ಬಿಹಾರ: ಎಲ್ಲ 40 ಸೀಟುಗಳಿಗೆ ಎನ್‌ಡಿಎ ಪಟ್ಟಿ ಬಿಡುಗಡೆ, ಶತ್ರುಘ್ನಗೆ ಟಿಕೆಟ್ ಇಲ್ಲ
ಪಟ್ನಾ, ಮಾರ್ಚ್ 23: ಬಿಹಾರದಲ್ಲಿ ಮಹಾಮೈತ್ರಿಕೂಟ 40 ಲೋಕಸಭೆ ಕ್ಷೇತ್ರಗಳಿಗೆ ತನ್ನ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಎನ್‌ಡಿಎ ಕೂಡ ಶನಿವಾರ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಮಾಡಿದೆ.
ಮೋದಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರಿಗೆ ಈ ಬಾರಿ ನಿರೀಕ್ಷೆಯಂತೆಯೇ ಟಿಕೆಟ್ ನಿರಾಕರಿಸಲಾಗಿದೆ. ಸಿನ್ಹಾ ಪ್ರತಿನಿಧಿಸುವ ಪಟ್ನಾ ಸಾಹಿಬ್ ನಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪರ್ಧಿಸಲಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ನಾವಡ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮತ್ತೊಬ್ಬ ಸಚಿವ ಗಿರಿರಾಜ್ ಸಿಂಗ್ ಅವರ ಕ್ಷೇತ್ರವನ್ನು ಬದಲಿಸಲಾಗಿದೆ. ಗಿರಿರಾಜ್ ಅವರು ಬೇಗುಸರೈ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.

ಪಾಟಲಿಪುತ್ರದಿಂದ ರಾಮಕೃಪಾಲ್ ಯಾದವ್, ಆರ್ರಾಹ್ ದಿಂದ ಆರ್‌ಕೆ ಸಿಂಗ್, ಬುಕ್ಸಾರ್‌ನಿಂದ ಅಶ್ವನಿ ಚೌಬೆ, ಪೂರ್ವ ಚಂಪಾರಣದಿಂದ ರಾಧಾ ಮೋಹನ್ ಸಿಂಗ್ ಮತ್ತು ಸರಣ್‌ನಿಂದ ರಾಜೀವ್ ಪ್ರತಾಪ್ ರೂಡಿ ಸ್ಪರ್ಧಿಸಲಿದ್ದಾರೆ.
We are blessed to have @rsprasad as a candidate of Patna saheb. Good decision by BJP to filled Ravi shankar Prasad,we will make sure you win with majority and Patna will see a makeshifts under your leadership @narendramodi @AmitShah @BJP4India @BJPBiharState
— Chowkidar Dharm Singh (@bjp_dharm) 23 March 2019
ಎಲ್‌ಜೆಪಿಯ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರ ಮಗ ಚಿರಾಗ್ ಪಾಸ್ವಾನ್ ಅವರು ಜಮುಯಿ ಕ್ಷೇತ್ರದಿಂದ ಮತ್ತು ನಾವಡ ಕ್ಷೇತ್ರದಿಂದ ಚಂದನ್ ಕುಮಾರ್ ಸ್ಪರ್ಧಿಸಲಿದ್ದಾರೆ.
ಬಿಜೆಪಿ ಮತ್ತು ಜೆಡಿಯು ಮಿತ್ರಪಕ್ಷಗಳು ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಉಳಿದ ಆರು ಕ್ಷೇತ್ರಗಳಲ್ಲಿ ಎಲ್‌ಜೆಪಿ ಅಭ್ಯರ್ಥಿಗಳನ್ನು ಇಳಿಸಲಿದೆ.












Click it and Unblock the Notifications