• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ಬಿಜೆಪಿ ನಾಯಕರು ಎನ್ ಸಿಪಿಗೆ ಬರಲಿದ್ದಾರೆ"

|

ಮುಂಬೈ, ಡಿಸೆಂಬರ್ 26: "ಚುನಾವಣೆಗೆ ಮುನ್ನ ಬಿಜೆಪಿ ಸೇರಿರುವ ನಾಯಕರೆಲ್ಲರೂ ಇನ್ನು ಮೂರ್ನಾಲ್ಕು ತಿಂಗಳುಗಳಲ್ಲೇ ಎನ್ ಸಿಪಿಗೆ ಮರಳಿ ಬರಲಿದ್ದಾರೆ" ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹಾಗೂ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೆ ಮುನ್ನ ಎನ್ ಸಿಪಿ ಹಾಗೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಬಿಜೆಪಿ ಅಧಿಕ ಮಟ್ಟದಲ್ಲಿ ಕರೆದುಕೊಂಡಿತು. ಪಕ್ಷ ಅಧಿಕಾರಕ್ಕೆ ಬರುತ್ತದೆ, ತಮ್ಮ ಪ್ರದೇಶವನ್ನು ಅಭಿವೃದ್ಧಿಪಡಿಸಬಹುದು ಎಂಬ ಭರವಸೆಯಲ್ಲಿ ನಾಯಕರು ಅಲ್ಲಿಗೆ ಹೋದರು. ಆದರೆ ಈಗ ಅವರೆಲ್ಲ ಬೇಸತ್ತಿದ್ದಾರೆ. ತಮ್ಮ ಪ್ರದೇಶಗಳಿಗೆ ಯಾವುದೇ ಅಭಿವೃದ್ಧಿ ಯೋಜನೆಯನ್ನು ತರಲು ಅವರಿಗೆ ಆಗುತ್ತಿಲ್ಲ. ಆದ್ದರಿಂದ ಅವರೆಲ್ಲಾ ಮರಳಲು ಕಾತರವಾಗಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.

ಪುಣೆ, ಪಿಂಪ್ರಿ-ಚಿಂಚವಾಡದಲ್ಲಿ ಮಾತ್ರವಲ್ಲ, ಮಹಾರಾಷ್ಟ್ರದ ಹಲವು ಕಡೆಗಳಲ್ಲಿ ಹೀಗೇ ಆಗಲಿದೆ ಎಂದು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವ ನಾಯಕರು ಮರಳಲಿದ್ದಾರೆ ಎಂಬ ಕುರಿತು ಮಾಹಿತಿ ನೀಡಲು ಸಾಧ್ಯವಿಲ್ಲ. ನೀತಿ ಸಂಹಿತೆ ಅವಧಿ ಮುಗಿದ ನಂತರ ನಾಯಕರಿಗೆ ತಿಳಿಸುತ್ತೇವೆ. ಪುಣೆ, ಪಿಂಪ್ರಿ-ಚಿಂಚವಾಡದ ಕೆಲವು ಪ್ರಮುಖ ನಾಯಕರು ಪಕ್ಷಕ್ಕೆ ಮರಳಿ ಬರಲಿರುವುದು ಖಚಿತ ಎಂದು ಹೇಳಿದರು.

ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ: ಕಿಡಿ ಹಚ್ಚಿಸಿದ ಅಜಿತ್ ಪವಾರ್‌ಗೆ ಬಿಎಸ್‌ವೈ ತಿರುಗೇಟು

ಈಚೆಗೆ ಪುಣೆ ನಗರ ಪಾಲಿಕೆಗೆ 23 ಹಳ್ಳಿಗಳನ್ನು ವಿಲೀನಗೊಳಿಸಿರುವ ಕುರಿತು ಪ್ರತಿಕ್ರಿಯಿಸಿ, ಈ ಪ್ರದೇಶಗಳಲ್ಲಿ ನಗರೀಕರಣ ಯೋಜನೆಗಳನ್ನು ಕೈಗೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

English summary
Leaders who joined the BJP before elections will return to NCP soon, said deputy chief minister and NCP leader Ajit Pawar said on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X