ಖಾಸಗಿ ವಲಯದಲ್ಲೂ ಉದ್ಯೋಗ ಮೀಸಲಾತಿ : ಆರ್ ಜೆ ಡಿ ಭರವಸೆ

ಪಾಟ್ನಾ, ಏಪ್ರಿಲ್ 08: ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ಸೋಮವಾರ(ಏಪ್ರಿಲ್ 08)ದಂದು ಲೋಕಸಭೆ ಚುನಾವಣೆ 2019ಗಾಗಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಉದ್ಯೋಗ ಸೃಷ್ಟಿ, ರೈತರ ಸಮಸ್ಯೆ ನಿವಾರಣೆ, ಸಾಮಾಜಿಕ ನ್ಯಾಯ, ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿ ಮುಂತಾದಾ ಭರವಸೆಗಳನ್ನು ಪ್ರಣಾಳಿಕೆ ಹೊಂದಿದೆ.

ಬಿಹಾರದಲ್ಲಿ ಪ್ರಮುಖವಾಗಿ ಎಲ್ಲಾ ವಲಯಗಳಲ್ಲೂ ಉದ್ಯೋಗ ಸೃಷ್ಟಿಸಿ, ಇಲ್ಲಿನ ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯುತ್ತೇವೆ ಎಂದು ತೇಜಸ್ವಿ ಯಾದವ್​ ಭರವಸೆ ನೀಡಿದ್ದಾರೆ.

RJD releases poll manifesto, promises job quotas in private sector

ಕಾಂಗ್ರೆಸ್​ನ ಕನಿಷ್ಠ ಆದಾಯ ಭರವಸೆ (ನ್ಯಾಯ್​) ಯೋಜನೆಗೆ ಆರ್ ಜೆಡಿ ಬೆಂಬಲ ನೀಡಿದೆ. ಹಿಂದುಳಿದ ವರ್ಗಗಳ ಮಂಡಲ್​ ಆಯೋಗ ಮಂಡಲ್​ ಕಮಿಷನ್​ ವರದಿಯಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದಿದ್ದಾರೆ.

ಜನಸಂಖ್ಯೆ ಆಧಾರದ ಮೇಲೆ ದಲಿತರು, ಹಿಂದುಳಿದ ಜನರಿಗೆ ಮೀಸಲಾತಿ, ಬಡ್ತಿ ಮೀಸಲಾತಿ ನೀಡಲಾಗುತ್ತದೆ. ಖಾಸಗಿ ವಲಯದ ಉದ್ಯೋಗಗಳಲ್ಲೂ ದಲಿತ, ಹಿಂದುಳಿದ ವರ್ಗಕ್ಕೆ ಮೀಸಲಾತಿ ಕೋಟಾ ಒದಗಿಸಲಾಗುವುದು ಎಂದರು.

200 ಹುದ್ದೆಯಲ್ಲಿ ರೋಸ್ಟರ್​ ಪದ್ಧತಿಯನ್ನು (99 ಹುದ್ದೆಗಳು ಎಸ್​ಸಿ, ಎಸ್​ಟಿ, ಒಬಿಸಿ ವರ್ಗದವರಿಗೆ ಮೀಸಲು, 101 ಹುದ್ದೆಗಳಿಗೆ ಮೀಸಲಾತಿ ಇಲ್ಲ) ಮತ್ತೊಮ್ಮೆ ಜಾರಿಗೊಳಿಲಾಗುವುದು, ಪರಿಸರ ಸಂರಕ್ಷಣೆಗಾಗಿ ಅಗತ್ಯ ಕ್ರಮವನ್ನು ಕೈಗೊಂಡು ಕೇಂದ್ರ ಸರ್ಕಾರದ ಯೋಜನೆಗೆ ಸಹಕರಿಸುವುದು ನಮ್ಮ ಉದ್ದೇಶ ಎಂದು ತೇಜಸ್ವಿ ಹೇಳಿದ್ದಾರೆ.

ಬಿಹಾರದಲ್ಲಿ ಏಪ್ರಿಲ್ 11ರಂದು ಔರಂಗಾಬಾದ್, ಗಯಾ, ನವಾಡಾ ಹಾಗೂ ಜಮುಯಿಯಲ್ಲಿ ಚುನಾವಣೆ ನಡೆಯಲಿದೆ. ದೇಶದೆಲ್ಲೆಡೆ ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+