ಚೌಕೀದಾರ್ ಕಳ್ಳ ಮಾತ್ರ ಅಲ್ಲ, ಹೆದರುಪುಕ್ಕಲ: ರಾಹುಲ್ ಗಾಂಧಿ ವಾಗ್ದಾಳಿ

ಗಯಾ (ಬಿಹಾರ), ಏಪ್ರಿಲ್ 9: ನಾನು ಯಾವಾಗೆಲ್ಲ ಬಡವರಿಗೆ ಹಣ ನೀಡುವ ಮಾತನಾಡುತ್ತೇನೋ ಆಗ ನರೇಂದ್ರ ಮೋದಿ, ಎಲ್ಲಿಂದ ಹಣ ಬರುತ್ತದೆ ಎನ್ನುತ್ತಾರೆ. ನಾನು ಎಲ್ಲಿಂದ ಹಣ ಬರುತ್ತದೆ ಅಂತ ಹೇಳ್ತೀನಿ. ಅದು ಅನಿಲ್ ಅಂಬಾನಿ ಜೇಬಿನಿಂದ ಬರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಬಿಹಾರದ ಗಯಾದಲ್ಲಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೋದಿ ಅವರು ಎರಡು ದೇಶ ಮಾಡಲು ಬಯಸಿದ್ದಾರೆ: ಒಂದು ಅಂಬಾನಿ ಹಾಗೂ ನೀರವ್ ಮೋದಿಗೆ ಮತ್ತು ಇನ್ನೊಂದು ನೀವು ಮತ್ತು ನಮಗೆ. ಈ ಚೌಕೀದಾರ್ ಕಳ್ಳ ಮಾತ್ರ ಅಲ್ಲ, ಹೆದರುಪುಕ್ಕಲ ಕೂಡ. ಈ ಚೌಕೀದಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ನನ್ನೊಂದಿಗೆ ಚರ್ಚೆ ಮಾಡಲು ಕರೆಯುತ್ತೇನೆ. ಅವರಿಗೆ ತಾಕತ್ತಿಲ್ಲ. ಮತ್ತು ಹೆದರಿ ಓಡಿಹೋದರು ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ನರೇಂದ್ರ ಮೋದಿ ಐದು ವರ್ಷ ಸರಕಾರ ನಡೆಸಿದ್ದು ಕೇವಲ ಹದಿನೈದು ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮತ್ತು ನಿರಂತರವಾಗಿ ದೇಶದ ಅತಿ ಶ್ರೀಮಂತರಿಗೆ ಹಣ ನೀಡುತ್ತಾ ಹೋದರು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಹೆಡ್ ಲೈನ್: ಬಡ ಜನರಿಗೆ ಹಣ ನೀಡಲಾಯಿತು ಎಂದಿರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Chowkidar is not only chor, but also a coward, says Rahul Gandhi

ನೋಟು ನಿಷೇಧ ಹಾಗೂ ಜಿಎಸ್ ಟಿಯಿಂದ ಚೌಕೀದಾರ್ ನಿಮ್ಮ ಹಣ ಕಸಿದುಕೊಂಡರು. ಬ್ಯಾಂಕ್ ಗಳ ಕೀಗಳನ್ನು ಅನಿಲ್ ಅಂಬಾನಿಯಂಥ ಕಳ್ಳರ ಕೈಗೆ ಒಪ್ಪಿಸಲಾಯಿತು. ಒಂದು ಸಲ ನಾವು ಅಧಿಕಾರಕ್ಕೆ ಬಂದರೆ ಅನಿಲ್ ಅಂಬಾನಿ ಬಳಿಯಿರುವ ಕೀ ಕಸಿಯುತ್ತೇವೆ ಮತ್ತು ಅದನ್ನು ನೊಂದಿರುವ ಯುವಕರಿಗೆ ನೀಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+