17ರ ಯುವತಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ, 7 ತಿಂಗಳಿಗೆ ಹೆರಿಗೆ
ಪುಣೆ, ಡಿಸೆಂಬರ್ 27: ಮದುವೆ ಆಗುವುದಾಗಿ ನಂಬಿಸಿ, ಸಂಬಂಧಿಯೇ ಹದಿನೇಳು ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು, ಪಿಂಪ್ರಿ-ಚಿಂಚ್ ವಾಡ್ ಪೊಲೀಸರು ದೂರು ದಾಖಲಿಸಿದ್ದಾರೆ. ಆಕೆಗೆ ಹೊಟ್ಟೆನೋವು ಎಂದು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ, ಏಳನೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.
ಆರೋಪಿ ಹಾಗೂ ಹನ್ನೊಂದನೇ ತರಗತಿ ವಿದ್ಯಾರ್ಥಿನಿ ಒಂದೇ ಮನೆಯಲ್ಲಿ ವಾಸವಿದ್ದರು. ದೂರಿನ ಪ್ರಕಾರ, ಯುವತಿ ಮೇಲೆ ಈ ವರ್ಷದ ಮೇ ತಿಂಗಳಲ್ಲಿ ಅತ್ಯಾಚಾರ ನಡೆದಿದೆ. ಘಟನೆ ಬಗ್ಗೆ ಯಾರಿಗಾದರೂ ಹೇಳಿದರೂ ಕೊಲ್ಲುವುದಾಗಿ ಯುವತಿಯನ್ನು ಆರೋಪಿ ಹೆದರಿಸಿದ್ದಾನೆ. ಯುವತಿಗೆ ಆರೋಪಿಯು ತಂದೆಯ ಕಡೆಯಿಂದ ಸಂಬಂಧಿಯಾಗಬೇಕು. ಮದುವೆಯಾಗುವುದಾಗಿ ಮಾತು ಕೊಟ್ಟು, ಈ ಕೃತ್ಯ ಎಸಗಿದ್ದಾನೆ.

ತನ್ನ ತಂದೆಯ ಪೋಷಕರು ಹಾಗೂ ಮತ್ತಿಬ್ಬರ ಜತೆಗೆ ಯುವತಿ ವಾಸವಿದ್ದಾಳೆ. ಆರೋಪಿಯು ವಿವಾಹಿತನಾಗಿದ್ದು, ಪತ್ನಿಯು ಆತನಿಂದ ದೂರವಾಗಿದ್ದಾರೆ. ಯುವತಿಯ ಪೋಷಕರು ಎಲ್ಲಿದ್ದಾರೆ ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.












Click it and Unblock the Notifications