Get Updates
Get notified of breaking news, exclusive insights, and must-see stories!

Pulakeshinagar Elections : ಪುಲಕೇಶಿನಗರ: ಬಿಜೆಪಿ-ಕಾಂಗ್ರೆಸ್ ತೀವ್ರ ಪೈಪೋಟಿ

ಮುಂಬರುವ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಪುಲಕೇಶಿನಗರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಖಂಡ ಶ್ರೀನಿವಾಸಮೂರ್ತಿ ಜಯ ಗಳಿಸಿದ್ದರು. ಜನತಾ ದಳ (ಜಾತ್ಯತೀತ)ಯ ಪ್ರಸನ್ನ ಕುಮಾರ್ 81626 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಪುಲಕೇಶಿನಗರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ನಗರದಲ್ಲಿರುವ ಬಹುಪಾಲು ಕೊಳಗೇರಿ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರ ಪುಲಕೇಶಿನಗರ. ಇದು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದೆ. ಡಿ.ಜೆ.ಹಳ್ಳಿ, ಎಸ್.ಕೆ. ಗಾರ್ಡನ್, ದೊಡ್ಡಣ್ಣನಗರ, ಕಾವಲ್ ಬೈರಸಂದ್ರ, ಭಾರತನಗರ ಸೇರಿ ಹಲವು ಕೊಳೆಗೇರಿ ಪ್ರದೇಶಗಳು ಇಲ್ಲಿವೆ.

pulakeshinagar map

ಇಲ್ಲಿ 2008ರಲ್ಲಿ ಕಾಂಗ್ರೆಸ್ ಬಿ. ಪ್ರಸನ್ನಕುಮಾರ್ ಜಯಶಾಲಿಯಾಗಿದ್ದರು. ಈ ಚುನಾವಣೆಯಲ್ಲಿ ಅವರು ಜೆಡಿಎಸ್ ನ ಅಖಂಡ ಶ್ರೀನಿವಾಸಮೂರ್ತಿಯವರನ್ನು ಸುಮಾರು 19 ಸಾವಿರ ಮತಗಳಿಂದ ಸೋಲಿಸಿದ್ದರು.ಆದರೆ 2013ರಲ್ಲಿ ಅಖಂಡ ಶ್ರೀನಿವಾಸಮೂರ್ತಿ ಸೇಡು ತೀರಿಸಿಕೊಂಡರು. ಈ ಚುನಾವಣೆಯಲ್ಲಿ 48,995 ಮತಗಳನ್ನು ಪಡೆದ ಅವರು ಕಾಂಗ್ರೆಸಿನ ಬಿ. ಪ್ರಸನ್ನಕುಮಾರ್ ಅವರನ್ನು 10 ಸಾವಿರ ಮತಗಳ ಅಂತರದಿಂದ ಸೋಲಿಸಿದರು.

ಬೆಂಗಳೂರು ಚಾಳುಕ್ಯ ರಾಜ 'ಪುಲಿಕೇಶಿ' ಹೆಸರಿನ ಈ ಕ್ಷೇತ್ರದಲ್ಲಿ ಮಚ್ಚು ಲಾಂಗ್‌ಗಳದ್ದೇ ಸದ್ದು. ಒಂದು ಕಾಲದಲ್ಲಿ ಚರ್ಮೋದ್ಯಮಕ್ಕೆ ಹೆಸರಾಗಿದ್ದ ಟ್ಯಾನರಿ(ಚರ್ಮ) ರಸ್ತೆಯುದ್ದಕ್ಕೂ ಗುಜರಿ, ಮಾಂಸದ ಅಂಗಡಿಗಳ ಸಾಲು. ಈಗ ಇಲ್ಲಿ ಕನ್ನಡಕ್ಕಿಂತ ಇಂಗ್ಲಿಷ್, ಹಿಂದಿ, ಉರ್ದು, ತಮಿಳು, ಇತ್ತೀಚೆಗೆ ಈಶಾನ್ಯ ಭಾರತೀಯ ಭಾಷೆಗಳದ್ದೇ ವಿಜೃಂಭಣೆ. 2020ರಲ್ಲಿ ಬೆಂಗಳೂರಿನ ಇತಿಹಾಸದಲ್ಲಿ ಕರಾಳ ಘಟನೆಯಾಗಿ ದಾಖಲಾದ ಕೆಜಿಹಳ್ಳಿ, ಡಿಜೆ ಹಳ್ಳಿ ಗಲಾಟೆ ನಡೆದಿದ್ದು ಇದೇ ಕ್ಷೇತ್ರದಲ್ಲಿ. ಸದ್ಯ ಇಲ್ಲೂ ಚುನಾವಣಾ ಕಾವು ಜೋರಾಗುತ್ತಿದೆ.

