Get Updates
Get notified of breaking news, exclusive insights, and must-see stories!

ಪುಣೆಯಲ್ಲಿ ಭಾರೀ ಮಳೆಗೆ ಕನಿಷ್ಠ ಹನ್ನೊಂದು ಮಂದಿ ಸಾವು

Recommended Video

      ಪುಣೆಯಲ್ಲಿ ಭಾರೀ ಮಳೆಗೆ ಕನಿಷ್ಠ ಹನ್ನೊಂದು ಮಂದಿ ಸಾವು | Oneindia Kannada

      ಪುಣೆ, ಸೆಪ್ಟೆಂಬರ್ 26: ಭಾರೀ ಮಳೆಯಿಂದ ಏರ್ಪಟ್ಟ ನೆರೆ ಪರಿಸ್ಥಿತಿಯಿಂದ ಆದ ಪ್ರತ್ಯೇಕ ಅವಘಡಗಳಲ್ಲಿ ಕನಿಷ್ಠ ಹನ್ನೊಂದು ಮಂದಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದ್ದು, ಪರಿಸ್ಥಿತಿಯನ್ನು ಸರ್ಕಾರ ಅವಲೋಕಿಸುತ್ತಿದೆ ಎಂದಿದ್ದಾರೆ.

      ಪುಣೆಯಲ್ಲಿ ಬುಧವಾರ ರಾತ್ರಿ ಕೂಡ ಭಾರೀ ಮಳೆಯಾಗಿದೆ. ಐನೂರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

      Heavy Rain In Pune; At Least 11 People Died

      "ಪುಣೆ ಸುತ್ತ ಮುತ್ತ ಭಾರೀ ಮಳೆಯಿಂದ ಜೀವ ಹಾನಿ ಆಗಿರುವುದು ನೋವಿನ ಸಂಗತಿ. ಕುಟುಂಬಗಳಿಗೆ ನನ್ನ ತೀವ್ರ ಸಂತಾಪ ಸೂಚಿಸುತ್ತೇನೆ. ಅಗತ್ಯ ಇರುವ ಎಲ್ಲ ನೆರವನ್ನು ನೀಡುತ್ತಿದ್ದೇವೆ. ರಾಜ್ಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಹಾಗೂ ಕಂಟ್ರೋಲ್ ರೂಮ್ ನಿರಂತರವಾಗಿ ಪುಣೆ ಕಲೆಕ್ಟರ್ ಹಾಗೂ ಪಿಎಂಸಿ ಜತೆಗೆ ಸಂಪರ್ಕದಲ್ಲಿ ಇದ್ದಾರೆ" ಎಂದು ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.

      ಅರ್ಣೇಶ್ವರ ಪ್ರದೇಶ ವೊಂದರಲ್ಲೇ ಬುಧವಾರ ರಾತ್ರಿ ಗೋಡೆ ಕುಸಿದು ಒಂಬತ್ತು ವರ್ಷದ ಬಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ. ಗುರುವಾರ ಬೆಳಗ್ಗೆ ಮಳೆ ನಿಂತಿದೆ. ಆದರೆ ತಗ್ಗು ಪ್ರದೇಶಗಳಲ್ಲಿ ಇನ್ನೂ ನೀರು ನಿಂತಿದೆ. ಗೋಡೆ ಕುಸಿತ, ಮರ ಬುಡಮೇಲು ಆಗಿರುವಂಥ ಹಲವು ವರದಿಗಳು ಬಂದಿವೆ.

      ಪುಣೆಯ ಸುತ್ತ ಮುತ್ತ ಬುಧವಾರ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಸಿಂಘಡ್ ರಾಸ್ತೆ, ಧನಕ್ ವಾಡಿ, ಬಾಲಾಜಿನಗರ್, ಅಂಬೇಗಾಂವ್, ಸಹಕಾರ್ ನಗರ್, ಪಾರ್ವತಿ, ಕೊಲ್ಹೇವಾಡಿ ಹಾಗೂ ಕಿರ್ಕಾತ್ ವಾಡಿ, ರಣ್ ಪೈಸ್ ನಲ್ಲಿ ಮಳೆ ನೀರು ನಿಂತಿತ್ತು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+