ಮುಜಾಫರ್‌ಪುರದಲ್ಲಿ ಉಲ್ಬಣಗೊಂಡ ಮೆದುಳು ಜ್ವರ, 108 ಮಕ್ಕಳು ಸಾವು

ಪಾಟ್ನಾ, ಜೂನ್ 18: ಬಿಹಾರದಲ್ಲಿ ಮೆದುಳು ಜ್ವರ ಅಕ್ಯೂಟ್ ಎನ್ಸೆಫಾಲಿಟೀಸ್ ಸಿಂಡ್ರೋಮ್ ಉಲ್ಬಣಗೊಂಡಿದ್ದು ಒಟ್ಟು 108 ಮಕ್ಕಳು ಮೃತಪಟ್ಟಿದ್ದಾರೆ. ಶ್ರೀ ಕೃಷ್ಣ ಕಾಲೇಜೊಂದರಲ್ಲೇ 83ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು ಸಾವಿನ ಸಂಖ್ಯೆ 108ಕ್ಕೇರಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ಮುಜಾಫರ್​ನಗರ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದರು. ಅನಾರೋಗ್ಯಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಪರಿಣಾಮಕಾರಿಯಾದ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದರಿಂದ ಮೆದುಳು ಜ್ವರ ಬರುತ್ತದೆ. ಅತಿಯಾದ ಜ್ವರ, ದೇಹ ಸೆಳೆತ ಮತ್ತು ತಲೆನೋವು ಈ ರೋಗದ ಲಕ್ಷಣಗಳಾಗಿವೆ. ಇದು ವೈರಲ್​ ಫೀವರ್​ ಆಗಿದೆ.

Death toll rises to 103 in Bihar due to AES

ಬಿಹಾರದಲ್ಲಿ ಒಂದೆಡೆ ಮೆದುಳು ಜ್ವರದಿಂದ ಸತ್ತವರ ಸಂಖ್ಯೆ 108 ಕ್ಕೆ ಏರಿದರೆ, ಮತ್ತೊಂದೆಡೆ ಅತಿಯಾದ ಬಿಸಿಲಿನ ತಾಪಮಾನಕ್ಕೆ ಶನಿವಾರ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಗಯಾ, ಅರುಂಗಾಬಾದ್​, ನಾವಡಾ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಿಂದಾಗಿ ಜನರು ಸಾವನ್ನಪ್ಪಿದ್ದರು. ಅಲ್ಲಿನ ಉಷ್ಣಾಂಶ 48 ಡಿಗ್ರಿ ಸೆಲ್ಸಿಯಸ್​ಗಿಂತ ಅಧಿಕವಾಗಿತ್ತು.

ಬಿಹಾರ ಸಿಎಂ ನಿತೀಶ್​ ಕುಮಾರ್​ ಮೆದುಳು ಜ್ವರದಿಂದ ಸತ್ತವರ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಸಮಸ್ಯೆಯನ್ನು ಎದುರಿಸುವುದು ಹೇಗೆ ಎಂಬ ಅರಿವು ಜನರಲ್ಲಿ ಇಲ್ಲ, ಜಾಗೃತಿಯ ಕೊರತೆಯಿಂದಾಗಿ ರೋಗ ಮತ್ತಷ್ಟು ಉಲ್ಭಣವಾಗುತ್ತಿದೆ ಎಂದು ಸಿಎಂ ನಿತೀಶ್​ ಕುಮಾರ್​ ಹೇಳಿದ್ದರು. ಲಿಚಿ ಹಣ್ಣಿನಲ್ಲಿರುವ ಹಾನಿಕಾರಕ ಅಂಶವೂ ಈ ಜ್ವರಕ್ಕೆ ಒಂದು ಕಾರಣ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+