ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನ್ ಹೇಳುತ್ತೆ ಇತಿಹಾಸ: ಬಿಹಾರದಲ್ಲಿ ಮತದಾನೋತ್ತರ ಸಮೀಕ್ಷೆ ವರ್ಕೌಟ್ ಆಗುತ್ತಾ?

|
Google Oneindia Kannada News

ಪಾಟ್ನಾ, ನವೆಂಬರ್.07: ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನೇ ಹಾಗೂ ಅಂತಿಮ ಹಂತದ 16 ಜಿಲ್ಲೆಗಳ 78 ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನ ಪ್ರಕ್ರಿಯೆ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಮೂರನೇ ಹಂತದ ಚುನಾವಣಾ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ರಾಷ್ಟ್ರೀಕೃತ ಸುದ್ದಿ ಸಂಸ್ಥೆಗಳು ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ನಡೆಸಿವೆ.

Karnataka By Elections 2020 Live Updates; ಆರ್.ಆರ್ ನಗರ ಶೇ.45.24, ಶಿರಾದಲ್ಲಿ ಶೇ.82.31 ರಷ್ಟು ಮತದಾನKarnataka By Elections 2020 Live Updates; ಆರ್.ಆರ್ ನಗರ ಶೇ.45.24, ಶಿರಾದಲ್ಲಿ ಶೇ.82.31 ರಷ್ಟು ಮತದಾನ

ಶನಿವಾರ ಸಂಜೆ ವೇಳೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷಾ ವರದಿಗಳು ಹೊರ ಬೀಳಲಿವೆ. ಬಿಹಾರದಲ್ಲಿ ಆರ್ ಜೆಡಿ-ಕಾಂಗ್ರೆಸ್ ಮೈತ್ರಿಕೂಟ, ಜೆಡಿಯು-ಬಿಜೆಪಿ-ಎಚ್ಎಎಂ ಮೈತ್ರಿಕೂಟದ ಎನ್ ಡಿಎ ಹಾಗೂ ಲೋಕಜನಶಕ್ತಿ ಪಕ್ಷಗಳ ಭವಿಷ್ಯವನ್ನು ಚುನಾವಣಾ ಸಮೀಕ್ಷೆಗಳ ಮೂಲಕ ವಿಶ್ಲೇಷಿಸಲಾಗುತ್ತದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಕುತೂಹಲಕ್ಕೂ ಮೊದಲು 2015ರಲ್ಲಿ ನಡೆದ ಚುನಾವಣಾ ಫಲಿತಾಂಶ ಹೇಗಿತ್ತು. ಅಂದು ಯಾವ ಪಕ್ಷದ ಎಷ್ಟು ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದರು. ಐದು ವರ್ಷಗಳ ಹಿಂದೆ ರಾಜ್ಯ ರಾಜಕಾರಣದ ಚಿತ್ರಣ ಯಾವ ರೀತಿಯಾಗಿತ್ತು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಮತದಾರರ ಅಭಿಪ್ರಾಯದ ಮೇಲೆ ಸಮೀಕ್ಷಾ ವರದಿ

ಮತದಾರರ ಅಭಿಪ್ರಾಯದ ಮೇಲೆ ಸಮೀಕ್ಷಾ ವರದಿ

ಬಿಹಾರ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಮಾಡಿದ ಮತದಾರರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗುತ್ತಿದೆ. ಜನಾಭಿಪ್ರಾಯದ ಮೇಲೆ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಮತದಾನದ ಮೊದಲು ಸಾರ್ವಜನಿಕ ಅಭಿಪ್ರಾಯ ಖಚಿತಪಡಿಸಿಕೊಳ್ಳಲು ಮಾಹಿತಿ ಸಂಗ್ರಹಿಸಲಾಗುತ್ತದೆ. ಮತದಾನಕ್ಕೂ ಮೊದಲು ಚುನಾವಣಾಪೂರ್ವ ಸಮೀಕ್ಷೆ ನಡೆಯುತ್ತದೆ. ಈ ವೇಳೆ ಅಭಿಪ್ರಾಯ ಸಂಗ್ರಹಿಸುತ್ತಿರುವ ಸಂದರ್ಭದಲ್ಲಿ ಯಾರನ್ನು ಆಯ್ಕೆ ಮಾಡಲು ಬಯಸುತ್ತೀರಿ ಎಂದು ಪ್ರಶ್ನಿಸಲಾಗುತ್ತದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಯಾರಿಗೆ ಮತದಾನ ಮಾಡಿರಬಹುದು ಎನ್ನುವುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

