ಡ್ರೈನೇಜ್ ಗೆ ಬಿದ್ದ ಒಬ್ಬನನ್ನು ಕಾಪಾಡಲು ಹೋಗಿ ಐವರು ಬಿದ್ದರು!
ಪುಣೆ, ಡಿಸೆಂಬರ್.01: ಸ್ವಲ್ಪ ಎಚ್ಚರ ತಪ್ಪಿದರೆ ಎಂಥೆಂಥಾ ಅನಾಹುತಗಳು ನಡೆಯುತ್ತವೆ ಎಂಬುದಕ್ಕೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿರುವ ಇಂದಿನ ಘಟನೆಯೇ ಬೆಸ್ಟ್ ಎಕ್ಸಾಂಪಲ್. ಇಲ್ಲಿ ಒಬ್ಬರನ್ನು ರಕ್ಷಿಸಲು ತೆರಳಿ ನಾಲ್ವರು ಅವಸ್ಥೆ ಅನುಭವಿಸಿದ್ದಾರೆ. ಇನ್ನು, ಸ್ವಲ್ಪ ಯಾಮಾರಿದ್ದರೂ ಜೀವವನ್ನೇ ಕಳೆದುಕೊಳ್ಳುತ್ತಿದ್ದರು.
ಹೌದು, ಪುಣೆಯ ದಾಪೋಡಿ ಪ್ರದೇಶದಲ್ಲಿನ ಡ್ರೈನೇಜ್ ಗೆ ವ್ಯಕ್ತಿಯೊಬ್ಬ ಕಾಲುಜಾರಿ ಬಿದ್ದಿದ್ದಾನೆ. ಆ ವ್ಯಕ್ತಿಯನ್ನು ರಕ್ಷಿಸಲೆಂದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಡ್ರೈನೇಜ್ ಗೆ ಇಳಿಯುತ್ತಿದ್ದಾಗ , ಸಿಬ್ಬಂದಿ ಹಾಗೂ ಅವರ ಜೊತೆ ಮತ್ತಿಬ್ಬರು ಡ್ರೈನೇಜ್ ನಲ್ಲಿ ಬಿದ್ದು ಸಿಲುಕಿಕೊಂಡಿದ್ದಾರೆ.

ಪುಣೆಯಲ್ಲಿ ಭಾರೀ ಮಳೆಗೆ ಕನಿಷ್ಠ ಹನ್ನೊಂದು ಮಂದಿ ಸಾವು
ಒಬ್ಬರನ್ನು ರಕ್ಷಿಸಲು ತೆರಳಿ ಐವರು ಡ್ರೈನೇಜ್ ಗುಂಡಿಯಲ್ಲಿ ಸಿಲುಕಿಕೊಂಡಂತಾ ಘಟನೆ ನಡೆದಿದೆ. ಈ ಘಟನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮತ್ತಷ್ಟು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಡ್ರೈನೇಜ್ ನಲ್ಲಿ ಸಿಲುಕಿರುವ ಐವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದ್ದಾರೆ.

ಐವರಲ್ಲಿ ಮೂವರು ಬಚಾವ್!
ಇನ್ನು, ಡ್ರೈನೇಜ್ ನಲ್ಲಿ ಸಿಲುಕಿದ್ದ ಐವರನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಈಗಾಗಲೇ ಮೂವರನ್ನು ರಕ್ಷಿಸಲಾಗಿದ್ದು, ಉಳಿದ ಇಬ್ಬರಿಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ.












Click it and Unblock the Notifications