ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಕಚೇರಿಯಲ್ಲೇ ಸ್ಯಾನಿಟೈಸರ್, ಮಾಸ್ಕ್ ಮಾರಾಟ

|
Google Oneindia Kannada News

ಪಾಟ್ನಾ, ಜುಲೈ 24 : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಮಾಸ್ಕ್‌, ಸ್ಯಾನಿಟೈಸರ್ ಬಳಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಇವುಗಳ ಬೆಲೆಗಳು ಸಹ ಏರಿಕೆಯಾಗಿವೆ.

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅಂಚೆ ಕಚೇರಿಯಲ್ಲಿ ಮಾಸ್ಕ್, ಸ್ಯಾನಿಟೈಸರ್, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯದ ಪುಡಿಗಳನ್ನು ಮಾರಾಟ ಮಾಡಲಾಗುತ್ತಿದೆ. ಜನರು ಸಹ ಈ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ.

ಕೊರೊನಾವೈರಸ್ ನಿಂದ ರಕ್ಷಿಸಿಕೊಳ್ಳಲು ಎಂಥಾ ಮಾಸ್ಕ್ ಗಳು ಉತ್ತಮ? ಕೊರೊನಾವೈರಸ್ ನಿಂದ ರಕ್ಷಿಸಿಕೊಳ್ಳಲು ಎಂಥಾ ಮಾಸ್ಕ್ ಗಳು ಉತ್ತಮ?

ಪಾಟ್ನಾದ ಪ್ರಧಾನ ಅಂಚೆ ಕಚೇರಿಯಲ್ಲಿ ಸ್ಯಾನಿಟೈಸ್, ಮಾಸ್ಕ್, ಕಷಾಯದ ಪುಡಿಗಳ ಮಾರಾಟಕ್ಕೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಖಾದಿ, ರೇಷ್ಮೆ ಬಟ್ಟೆಯಿಂದ ಮಾಡಿದ ಒಟ್ಟು 6 ಬಗೆಯ ಮಾಸ್ಕ್‌ಗಳನ್ನು ಈ ಕೌಂಟರ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಕೊರೊನಾ ಭೀತಿಯ ನಡುವೆಯೂ ಬಿಹಾರ ಚುನಾವಣೆ ಸಿದ್ಧತೆ ಕೊರೊನಾ ಭೀತಿಯ ನಡುವೆಯೂ ಬಿಹಾರ ಚುನಾವಣೆ ಸಿದ್ಧತೆ

Patna Post Office Selling Mask Hand Sanitizers

ಅಂಚೆ ಕಚೇರಿಯ ಮಾರಾಟ ವಿಭಾಗದ ವ್ಯವಸ್ಥಾಪಕ ರಂಜಿತ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ನಮ್ಮ ಈ ಪ್ರಯತ್ನಕ್ಕೆ ಜನರು ಬೆಂಬಲ ಚೆನ್ನಾಗಿದೆ. ಜನರು ಮಾಸ್ಕ್, ಸ್ಯಾನಿಟೈಸರ್ ಖರೀದಿಗಾಗಿಯೇ ಕಚೇರಿಗೆ ಬರುತ್ತಿದ್ದಾರೆ" ಎಂದರು.

ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಬಳಸುವ ಸ್ಯಾನಿಟೈಸರ್ ಎಂಥದ್ದು? ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಬಳಸುವ ಸ್ಯಾನಿಟೈಸರ್ ಎಂಥದ್ದು?

"ಅಂಚೆ ಕಚೇರಿಯಲ್ಲಿ 6 ಬಗೆಯ ಮಾಸ್ಕ್‌ಗಳು ಲಭ್ಯವಿದೆ. ಖಾದಿ, ರೇಷ್ಮೆಯಿಂದ ಮಾಡಿದ ಮಾಸ್ಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುವ ಕಷಾಯದ ಪುಡಿಗಳನ್ನು ಮಾರಲಾಗುತ್ತಿದೆ" ಎಂದು ರಂಜಿತ್ ಕುಮಾರ್ ವಿವರಿಸಿದ್ದಾರೆ.

ಬಿಹಾರ ರಾಜ್ಯದಲ್ಲಿ ಕೊರೊನ ವೈರಸ್ ಸೋಂಕಿತರ ಸಂಖ್ಯೆಚ 31,691. ಪಾಟ್ನಾದಲ್ಲಿಯೇ 4,786 ಸೋಂಕಿತರ ಇದ್ದಾರೆ. ರಾಜ್ಯದಲ್ಲಿ ಇದುವರೆಗೂ 212 ಸೋಂಕಿತರು ಮೃತಪಟ್ಟಿದ್ದಾರೆ.

English summary
Patna general post office has set up a counter selling hand sanitizers, masks and immunity boosters. 6 types of masks made of khadi and silk available.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X