜರ್ ಹಾಗೂ ವ್ಯವಸ್ಥಾಪಕರಿಗೆ ಸುದ್ದಿ ಮುಟ್ಟಿಸಿದ್ದಾನೆ'' ಎಂದು ವಿವರಿಸಿದರು.

ಬೆಂಗಳೂರಿನ ಇಬ್ಬರು ಇನ್ಫೋಸಿಸ್ ಉದ್ಯೋಗಿಗಳೊಂದಿಗೆ ಆನ್ ಲೈನ್ ಮೂಲಕ ಸಂಪರ್ಕದಲ್ಲಿದ್ದ ರಾಸಿಲಾ ಅವರು ಸಹೋದ್ಯೋಗಿಗಳು ಪ್ರಾಜೆಕ್ಟ್ ವಿಚಾರವಾಗಿ ಕಳುಹಿಸಿದ್ದ ಪ್ರಶ್ನೆ, ಸಮಜಾಯಿಷಿಗಳ ಬಗ್ಗೆ ಸಂಜೆ 5 ಗಂಟೆವರೆಗೂ ಉತ್ತರಿಸಿದ್ದಾರೆ. ಆದರೆ, ಆನಂತರ ಅವರಿಂದ ಯಾವುದೇ ಉತ್ತರ ಬಂದಿಲ್ಲ. ರಾಸಿಲಾ ಅವರಿಂದ ಉತ್ತರ ಬಾರದಿದ್ದಾಗ, ಬೆಂಗಳೂರು ಉದ್ಯೋಗಿಗಳು ರಾಸಿಲಾ ಅವರ ಪ್ರಾಜೆಕ್ಟ್ ಮ್ಯಾನೇಜರ್ ಗೆ ಈ ವಿಚಾರ ತಿಳಿಸಿದ್ದಾರೆ.

ವಾಚ್ ಮನ್ ಮೇಲೆ ಅನುಮಾನ
ಕೊಲೆಯ ಕಾರಣಗಳನ್ನು ಪತ್ತೆ ಹಚ್ಚಲು ಆರಂಭಿಸಿರುವ ಪೊಲೀಸರು ಈ ಪ್ರಕರಣದ ಹಿಂದೆ ಕಚೇರಿಯಲ್ಲಿ ಭಾನುವಾರ ವಾಚ್ ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 26 ವರ್ಷದ ಅಸ್ಸಾಂನ ಯುವಕ ಭಬೇನ್ ಸೈಲ್ಸಿಲಾ ಮೇಲೆ ತಮ್ಮ ಅನುಮಾನದ ದೃಷ್ಟಿ ನೆಟ್ಟಿದ್ದಾರೆ. ಭಾನುವಾರವಾದ್ದರಿಂದ ಇಡೀ ಕಚೇರಿಯೇ ಖಾಲಿ ಇತ್ತು.

ಈ ಸಂದರ್ಭದಲ್ಲಿ ರಾಸಿಲಾ ಅವರು ಕಾರ್ಯ ನಿರ್ವಹಿಸುತ್ತಿದ್ದ ಫ್ಲೋರ್ ಗೆ ಆತನೇ ಕಾವಲುಗಾರನಾಗಿದ್ದ. ಹಾಗಾಗಿ, ಆಕೆಯ ಕ್ಯಾಬಿನ್ ನೊಳಗೆ ಹೋಗಲು ಆತನಿಗೊಬ್ಬನಿಗೇ ಅವಕಾಶವಿತ್ತೆಂದು ಹೇಳಲಾಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಕ್ಯಾಬಿನ್ ಆಗಮಿಸಿದ್ದ ಅವರು, ರಾತ್ರಿ 11 ಗಂಟೆವರೆಗೂ ಕೆಲಸ ಮಾಡಬೇಕಿತ್ತು.

ಸುದ್ದಿ ತಿಳಿದು ಕೊಲೆ ನಡೆದಿರುವ ಸ್ಥಳಕ್ಕೆ ಭಾನುವಾರ ರಾತ್ರಿ 8:30ರ ಸುಮಾರಿಗೆ ಬಂದ ಪೊಲೀಸರು ಅಲ್ಲಿ ಕಾವಲು ಕಾಯುತ್ತಿದ್ದವರ ವಿಚಾರಣೆಗೆ ಮುಂದಾಗಿದ್ದಾರೆ. ಆಗ, ಭಾನುವಾರ ಸಂಜೆ ವೇಳೆಗೆ ರಾಸಿಲಾ ಇದ್ದ ಫ್ಲೋರ್ ಗೆ ಭಬೇನ್ ಎಂಬಾತ ಕಾವಲಿದ್ದ ಎಂಬುದು ತಿಳಿದುಬಂದಿದೆ.

