ಸ್ಟೇಜ್ ಶೋ ಮಧ್ಯದಲ್ಲೇ ಹೃದಯಾಘಾತ, ನೃತ್ಯಗಾರ್ತಿ ದುರ್ಮರಣ

Posted By:
Subscribe to Oneindia Kannada

ಪುಣೆ, ಅಕ್ಟೋಬರ್ 23: ಜನಪ್ರಿಯ ಶಾಸ್ತ್ರೀಯ ನೃತ್ಯಗಾರ್ತಿ ಅಶ್ವಿನಿ ಎಕ್ಬೋಟೆ ಅವರು ದುರಂತ ಸಾವಿಗೀಡಾಗಿದ್ದಾರೆ. ಸ್ಟೇಜ್ ಶೋವೊಂದರಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೀಡಾಗಿ ದುರಂತ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ ನಡೆದ ಈ ದುರಂತದಿಂದ ಮರಾಠಿ ಚಿತ್ರರಂಗ ಹಾಗೂ ಕಲಾವಿದರು ಆಘಾತಕ್ಕೊಳಗಾಗಿದ್ದಾರೆ.

44 ವರ್ಷ ವಯಸ್ಸಿನ ಅಶ್ವಿನಿ ಏಕ್ಬೋಟೆ ಅವರು ಶನಿವಾರ ಸಂಜೆಯಿಂದ ಪುಣೆಯ ಭರತನಾಟ್ಯ ಮಂದಿರದಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. ನರ್ತಿಸುತ್ತಿದ್ದ ವೇಳೆ ಹೃದಯಾಘಾತವಾಗಿ, ಕುಸಿದು ಬಿದ್ದಿದ್ದಾರೆ.[ಮಿರ್ಚಿ ಆರ್ ಜೆ ಶುಭಂ ಸಾವಿಗೆ ಆತನ ನಿರ್ಲಕ್ಷ್ಯವೇ ಕಾರಣ?]

Dancer Ashwini Ekbote dies during stage performance in Pune

ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರೆಂದು ವೈದ್ಯರು ಹೇಳಿದರು. ನಟಿ ಸೋನಾಲಿ ಕುಲಕರ್ಣಿ ಸೇರಿದಂತೆ ಹಲವಾರು ಮಂದಿ ಅಶ್ವಿನಿ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.

ನಾಗ್ಪುರ ಮೂಲದ ರೇಡಿಯೋ ಜಾಕಿ ಶುಭಂ ಕೆಚೆ(24) ಅವರು ಶೋ ಮಧ್ಯದಲ್ಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ನಂತರ ಅಶ್ವಿನಿ ಅವರ ಸಾವಿನ ಸುದ್ದಿ ಪುಣೆಯಿಂದ ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Classical dancer Ashwini Ekbote died on Saturday night after collapsing on stage during a performance. The 44-year-old, who had also acted in several plays, was performing at the Bharat Natyamandir in Pune said Police.
Please Wait while comments are loading...