ಮನೆ ಕಿಟಕಿಯಲ್ಲಿ ಅನ್ಯಗ್ರಹಜೀವಿ! ಮೋದಿಗೆ ಮೇಲ್ ಕಳಿಸಿದ ಪುಣೆ ವ್ಯಕ್ತಿ
ಪುಣೆ, ಡಿಸೆಂಬರ್ 28: ತಮ್ಮ ಮನೆಯ ಕಿಟಕಿಯ ಬಳಿ ಅನ್ಯಗ್ರಹ ಜೀವಿ ಬಂದಿತ್ತೆಂದು ಪ್ರಧಾನಿ ಕಾರ್ಯಾಲಯಕ್ಕೆ ವ್ಯಕ್ತಿಯೊಬ್ಬ ಈ ಮೇಲ್ ಕಳಿಸಿದ ಬರೆದಿದ್ದುಸಾಕಷ್ಟು ಸುದ್ದಿ ಮಾಡಿದೆ.
ಕೂಡಲೆ ತನಿಖೆಗೆಂದು ತೆರಳಿದ ಪೊಲೀಸರಿಗೆ ತಿಳಿದಿದ್ದು ಈತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬುದು.
ಪುಣೆಯ ಕೊತ್ರುಡ್ ಪ್ರದೇಶದ 47 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಪ್ರಧಾನಿಗೆ ಪತ್ರ ಬರೆದಿದ್ದ. "ಕೆಲವು ತಿಂಗಳ ಹಿಂದೆ ನನ್ನ ಬಂಗಲೆಯ ಪಕ್ಕದ ಮರವೊಂದರಲ್ಲಿ ಬೆಳಕನ್ನು ಕಂಡೆ. ನಂತರ ತಿಳಿಯಿತು ಇದು ಅನ್ಯಗ್ರಹದಿಂದ ಬಂದ ಜೀವಿ ಅಥವಾ ವಸ್ತು ಎಂದು. ಅದಕ್ಕೆಂದೇ ನಿಮಗೆ ಈ ಬಗ್ಗೆ ಈಮೇಲ್ ಮಾಡುತ್ತಿದ್ದೇನೆ" ಎಂದು ಆತ ಬರೆದಿದ್ದಾನೆ.

ಆದರೆ ಆತನ ಕುರಿತು ಆತನ ಕುಟುಂಬಸ್ಥರನ್ನು ವಿಚಾರಿಸಿದಾಗ, ಕೆಲವು ವರ್ಷದ ಹಿಂದೆ ಬ್ರೈನ್ ಹೆಮರೇಜ್ ಖಾಯಿಲೆಗೆ ತುತ್ತಾಗಿದ್ದ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು ಗಮನಕ್ಕೆ ಬಂದಿದೆ.
ಆತ ಪ್ರಧಾನಿಗೆ ಈಮೇಲ್ ಕಳಿಸಿದ ವಿಷಯ ಕುಟುಂಬದ ಯಾರ ಗಮನಕ್ಕೂ ಬಂದಿರಲಿಲ್ಲ.












Click it and Unblock the Notifications