ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಂಗ್ಯಚಿತ್ರಕಾರ ಶ್ರೀಸಾಮಾನ್ಯ' ಆರ್.ಕೆ ಲಕ್ಷ್ಮಣ್ ವಿಧಿವಶ

By Mahesh
|
Google Oneindia Kannada News

ಪುಣೆ, ಜ.26: 'ಶ್ರೀಸಾಮಾನ್ಯ(The Common Man)ಗೆ ಬೆಲೆ ತಂದುಕೊಟ್ಟ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ ಲಕ್ಷ್ಮಣ್ ವಿಧಿವಶರಾಗಿದ್ದಾರೆ. ಪುಣೆಯ ಖಾಸಗಿ ಸೋಮವಾರ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ತೊಂದರೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದರು.

ಕರ್ನಾಟಕದ ಮೈಸೂರು ಮೂಲದ ಆರ್. ಕೆ ಲಕ್ಷ್ಮಣ್(94) ಅವರು ಕಿಡ್ನಿ, ಎದೆನೋವು ಸಮಸ್ಯೆಯಿಂದ ಶುಕ್ರವಾರ ಪುಣೆಯ ನರ್ಸಿಂಗ್ ಹೋಂಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಅವರನ್ನು ಐಸಿಯುನಲ್ಲಿರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು. ಭಾನುವಾರ ಬೆಳಗ್ಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಅದರೆ, ಇಂದು ಅವರನ್ನು ಕಳೆದುಕೊಂಡೆವು ಎಂದು ಕುಟುಂಬದ ಸದಸ್ಯರೊಬ್ಬರು ಐಎಎನ್ಎಸ್ ಗೆ ವಿಷಯ ತಿಳಿಸಿದ್ದಾರೆ.

Eminent Cartoonist RK Laxman passes away

ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ ಅಯ್ಯರ್ ಸಾಮಾನ್ಯಓದುಗನಿಂದ ಹಿಡಿದು, ರಾಷ್ಟ್ರಪತಿಯವರೆಗೆ ಎಲ್ಲರಿಗೂ ಲಕ್ಷ್ಮಣ್ ವ್ಯಂಗ್ಯಚಿತ್ರಗಳು ಜನಪ್ರಿಯ, ಅರ್ಧ ಶತಮಾನಕ್ಕೂ ಹೆಚ್ಚುಕಾಲ ಓದುಗರನ್ನು ಮೆಚ್ಚಿಸಿದ ಕಲೆಗಾರ.


ಲಕ್ಷ್ಮಣ್' ಅವರು 56 ವರ್ಷ ಗಳಿಂದ 'ಟೈಮ್ಸ್ ಆಫ್ ಇಂಡಿಯ ದಿನ ಪತ್ರಿಕೆ'ಯಲ್ಲಿ ಬರೆಯುತ್ತಿದ್ದ 'ಕಾಮನ್ ಮ್ಯಾನ್' ('ಸಾಮಾನ್ಯ ಪ್ರಜೆ'), ಅಥವ 'ಜನಸಾಮಾನ್ಯ', 'ವ್ಯಂಗ್ಯ ಚಿತ್ರಾಂಕಣ'ವನ್ನು ಓದಿ ಸವಿಯದವರಿಲ್ಲ. ಇದಕ್ಕೂ ಮುನ್ನ ಕನ್ನಡದ "ಕೊರವಂಜಿ ಹಾಸ್ಯಪತ್ರಿಕೆ "ಯಿಂದ ಲಕ್ಷ್ಮಣರ ವ್ಯಂಗ್ಯಚಿತ್ರಜೀವನ,ಶುರುವಾಗಿ, ದೇಶದಾದ್ಯಂತ ಪಸರಿಸಿತು.

'ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ, ಪದ್ಮ ಭೂಷಣ, ಪದ್ಮ ವಿಭೂಷಣ, ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಆರ್ ಕೆ ಲಕ್ಷ್ಮಣ್ ಅವರಿಗೆ ಲಭಿಸಿತ್ತು. ಸುಪ್ರಸಿದ್ಧ ಕಾದಂಬರಿಕಾರ, ಆರ್. ಕೆ. ನಾರಾಯಣ್ ಇವರ ಸೋದರ. ಆರ್ ಕೆ ಲಕ್ಷ್ಮಣ್ ಆವರು ಕಾರ್ಟೂನ್ ಅಷ್ಟೇ ಅಲ್ಲದೆ, ದ ಟನಲ್ ಆಫ್ ಟೈಮ್, ದ 'ಎಲಾಕ್ ವೆಂಟ್ ಬ್ರಷ್ ಸೇರಿದಂತೆ ಐದಾರು ಸಚಿತ್ರ ಪುಸ್ತಕಗಳನ್ನು ಹೊರ ತಂದಿದ್ದರು. ಮೈಸೂರು-ಮುಂಬೈ-ಪುಣೆ ಅಷ್ಟೇ ಏಕೆ ಭಾರತದ ಹೆಮ್ಮೆಯ ಕಲಾವಿದನನ್ನು ಇಂದು ಕಳೆದುಕೊಂಡ ದುಃಖ ಕಲಾಭಿಮಾನಿಗಳಲ್ಲಿ ತುಂಬಿದೆ.

English summary
Eminent Cartoonist RK Laxman passed away at 94. Laxman, who created "The Common Man", had suffered multiple organ failure and his condition was "critical", family sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X