pulakeshinagar mla

ಮೊದಲು ಯಲಹಂಕ ಕ್ಷೇತ್ರದ ಭಾಗವಾಗಿದ್ದ ಪುಲಿಕೇಶಿನಗರ, ಬಳಿಕ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಯಿತು. ಯಲಹಂಕ, ಭಾರತಿನಗರ ಕ್ಷೇತ್ರದ ಕೆಲವು ಭಾಗ ಮುರಿದುಕೊಂಡು 2008ರಲ್ಲಿ ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರ ಉದಯಿಸಿತು. ಅವಿಭಜಿತ ಯಲಹಂಕವಾಗಿದ್ದ ವೇಳೆಯಲ್ಲಿ ಬೂಸಾ ಚಳುವಳಿಯ ಹರಿಕಾರ ದಿವಂಗತ ಬಸವಲಿಂಗಪ್ಪ ಪ್ರತಿನಿಧಿಸಿದ್ದ ಕ್ಷೇತ್ರ ಎನ್ನುವ ಹೆಗ್ಗಳಿಕೆ ಪುಲಕೇಶಿನಗರಕ್ಕಿದೆ.

ಅಖಂಡ ಶ್ರೀನಿವಾಸಮೂರ್ತಿ ಟಿಕೆಟ್ ಆಕಾಂಕ್ಷಿ

ಜೆಡಿಎಸ್‌ನಿಂದ ಅಮಾನತುಗೊಂಡು ಕಾಂಗ್ರೆಸ್ ಸೇರಿದ್ದ 7 ಶಾಸಕರಲ್ಲಿ ಅಖಂಡ ಶ್ರೀನಿವಾಸಮೂರ್ತಿ ಸಹ ಒಬ್ಬರು.

ಈ ಬಾರಿ ಟಿಕೆಟ್ ಯಾರಿಗೆ?

ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಈ ಬಾರಿ ಮತ್ತೆ ಟಿಕೆಟ್ ಬಯಸಿದ್ದಾರೆ. ಅಲ್ಲಿ ಸಿಗದಿದ್ದರೆ ಜೆಡಿಎಸ್‌ಗೆ ವಾಪಸ್ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮತ್ತೊಂದೆಡೆ ಮಾಜಿ ಶಾಸಕ ಪ್ರಸನ್ನಕುಮಾರ್ ಟಿಕೆಟ್ ಬಯಸಿದ್ದರೆ, ಗಲಾಟೆಯ ಆರೋಪ ಹೊತ್ತಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೂಡ ಟಿಕೆಟ್ ಆಕಾಂಕ್ಷಿಯೇ ಆಗಿದ್ದಾರೆ. ಆಮ್ ಆದ್ಮಿ ಪಕ್ಷ ಸುರೇಶ್‌ ರಾಥೋಡ್‌ ಅವರಿಗೆ ಟಿಕೆಟ್ ನೀಡಿದೆ. ಆದರೂ ಕಾಂಗ್ರೆಸ್‌,ಬಿಜೆಪಿ, ಜೆಡಿಎಸ್ ಪಿಲಕೇಶಿನಗರ ಅಭ್ಯರ್ಥಿಗಳನ್ನು ಇನ್ನೂ ಘೋಷಣೆ ಮಾಡಿಲ್ಲ.

ಮತದಾರರ ಸಂಖ್ಯೆ:

ಕ್ಷೇತ್ರದಲ್ಲಿ ದಲಿತರು, ಮುಸ್ಲಿಂ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವುಗಳೇ ಫಲಿತಾಂಶದಲ್ಲಿ ನಿರ್ಣಾಯಕವಾಗಿವೆ. ಕ್ಷೇತ್ರದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರು, ತಮಿಳರು, ಕ್ರೈಸ್ತರು, ದಲಿತರ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಗೆಲ್ಲುವ ಉತ್ಸಾಹದಲ್ಲಿದೆ. ಕ್ಷೇತ್ರದಲ್ಲಿ ಒಟ್ಟು 7 ಬಿಬಿಎಂಪಿ ವಾರ್ಡ್‌ಗಳಿವೆ.

