ಲಾಲು ಪ್ರಸಾದ್ ಯಾದವ್‌ಗೆ ಮತ್ತೆ ಜಾಮೀನಿಲ್ಲ, ನ.27ಕ್ಕೆ ವಿಚಾರಣೆ ಮುಂದೂಡಿಕೆ
ಪಾಟ್ನಾ, ನವೆಂಬರ್ 10: ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶಕ್ಕೆ ಒಂದು ದಿನ ಮೊದಲು, ಅಂದರೆ ನವೆಂಬರ್ 9 ರಂದು ಲಾಲು ಪ್ರಸಾದ್ ಜೈಲಿನಿಂದ ಬಿಡುಗಡೆಯಾಗಿ ಹೊರಬರುವ ಆರ್‌ಜೆಡಿಯ ನಿರೀಕ್ಷೆ ಹುಸಿಯಾಗಿದೆ.
ಜಾರ್ಖಂಡ್ ಹೈಕೋರ್ಟ್ ಶುಕ್ರವಾರದಂದು ಮೇವಿನ ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್ ತಿಂಗಳ ಅಂತ್ಯದವರೆಗೆ ಮುಂದೂಡಿದೆ.
ಮೇವಿನ ಹಗರಣ ಪ್ರಕರಣದಲ್ಲಿ ಉತ್ತರವನ್ನು ಸಲ್ಲಿಸಲು ಸಿಬಿಐ ಹೆಚ್ಚಿನ ಸಮಯವನ್ನು ಕೋರಿದ್ದರಿಂದ ವಿಚಾರಣೆಯನ್ನು ನ. 27 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಕಳೆದ ಎರಡು ವರ್ಷದಿಂದ ಲಾಲು ಪ್ರಸಾದ್ ಯಾದವ್ ಬಂಧನದಲ್ಲಿದ್ದು, ನಾಲ್ಕು ದಶಕಗಳಲ್ಲಿಯೇ ಮೊದಲ ಬಾರಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ನವೆಂಬರ್ 9 ರಂದು ತಮ್ಮ ತಂದೆ ಜೈಲಿನಿಂದ ಹೊರಬರುತ್ತಾರೆ, ಮತ್ತು ಮರುದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿದಾಯ ಎಂದು ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಚುನಾವಣಾ ಮೆರವಣಿಗೆಗಳಲ್ಲಿ ಹೇಳುತ್ತಿದ್ದರು.
ಈ ಪ್ರಕರಣವು ಡಿಸೆಂಬರ್ 1995 ಮತ್ತು ಜನವರಿ 1996 ರ ನಡುವೆ "ನಕಲಿ ದಾಖಲೆಗಳನ್ನು' ಬಳಸಿಕೊಂಡು ಡುಮ್ಕಾ ಖಜಾನೆಯಿಂದ 3.76 ಕೋಟಿ ರೂ.ಗಳನ್ನು ತೆಗೆದುಕೊಂಡು ಪಶು ಆಹಾರದ ಕಾಲ್ಪನಿಕ ಪೂರೈಕೆಗೆ ಸಂಬಂಧಿಸಿದ್ದಾಗಿದೆ. ಡುಮ್ಕಾ ಖಜಾನೆ ಜಾರ್ಖಂಡ್ ನಲ್ಲಿದ್ದು, ಆದರೆ ಆ ಸಂದರ್ಭದಲ್ಲಿ ಅವಿಭಜಿತ ಬಿಹಾರದ ಭಾಗವಾಗಿತ್ತು.
ತನ್ನ ಏಳು ವರ್ಷಗಳ ಜೈಲು ಶಿಕ್ಷೆಯ ಅರ್ಧಕ್ಕಿಂತ ಹೆಚ್ಚಿನ ಅವಧಿಯನ್ನು ಜೈಲಿನಲ್ಲಿಯೇ ಕಳೆದಿದ್ದಾರೆ ಎಂಬ ಕಾರಣಕ್ಕೆ, ಅಕ್ಟೋಬರ್ 9 ರಂದು, ಚೈಬಾಸ ಖಜಾನೆಯಿಂದ ಅಕ್ರಮವಾಗಿ ಹಣವನ್ನು ವಾಪಸ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಿತ್ತು.
ಶುಕ್ರವಾರದ ವರ್ಚುವಲ್ ವಿಚಾರಣೆಯಲ್ಲಿ, ಲಾಲು ಪ್ರಸಾದ್ ಯಾದವ್ ಪರ ವಕೀಲ ಕಪಿಲ್ ಸಿಬಲ್ ಅವರು, "ಡುಮ್ಕಾ ಪ್ರಕರಣದಲ್ಲಿ 42 ತಿಂಗಳು 26 ದಿನಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದು ಅವರ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಸಮಯವೆಂದು ವಾದಿಸಿದರು.
ಆದರೆ ಈ ವಾದವನ್ನು ಸಿಬಿಐ ಕೋರ್ಟ್ ಇದನ್ನು ಒಪ್ಪಲಿಲ್ಲ ಮತ್ತು ಈ ಆಧಾರದ ಮೇಲೆ ಜಾಮೀನು ನೀಡುವುದನ್ನು ವಿರೋಧಿಸುವುದಾಗಿ ಹೇಳಿತು.












Click it and Unblock the Notifications