ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತೀಶ್‌ನ ಜೆಡಿಯು ತೊರೆದು ಮಾಜಿ ಶಾಸಕ ಮಹೇಶ್ವರ ಆರ್‌ಜೆಡಿಗೆ ಸೇರ್ಪಡೆ

|
Google Oneindia Kannada News

ಪಾಟ್ನಾ, ಜು. 03: ಮುಖ್ಯಮಂತ್ರಿ ನಿತೀಶ್ ಕುಮಾರ್‌ನ ಜನತಾದಳ ಒಕ್ಕೂಟ ಪಕ್ಷದಿಂದ (ಜೆಡಿಯು) ಎರಡು ಅವಧಿಗೆ ಶಾಸಕರಾಗಿದ್ದ ಮಹೇಶ್ವರ ಸಿಂಗ್ ಈಗ ಜೆಡಿಯು ತೊರೆದು ರಾಷ್ಟ್ರೀಯ ಜನತಾದಳಕ್ಕೆ (ಆರ್‌ಜೆಡಿ) ಇಂದು ಸೇರ್ಪಡೆಯಾಗಿದ್ದಾರೆ.

ಬಿಹಾರದ ಪ್ರತಿಪಕ್ಷದ ನಾಯಕರಾದ, ಸಾಕಷ್ಟು ಒತ್ತಡದ ನಡುವೆಯೂ ಎನ್‌ಡಿಎ ಕೂಟದಿಂದ ಹೊರನಡೆದ ತೇಜಸ್ವಿ ಯಾದವ್‌ ಸಮ್ಮುಖದಲ್ಲಿ ಮಹೇಶ್ವರ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

 ಟಿಎಂಸಿ ಪರ ಪ್ರಚಾರ ಮಾಡದಂತೆ ಆರ್‌ಜೆಡಿ, ಎನ್‌ಸಿಪಿ ಮುಖಂಡರಿಗೆ ಕಾಂಗ್ರೆಸ್ ಪತ್ರ ಟಿಎಂಸಿ ಪರ ಪ್ರಚಾರ ಮಾಡದಂತೆ ಆರ್‌ಜೆಡಿ, ಎನ್‌ಸಿಪಿ ಮುಖಂಡರಿಗೆ ಕಾಂಗ್ರೆಸ್ ಪತ್ರ

ಮಹೇಶ್ವರ ಸಿಂಗ್‌ರನ್ನು ಆರ್‌ಜೆಡಿಗೆ ಸ್ವಾಗತಿಸಿದ ತೇಜಸ್ವಿ ಯಾದವ್, ಜೆಡಿಯು ಮತ್ತು ಬಿಜೆಪಿಯ ಇನ್ನೂ ಅನೇಕ ನಾಯಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್‌ನ ಪಕ್ಷದ ಮತ್ತೊಬ್ಬ ಮಾಜಿ ಶಾಸಕ ಮಂಜಿತ್ ಸಿಂಗ್ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

Former MLA From Nitish Kumars Party Maheshwar Singh Joins RJD

ಮಾಜಿ ಶಾಸಕ ಮಂಜಿತ್ ಸಿಂಗ್ ಇತ್ತೀಚೆಗೆ ಆರ್‌ಜೆಡಿ ನಾಯಕರನ್ನು ಭೇಟಿಯಾಗಿದ್ದು, ಆದರೆ ನಿತೀಶ್ ಕುಮಾರ್‌ ಕರೆ ಮಾಡಿ ಮಾತನಾಡಿದ ಬಳಿಕ ತಾನು ಜೆಡಿಯು ತೊರೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ಈ ಹಿಂದೆ ವರದಿಯಾಗಿದ್ದವು.

"ಈ ಸರ್ಕಾರ ಬೀಳಲಿದೆ ಎಂಬುದು ನನ್ನ ಪ್ರತಿಪಾದನೆಯಲ್ಲ. ನಾವು ಅದನ್ನು ಉರುಳಿಸಬೇಕೆಂಬುದು ರಾಜ್ಯದ ಜನರ ಆಶಯವಾಗಿದೆ. ಕಾರಣ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಮ್ಮ ಪಕ್ಷದ ಮೇಲಿನ ಭಾವುಕತೆ ಆಧಾರದಲ್ಲಿ ಎನ್‌ಡಿಎ ಬಹುಮತ ಪಡೆದಿದೆ," ಎಂದಿದ್ದಾರೆ.

ಮೇವು ಹಗರಣ; ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನುಮೇವು ಹಗರಣ; ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು

ಪಕ್ಷದ 25 ನೇ ಸಂಸ್ಥಾಪನ ದಿನವಾದ ಜುಲೈ 5 ರಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಭಾಷಣ ಮಾಡಲಿದ್ದಾರೆ.

"ಆಯ್ಕೆ ಮಾಡಿದ ಅಧಿಕಾರಿಗಳಿಗೆ ಮುಕ್ತ ಅಧಿಕಾರ ನೀಡುವ ಮೂಲಕ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸುತ್ತಿದೆ," ಎಂದು ತೇಜಸ್ವಿ ಯಾದವ್ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
The Rashtriya Janata Dal (RJD) claimed to have received a shot in the arm today with the induction of Maheshwar Singh, a two-term former MLA from Chief Minister Nitish Kumar's Janata Dal (United), into the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X