ಹಾಗಾಗಿ, ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ತಕ್ಷಣವೇ, ಆತನ ಮನೆಗೆ ಪೊಲೀಸರ ತಂಡವನ್ನೊಂದನ್ನು ಕಳುಹಿಸಲಾಗಿದೆ. ಆತನ ಮನೆ ಮುಂದೆ ಜೀಪಿನಲ್ಲಿ ಬಂದಿಳಿದ ಪೊಲೀಸರಿಗೆ ಆತನ ಮನೆಗೆ ಬೀಗ ಹಾಕಿದ್ದು ಗಮನಕ್ಕೆ ಬಂದಿದೆ.

ನೆರೆಹೊರೆಯವರನ್ನು ವಿಚಾರಿಸಲಾಗಿ, ಆತ ತನ್ನ ಬಟ್ಟೆ ಬರೆ ಎಲ್ಲವನ್ನೂ ಪ್ಯಾಕ್ ಮಾಡಿಕೊಂಡು ಮುಂಬೈಗೆ ತೆರಳುವುದಾಗಿ ಹೋದನೆಂಬ ಉತ್ತರ ಸಿಕ್ಕಿದೆ. ಇದು, ಆತನ ವಿರುದ್ಧದ ಅನುಮಾನಕ್ಕೆ ಪುಷ್ಟಿ ಕೊಟ್ಟಿದೆ.

ಆದರೂ, ಆತನ ಬೆನ್ನಟ್ಟಿದ ಪೊಲೀಸರು ಆತನನ್ನು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಬಂಧಿಸಿದ್ದಾರೆ. ಆತನನ್ನು ವಿಚಾರಿಸಲಾಗಿ, ಆತ ತನ್ನ ತವರು ರಾಜ್ಯವಾದ ಅಸ್ಸಾಂಗೆ ತೆರಳಲು ರೈಲ್ವೇ ನಿಲ್ದಾಣಕ್ಕೆ ಬಂದಿದ್ದು ತಿಳಿದುಬಂದಿದೆ.

ಇತ್ತ, ಘಟನಾ ಸ್ಥಳದಲ್ಲಿ ತನಿಖೆ ನಡೆಸಿದ ಪೊಲೀಸರು ರಾತ್ರಿಯೇ ರಾಸಿಲಾ ಅವರ ಕುಟುಂಬವನ್ನು ಸಂಪರ್ಕಿಸಿ, ಘಟನೆಯನ್ನು ಅವರ ಗಮನಕ್ಕೆ ತಂದಿದ್ದಾರೆ.

ರಾಸಿಲಾ ಅವರು ತಮ್ಮ ಕೆಲವು ಗೆಳತಿಯರೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದರು. ಹಾಗಾಗಿ, ಅವರ ಗೆಳತಿಯರನ್ನು ಕರೆದು ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನಿಸಿದ್ದು, ಸೋಮವಾರವೂ ವಿಚಾರಣೆ ಮುಂದುವರಿದಿದೆ.

ಎರಡು ತಿಂಗಳಲ್ಲೇ ಎರಡು ಕೊಲೆ
ಪುಣೆಯಲ್ಲಿ ಹೀಗೆ ಉದ್ಯೋಗಿಯೊಬ್ಬರ ಕೊಲೆಯಾಗಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಡಿಸೆಂಬರ್ ನಲ್ಲಿ ಕ್ಯಾಪ್ ಜೆಮಿನಿ ಎಂಬ ಕಂಪನಿಯ ಉದ್ಯೋಗಿ ಅಂತರ ದಾಸ್ ಅವರು, ತಲವಾಡೆಯಲ್ಲಿನ ತಮ್ಮ ಕಚೇರಿಯ ಹೊರಗಡೆ ಕೊಲೆಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident, a 23-year-old female IT employee working at Infosys' Hinjewadi IT park campus was found murdered inside the office on Sunday evening.
Please Wait while comments are loading...