2015ರಲ್ಲಿ ಬಿಹಾರ ಚುನಾವಣಾ ಸಮೀಕ್ಷಾ ಫಲಿತಾಂಶ?

2015ರಲ್ಲಿ ಬಿಹಾರ ಚುನಾವಣಾ ಸಮೀಕ್ಷಾ ಫಲಿತಾಂಶ?

ಕಳೆದ 2015ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಲವು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದವು. ಈ ಹಿಂದಿನ ಚುನಾವಣೋತ್ತರ ಸಮೀಕ್ಷೆ ಸುಳ್ಳು ಎನಿಸಿತ್ತು. ಸಮೀಕ್ಷಾ ವರದಿ ಮತ್ತು ಅಧಿಕೃತ ಫಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸಗಳಿದ್ದವು. 2015 ರಲ್ಲಿ ಆಕ್ಸಿಸ್ ಎಪಿಎಂ ಹೊರತುಪಡಿಸಿ ಎಲ್ಲಾ ಸಮೀಕ್ಷೆಗಳು ಮಹಾಘಟಬಂಧನ್ ವಿರುದ್ಧವಾಗಿದ್ದವು. ಅಂದಿನ ಜೆಡಿಯು, ಆರ್ ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕಾರ ದಕ್ಕುವುದು ಕಷ್ಟಸಾಧ್ಯ ಎಂದು ಹೇಳಿದ್ದವು. ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಹೆಚ್ಚು ಮತಗಳು ಸಿಗುತ್ತವೆ ಎಂದು ಅಂದಾಜಿಸಿದ್ದವು.

Video: ಮುಜಾಫರ್ ಪುರ್ ನಲ್ಲಿ ಮತಗಟ್ಟೆಗಳಿಗೆ ಸ್ಯಾನಿಟೈಸರ್ ಸಿಂಪಡಣೆVideo: ಮುಜಾಫರ್ ಪುರ್ ನಲ್ಲಿ ಮತಗಟ್ಟೆಗಳಿಗೆ ಸ್ಯಾನಿಟೈಸರ್ ಸಿಂಪಡಣೆ

ಫಲಿತಾಂಶದ ಬಗ್ಗೆ ಆಕ್ಸಿಸ್ ಎಪಿಎಂ ನಿಖರ ಸಮೀಕ್ಷೆ

ಫಲಿತಾಂಶದ ಬಗ್ಗೆ ಆಕ್ಸಿಸ್ ಎಪಿಎಂ ನಿಖರ ಸಮೀಕ್ಷೆ

ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಂದಾಗ 243 ಕ್ಷೇತ್ರಗಳ ಪೈಕಿ ಮಹಾಘಟಬಂಧನ್ ಮೈತ್ರಿಕೂಟವು 180 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಆಕ್ಸಿಸ್ ಎಪಿಎಂ ಸಮೀಕ್ಷೆಯು ಈ ಬಗ್ಗೆ ನಿಖರ ಸಮೀಕ್ಷಾ ಫಲಿತಾಂಶವನ್ನು ನೀಡಿತ್ತು. ಮಹಾಘಟಬಂಧನ್ ಮೈತ್ರಿಕೂಟವು 169-183 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ. ಎನ್ ಡಿಎ ಮೈತ್ರಿಕೂಟವು 58 ರಿಂದ 70 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದಿತ್ತು.