ಇನ್ನು ಒಟ್ಟು - 2,56,000 ಮತದಾರರು ಇಲ್ಲಿದ್ದಾರೆ. ಈ ಪೈಕಿ ಮುಸ್ಲಿಂ ಮತಗಳೇ ನಿರ್ಣಾಯಕವಾಗಿದ್ದು, ಅವರ ಸಂಖ್ಯೆ 71,000 ಇದೆ. ಇನ್ನು ಇತರೇ ಭಾಷಿಕರು - 68,000 ಮತದಾರರಿದ್ದಾರೆ. ಇನ್ನುಳಿದಂತೆ ಲಿಂಗಾಯತ - 2,000, ಒಕ್ಕಲಿಗರು - 25,000, ಎಸ್ಸಿ-ಎಸ್‌ಟಿ - 45,000, ಬ್ರಾಹ್ಮಣ - 24,000, ಒಬಿಸಿ - 5,000, ತಿಗಳ - 4,000, ಕುರುಬ - 2,000, ದೇವಾಂಗ - 2,000, ಯಾದವ - 1,000 ಹಾಗೂ ಇತರೇ ಮತದಾರರು 7,000 ಇದ್ದಾರೆ.

Pulakeshinagar Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಅಖಂಡ ಶ್ರೀನಿವಾಸಮೂರ್ತಿ(ಕಾಂಗ್ರೆಸ್) 97,574 ಪ್ರಸನ್ನ ಕುಮಾರ್(ಜೆಡಿಎಸ್) 15,948
2013 ಅಖಂಡ ಶ್ರೀನಿವಾಸಮೂರ್ತಿ(ಕಾಂಗ್ರೆಸ್) 48,995 ಬಿ. ಪ್ರಸನ್ನ ಕುಮಾರ್(ಕಾಂಗ್ರೆಸ್) 38,796
2008 ಬಿ. ಪ್ರಸನ್ನ ಕುಮಾರ್(ಕಾಂಗ್ರೆಸ್) 39,577 ಆರ್.ಶ್ರೀನಿವಾಸ ಮೂರ್ತಿ(ಜೆಡಿಎಸ್) 21,908

ಸಮಸ್ಯೆಗಳು:

ಶಾಸಕ ಆರ್. ಅಖಂಡ ಶ್ರೀನಿವಾಸಮೂರ್ತಿ ಕ್ಷೇತ್ರದ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಿಸುತ್ತಿಲ್ಲ. ಕ್ಷೇತ್ರದ ಹೆಚ್ಚಿನ ಭಾಗಗಳು ಕೊಳಗೇರಿಗಳಾಗಿದ್ದು ನೀರು ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ. ಒಳಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲ. ಹೀಗಾಗಿ ಇವೆಲ್ಲಾ ಚುನಾವಣೆ ಮೇಲೆ ಪರಿಣಾಮ ಬೀರಲಿವೆ. ಒಂದೆಡೆ ಕೊಳೆತು ನಾರುವ ಸ್ಲಂ, ಮತ್ತೊಂದೆಡೆ ಬ್ರಿಟಿಷರ ಕಾಲದ ವೈಭವ ನೆನಪಿಸುವ ಮಹಡಿ ಮಹಲುಗಳ ವೈಭೋಗ. ಪಾರ್ಕ್‌ಗಳು, ಸುಂದರವಾದ ರಸ್ತೆಗಳು ಅಲ್ಲೊಂದು ಇಲ್ಲೊಂದು ಕಂಡರೂ, ಕ್ಷೇತ್ರದುದ್ದಕ್ಕೂ ಬರಿಗಾಲಲ್ಲಿ ತಿರುಗಿದರೆ ರೋಗ ಅಂಟುವುದು ಗ್ಯಾರಂಟಿ. ಕಿಷ್ಕಿಂಧೆಯಂತಿರುವ ರಸ್ತೆ, ಮದ್ಯದ ಅಮಲು, ಮಾಂಸದ ಘಮಲು ಮೂಗಿಗೆ ರಾಚುತ್ತದೆ. ಕಡು ಬಡವರೇ ಇಲ್ಲಿ ಹೆಚ್ಚಿದ್ದಾರೆ. 50ಕ್ಕೂ ಅಧಿಕ ಕೊಳಚೆ ಪ್ರದೇಶಗಳಿಂದ ಆವೃತಗೊಂಡಿರುವುದೇ ಕ್ಷೇತ್ರದ ವೈಶಿಷ್ಟ್ಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+