ಟುಡೇಸ್ ಚಾಣಕ್ಯ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಬಹುಮತ ಬರಲಿದೆ ಎಂದು ಹೇಳಲಾಗಿತ್ತು. ಎನ್ ಡಿಎಗೆ 144 ರಿಂದ 166 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಇನ್ನೊಂದು ಕಡೆಯಲ್ಲಿ ಎನ್ ಡಿಟಿವಿ, ಇಂಡಿಯಾ ಟುಡೇ ಸಂಸ್ಥೆಗಳು ಕೂಡಾ ಎನ್ ಡಿಎ ಮೈತ್ರಿಕೂಟಕ್ಕೆ ಅಧಿಕಾರ ಗದ್ದುಗೆ ಒಲಿಯಲಿದೆ ಎಂದು ಭವಿಷ್ಯ ನುಡಿದಿದ್ದವು.

ಬಿಹಾರದಲ್ಲಿ 2015ರ ಚುನಾವಣಾ ಫಲಿತಾಂಶ

ಬಿಹಾರದಲ್ಲಿ 2015ರ ಚುನಾವಣಾ ಫಲಿತಾಂಶ

ಕಳೆದ 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ಪಕ್ಷವು 80 ಸ್ಥಾನ ಜಯಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 71 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 27 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಬಿಜೆಪಿ, ಲೋಕಜನಶಕ್ತಿ ಪಕ್ಷ, ಹಿಂದೂಸ್ತಾನ್ ಅವಂ ಮೋರ್ಚಾ ಮತ್ತು ರಾಷ್ಟ್ರೀಯ ಲೋಕಸಮತಾ ಪಕ್ಷಗಳನ್ನೊಳಗೊಂಡ ಎನ್ ಡಿಎ ಮೈತ್ರಿಕೂಟವು 53 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಅಂತಿಮ ಹಂತದಲ್ಲಿ 78 ಕ್ಷೇತ್ರಗಳಲ್ಲಿ ಮತದಾನ

ಅಂತಿಮ ಹಂತದಲ್ಲಿ 78 ಕ್ಷೇತ್ರಗಳಲ್ಲಿ ಮತದಾನ

ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನೇ ಹಾಗೂ ಅಂತಿಮ ಹಂತದಲ್ಲಿ 16 ಜಿಲ್ಲೆಗಳ 78 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಬಾರಿ 2.35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೂರನೇ ಹಂತದ ಚುನಾವಣೆಯ ಕಣದಲ್ಲಿ 382 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 1204 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1094 ಪುರುಷ ಅಭ್ಯರ್ಥಿಗಳಾಗಿದ್ದರೆ, 110 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3ನೇ ಹಂತದಲ್ಲಿ ಒಟ್ಟು 2,35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಈ ಪೈಕಿ 1.23 ಕೋಟಿ ಪುರುಷ ಹಾಗೂ 1.12ರಷ್ಟು ಮಹಿಳಾ ಮತದಾರರಿದ್ದಾರೆ.

3ನೇ ಹಂತದಲ್ಲಿನ ಅಭ್ಯರ್ಥಿಗಳು ಮತ್ತು ಪಕ್ಷಗಳು

3ನೇ ಹಂತದಲ್ಲಿನ ಅಭ್ಯರ್ಥಿಗಳು ಮತ್ತು ಪಕ್ಷಗಳು

ಬಿಹಾರದಲ್ಲಿ ಅಂತಿಮ ಹಂತದ ಚುನಾವಣಾ ಕಣದಲ್ಲಿ ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. 78 ಕ್ಷೇತ್ರಗಳ ಪೈಕಿ ಆರ್ ಜೆಡಿ 46 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, 42 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಲೋಕಜನಶಕ್ತಿ ಪಕ್ಷವು 2ನೇ ಸ್ಥಾನದಲ್ಲಿದೆ. ಜೆಡಿಯು 37, ಬಿಜೆಪಿ 35, ಎನ್ ಸಿಪಿ 31, ಕಾಂಗ್ರೆಸ್ 25, ರಾಷ್ಟ್ರೀಯ ಲೋಕ ಸಮತಾ ಪಕ್ಷ 23, ಬಹುಜನ ಸಮಾಜವಾದಿ ಪಕ್ಷ 19 ಹಾಗೂ ಸಿಪಿಐ ಪಕ್ಷದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದಾರೆ.

English summary
History Of Post Poll Result In Bihar: 2015 Post Poll Prediction About Result And Difference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X